Vaibhav Suryavanshi: ನಾನು ಆಯ್ಕೆದಾರನಾಗಿದ್ದರೆ ಟಿ-20 ವಿಶ್ವಕಪ್‌ಗೆ ಸಂಜು ಬದಲು ಸೂರ್ಯವಂಶಿಗೆ ಚಾನ್ಸ್ ಕೊಡ್ತಿದ್ದೆ! ಮಾಜಿ ಮುಖ್ಯ ಆಯ್ಕೆದಾರನಿಂದ ಶಾಕಿಂಗ್ ಹೇಳಿಕೆ | Kris Srikkanth selects Vaibhav Suryavanshi for 2026 T20 World Cup | ಕ್ರೀಡೆ

Vaibhav Suryavanshi: ನಾನು ಆಯ್ಕೆದಾರನಾಗಿದ್ದರೆ ಟಿ-20 ವಿಶ್ವಕಪ್‌ಗೆ ಸಂಜು ಬದಲು ಸೂರ್ಯವಂಶಿಗೆ ಚಾನ್ಸ್ ಕೊಡ್ತಿದ್ದೆ! ಮಾಜಿ ಮುಖ್ಯ ಆಯ್ಕೆದಾರನಿಂದ ಶಾಕಿಂಗ್ ಹೇಳಿಕೆ | Kris Srikkanth selects Vaibhav Suryavanshi for 2026 T20 World Cup | ಕ್ರೀಡೆ

Last Updated:

ಸೂರ್ಯವಂಶಿ ಈಗಾಗಲೇ ರಾಜಸ್ಥಾನ ರಾಯಲ್ಸ್‌ನ (ಆರ್‌ಆರ್) ಆರಂಭಿಕ ಆಟಗಾರನಾಗಿ ತಮ್ಮ ತಮ್ಮ ಸಮರ್ಥ್ಯ ಸಾಬೀತುಪಡಿಸಿದ್ದಾರೆ. ವೈಭವ್ ತಮ್ಮ ಫಾರ್ಮ್ ಅನ್ನು ಮುಂದುವರಿಸಿದರೆ ಅವರನ್ನು ಟೀಮ್ ಇಂಡಿಯಾಕ್ಕೆ ಬೇಗನೆ ಸೇರಿಸಿಕೊಳ್ಳಬಹುದು.

ವೈಭವ್ ಸೂರ್ಯವಂಶಿವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಭಾರತದ ಮಾಜಿ ಮುಖ್ಯ ಆಯ್ಕೆದಾರ ಕ್ರಿಸ್ ಶ್ರೀಕಾಂತ್ (C Shrikant) 2026 ರ ಟಿ20 ವಿಶ್ವಕಪ್‌ಗೆ ತಮ್ಮ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸಂಜು ಸ್ಯಾಮ್ಸನ್ (Sanju Samson) ಬದಲಿಗೆ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ಆಯ್ಕೆ ಮಾಡುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಸೂರ್ಯವಂಶಿ ಈಗಾಗಲೇ ರಾಜಸ್ಥಾನ ರಾಯಲ್ಸ್‌ನ (RR) ಆರಂಭಿಕ ಆಟಗಾರನಾಗಿ ತಮ್ಮ ತಮ್ಮ ಸಮರ್ಥ್ಯ ಸಾಬೀತುಪಡಿಸಿದ್ದಾರೆ. ವೈಭವ್ ತಮ್ಮ ಫಾರ್ಮ್ ಅನ್ನು ಮುಂದುವರಿಸಿದರೆ ಅವರನ್ನು ಟೀಮ್ ಇಂಡಿಯಾಕ್ಕೆ ಬೇಗನೆ ಸೇರಿಸಿಕೊಳ್ಳಬಹುದು ಎಂದಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ಇಂಗ್ಲೆಂಡ್ ವಿರುದ್ಧ ಸ್ಯಾಮ್ಸನ್ ಅವರು ಬ್ಯಾಟಿಂಗ್‌ನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಅಲ್ಲಿ ಅವರು, ಐದು ಪಂದ್ಯಗಳಲ್ಲಿ ಕೇವಲ 51 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು. ಗಾಯದಿಂದಾಗಿ ಅವರು ಐಪಿಎಲ್ 2025 ರ ಸಂಪೂರ್ಣ ಸೀಸನ್‌ನಲ್ಲಿ ಆಡಲಿಲ್ಲ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶಾರ್ಟ್ ಬಾಲ್ ಎದುರಿಸಲು ಪರದಾಡಿದ್ದಾರೆ. ನನ್ನ ಪ್ರಕಾರ, ಅವರು ಓಪನರ್ ಆಗುವುದು ಅನುಮಾನ. ನಾನು ಆಯ್ಕೆದಾರನಾಗಿದ್ದರೆ, ಅಭಿಷೇಕ್ ಶರ್ಮಾ ನನ್ನ ನಂಬರ್ 1 ಆಯ್ಕೆಯಾಗುತ್ತಿದ್ದರು. ನಂ. 2 ನಲ್ಲಿ ನಾನು ವೈಭವ್ ಸೂರ್ಯವಂಶಿ ಅಥವಾ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ. ನನ್ನ 15 ಸದಸ್ಯರ ಟಿ20 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಇರುತ್ತಿದ್ದರು. ಅವರು ಅದ್ಭುತವಾಗಿ ಆಡುತ್ತಿದ್ದಾರೆ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಕಷ್ಟಪಟ್ಟರೂ, ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಲಿದ್ದಾರೆ. 2025 ಏಷ್ಯಾ ಕಪ್‌ನಲ್ಲಿ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಟಿ-20ಐ ತಂಡಕ್ಕೆ ಮರಳಿದರೆ ಅವರ ಬ್ಯಾಟಿಂಗ್ ಸ್ಥಾನದಲ್ಲಿ ಬದಲಾವಣೆಯಾಗಬಹುದು.

ವೈಭವ್ ಸೂರ್ಯವಂಶಿ ಯೋಜನೆಯಲ್ಲಿದ್ದಾರೆಯೇ?

ವೈಭವ್ ಸೂರ್ಯವಂಶಿ ಪ್ರಸ್ತುತ ಸ್ಪರ್ಧೆಯಲ್ಲಿಲ್ಲ, ಆದರೆ ಅವರು ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ತುಂಬಾ ಬೇಗನೇ ತಂಡಕ್ಕೆ ಸೇರಿಸಿಕೊಳ್ಳಬಹುದು. ಆರಂಭಿಕ ಬ್ಯಾಟ್ಸ್‌ಮನ್ ಸದ್ಯ ಆಸ್ಟ್ರೇಲಿಯಾ U-19 ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದಾರೆ.

ಸೂರ್ಯವಂಶಿ 5 ಪ್ರಥಮ ದರ್ಜೆ ಪಂದ್ಯಗಳಲ್ಲಿ 100 ರನ್ ಗಳಿಸಿದ್ದಾರೆ. ಅವರು 6 ಲಿಸ್ಟ್ ಎ ಪಂದ್ಯಗಳಲ್ಲಿ 132 ರನ್ ಗಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಕಡಿಮೆ ಅವಧಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ 8 ಪಂದ್ಯಗಳಲ್ಲಿ 265 ರನ್ ಗಳಿಸಿದ್ದಾರೆ. 207.03 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ವೈಭವ್ 26 ಸಿಕ್ಸರ್‌ಗಳು ಮತ್ತು 18 ಬೌಂಡರಿಗಳನ್ನು ಬಾರಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Vaibhav Suryavanshi: ನಾನು ಆಯ್ಕೆದಾರನಾಗಿದ್ದರೆ ಟಿ-20 ವಿಶ್ವಕಪ್‌ಗೆ ಸಂಜು ಬದಲು ಸೂರ್ಯವಂಶಿಗೆ ಚಾನ್ಸ್ ಕೊಡ್ತಿದ್ದೆ! ಮಾಜಿ ಮುಖ್ಯ ಆಯ್ಕೆದಾರನಿಂದ ಶಾಕಿಂಗ್ ಹೇಳಿಕೆ