Video Viral: ಅಪ್ಪನ ಮೊದಲ ಎಸೆತಕ್ಕೆ ಅಮೋಘ ಸಿಕ್ಸರ್ ಬಾರಿಸಿದ ಮಗ! ವಿಡಿಯೋ ನೋಡಿ ಸಖತ್ತಾಗಿದೆ | Mohammad Nabi son Hasan hits six on Nabis first ball video viral

Video Viral: ಅಪ್ಪನ ಮೊದಲ ಎಸೆತಕ್ಕೆ ಅಮೋಘ ಸಿಕ್ಸರ್ ಬಾರಿಸಿದ ಮಗ! ವಿಡಿಯೋ ನೋಡಿ ಸಖತ್ತಾಗಿದೆ | Mohammad Nabi son Hasan hits six on Nabis first ball video viral

Last Updated:

ಪ್ರತಿಷ್ಠಿತ ಕ್ರಿಕೆಟ್ ಲೀಗ್ ಒಂದರಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ವರ್ಷಗಳ ಅನುಭವ ಇರುವ ತಂದೆಯ ಎಸೆದ ಮೊದಲ ಎಸೆತಕ್ಕೆ ಅವರ ಮಗ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.

ನಬಿ ಹಾಗೂ ಅವರ ಮಗನಬಿ ಹಾಗೂ ಅವರ ಮಗ
ನಬಿ ಹಾಗೂ ಅವರ ಮಗ

ಕ್ರಿಕೆಟ್ನಲ್ಲಿ (Cricket) ಪ್ರತಿನಿತ್ಯ ಒಂದೊಂದು ಸ್ವಾರಸ್ಯಕರ ಸಂಗತಿಗಳು ನಡೆಯುತ್ತಿರುತ್ತವೆ. ಭಾರತದಂತಹ ದೇಶದಲ್ಲಿ ಕ್ರಿಕೆಟ್ಅನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ. ಮಾತ್ರವಲ್ಲ, ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯ ಪಟ್ಟಿಯಲ್ಲಿ ಕ್ರಿಕೆಟ್ ಕೂಡ ಒಂದು. ಸದ್ಯ, ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಾ ಇದೆ.

ವಿಡಿಯೋ ಬೇರೆ ಯಾವುದು ಅಲ್ಲ, ತಂದೆ ಎಸೆದ ಮೊದಲ ಎಸೆತಕ್ಕೆ ಅವರ ಮಗ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಮಗ ಸಿಕ್ಸರ್ ಭಾರಿಸಿದ್ದು ಯಾರೋ ಸಾಮಾನ್ಯ ಬೌಲರ್ಗಲ್ಲ. ಬದಲಾಗಿ ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಅಫ್ಘಾನಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ನಬಿ ಅವರ ಬೌಲಿಂಗ್ನಲ್ಲಿ. 40 ವರ್ಷದ ಮೊಹಮ್ಮದ್ ನಬಿ 18 ವರ್ಷಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಆಡುತ್ತಿದ್ದಾರೆ . ಮೊಹಮ್ಮದ್ ನಬಿ 440 ಕ್ಕೂ ಹೆಚ್ಚು ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ.

ಮಾತ್ರವಲ್ಲ, ಮೊಹಮ್ಮದ್ ನಬಿ ಅವರು ವಿಶ್ವದಾದ್ಯಂತ ಸುಮಾರು 40 ತಂಡಗಳ ಪರ ಆಡಿರುವ ದಾಖಲೆ ಹೊಂದಿದ್ದಾರೆ. ಅವರು ಕೊನೆಯ ಬಾರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರವಾಗಿ ಆಡಿದ್ದರು . ಈ ಸಂದರ್ಭದಲ್ಲಿ ಅವರ ಮಗ ಹಸನ್ ಇಶಾಕ್ ಕೂಡ ಇತ್ತೀಚೆಗೆ ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಿದ್ದಾನೆ.

ಈ ಸಂದರ್ಭದಲ್ಲಿ ಐಎನ್ಎಸಿ ಪರ 9ನೇ ಓವರ್ಎಸೆಯಲು ಬಂದ ಮೊಹಮ್ಮದ್ ನಬಿ ಅವರ ಮೊದಲ ಎಸೆತದಲ್ಲೇ, ಅಂದರೆ ನಬಿ ಅವರ ಸ್ಪೆಲ್‌ನ ಮೊದಲ ಎಸೆತದಲ್ಲೇ ಅವರ ಮಗ ಹಸನ್ ಇಶಾಕ್ ಲಾಂಗ್- ಆನ್ ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ತಂದೆಯನ್ನು ಸ್ವಾಗತಿಸಿದರು . ಕುರಿತಾದ ವಿಡಿಯೋವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಸದ್ಯ ವೈರಲ್ ಆಗುತ್ತಿದೆ .​ ​ ಕ್ರಿಕೆಟ್ ಅಭಿಮಾನಿಗಳು ಇಬ್ಬರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ .​​