Last Updated:
ಐಪಿಎಲ್‌ನಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರದ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ವೈಭವ್ ಸೂರ್ಯವಂಶಿ (Vaibhav Suryavsnshi) ಇಂಡಿಯನ್ ಪ್ರೀಮಿಯರ್ ಲೀಗ್-2025ರಿಂದ (IPL 2025) ಜಗತ್ತಿನಾದ್ಯಂತ ಅತೀ ಹೆಚ್ಚು ಚರ್ಚೆಯಲ್ಲಿರುವ ಹೆಸರು. ಐಪಿಎಲ್ ಆಕ್ಷನ್‌ನಿಂದಲೇ ಅವರ ಹೆಸರು ಮುನ್ನಲೆಗೆ ಬಂದಿತು. ಅದಾದ ಬಳಿಕ ರಾಜಸ್ಥಾನ ರಾಯಲ್ಸ್ ಪರ ಪ್ಲೇಯಿಂಗ್ XI ನಲ್ಲಿ ಅವಕಾಶ ಪಡೆದು ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಆರ್ಭಟ ಆರಂಭಿಸಿದರು. ಅದಾದ ಬಳಿಕ ಅವರು ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರದ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳನ್ನು (World Wide Fans) ಹೊಂದಿದ್ದಾರೆ.
ಸದ್ಯ ವಿಶ್ವ ಕ್ರಿಕೆಟ್‌ನ ಸೆನ್ಸೇಶನ್ ಸ್ಟಾರ್ ವೈಭವ್ ಸೂರ್ಯವಂಶಿ. ಸದ್ಯ, ಐಪಿಎಲ್ ಬಳಿಕ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಅಂಡರ್-19 ಸರಣಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್‌ಗಾಗಿ ಈಗಾಗಲೇ ಅಭಿಮಾನಿಗಳ ಫೇವರಿಟ್ ಆಗಿದ್ದಾರೆ. ಅಷ್ಟೇ ಅಲ್ಲ ಅವರ ಮೇಲಿನ ಅಭಿಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. 14 ವರ್ಷದ ಈ ಸ್ಟೈಲಿಶ್ ಎಡಗೈ ಬ್ಯಾಟ್ಸ್‌ಮನ್ ಈಗಾಗಲೇ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಮತ್ತು ಅತಿ ವೇಗದ ಭಾರತೀಯ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂಡರ್ 19 ಕ್ರಿಕೆಟ್‌ನಲ್ಲೂ ಅಬ್ಬರಿಸಿದ ಅವರು, 52 ಎಸೆತಗಳಲ್ಲಿ ಶತಕ ಸಿಡಿಸಿ ಯುವ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕದ ದಾಖಲೆಯನ್ನು ಸ್ಥಾಪಿಸಿದರು. ಇದಕ್ಕೂ ಮೊದಲು ಸರ್ಫರಾಜ್ ಖಾನ್ ಅವರ ದಶಕದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
Proof why we have the best fans 🫡
🚗 Drove for 6 hours to Worcester
👚 Wore their Pink
🇮🇳 Cheered for Vaibhav & Team IndiaAanya and Rivaa, as old as Vaibhav himself, had a day to remember 💗 pic.twitter.com/9XnxswYalE
— Rajasthan Royals (@rajasthanroyals) July 9, 2025
ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ ಅಂಡರ್ 19 ತಂಡ 3-2 ಅಂತರದ ಗೆಲುವು ದಾಖಲಿಸುವಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಜುಲೈ 12 ರಂದು ಬೆಕೆನ್‌ಹ್ಯಾಮ್‌ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗುವ ಯೂತ್ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಎರಡು ಪಂದ್ಯಗಳ ಯೂತ್ ಟೆಸ್ಟ್ ಸರಣಿ ಆರಂಭವಾಗುವ ಮೊದಲೇ, ಸೂರ್ಯವಂಶಿ ಮತ್ತೆ ಗಮನ ಸೆಳೆಯುತ್ತಿದ್ದಾರೆ.
ಬಿಹಾರ ಮೂಲಕ ಕ್ರಿಕೆಟಿಗನಿಗೆ ಎಷ್ಟೊಂದು ಫ್ಯಾನ್ಸ್ ಕ್ರೇಜ್ ಇದೆಯೆಂದರೆ ನೀವು ಊಹಿಸಿರಲಿಕ್ಕೂ ಇಲ್ಲ. ಅವರ ದೊಡ್ಡ ಅಭಿಮಾನಿಗಳೆಂದು ಹೇಳಿಕೊಳ್ಳುವ ಆನ್ಯಾ ಮತ್ತು ರಿವಾ ಎಂಬ ಇಬ್ಬರು ಯುವತಿಯರು ಅವರನ್ನು ಭೇಟಿಯಾಗಲು ವೋರ್ಸೆಸ್ಟರ್‌ಗೆ 6 ಗಂಟೆಗಳ ಕಾಲ ನಿರಂತರವಾಗಿ ರಸ್ತೆ ಪ್ರಯಾಣವನ್ನು ಮಾಡಿ ಅಂತಿಮವಾಗಿ ಅವರನ್ನು ಭೇಟಿಯಾಗಿದ್ದಾರೆ. ಈ ಘಟನೆಯನ್ನು ಇನ್ನಷ್ಟು ಹೃದಯಸ್ಪರ್ಶಿಯನ್ನಾಗಿ ಮಾಡಿದ್ದು, ಇಬ್ಬರೂ ಹುಡುಗಿಯರು ರಾಜಸ್ಥಾನ ರಾಯಲ್ಸ್‌ನ ಗುಲಾಬಿ ಜೆರ್ಸಿಯನ್ನು ಧರಿಸಿರುವುದು.
ವೈಭವ್ ಅವರ ಐಪಿಎಲ್ ತಂಡವಾಗಿರುವ ರಾಜಸ್ಥಾನ ರಾಯಲ್ಸ್ ತಂಡ ಸೂರ್ಯವಂಶಿ ಭೇಟಿಯ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇಬ್ಬರು ಅಭಿಮಾನಿಗಳು ಸೂರ್ಯವಂಶಿಯನ್ನು ಭೇಟಿಯಾದರು. ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು. ಆ ಮೂಲಕ ಅವರಿಗೆ ಮುಂಬರುವ ಸರಣೀಗೆ ಇನ್ನಷ್ಟು ಹುರಿದುಂಬಿಸಿದ್ದಾರೆ.
July 10, 2025 7:08 PM IST
Vaibhav Suryavanshi: ಜಸ್ಟ್ 14 ವರ್ಷಕ್ಕೆ ಇಷ್ಟೊಂದು ಫ್ಯಾನ್ಸ್ ಕ್ರೇಜ್! ಸೂರ್ಯವಂಶಿ ಭೇಟಿಗಾಗಿ ಬರೋಬ್ಬರಿ 6 ಗಂಟೆ ಕಾರು ಚಲಾಯಿಸಿದ ಯುವತಿಯರು