Vijay Mallya: ಮದ್ಯಕ್ಕಾಗಿ ತಂಡವನ್ನು ಖರೀದಿಸಿದ್ದೀರಾ? RCB ಗಾಗಿ ಕೋಟಿಗಟ್ಟಲೇ ಬಿಡ್‌, ಮದ್ಯದ ದೊರೆ ಶಾಕಿಂಗ್‌ ಹೇಳಿಕೆ!Vijay Mallya Reveals Why He Bought an IPL Team Shocking Truth Shared on Podcast

Vijay Mallya: ಮದ್ಯಕ್ಕಾಗಿ ತಂಡವನ್ನು ಖರೀದಿಸಿದ್ದೀರಾ? RCB ಗಾಗಿ ಕೋಟಿಗಟ್ಟಲೇ ಬಿಡ್‌, ಮದ್ಯದ ದೊರೆ ಶಾಕಿಂಗ್‌ ಹೇಳಿಕೆ!Vijay Mallya Reveals Why He Bought an IPL Team Shocking Truth Shared on Podcast

Last Updated:

Vijay Mallya: ಆರ್‌ಸಿಬಿ 2025 ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ವಿಜಯ್ ಮಲ್ಯ ಈ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಯಾವ ಕಾರಣಕ್ಕೆ ಅಂದು ಐಪಿಎಲ್‌ ತಂಡವನ್ನು ಖರೀದಿ ಮಾಡಿದೆ ಅಂತ ಹೇಳಿದ್ದಾರೆ.

ಆರ್‌ಸಿಬಿ  ತಂಡ, ವಿಜಯ್‌ ಮಲ್ಯಆರ್‌ಸಿಬಿ  ತಂಡ, ವಿಜಯ್‌ ಮಲ್ಯ
ಆರ್‌ಸಿಬಿ ತಂಡ, ವಿಜಯ್‌ ಮಲ್ಯ

ಕೊನೆಗೂ ಕಪ್ ನಮ್ದೇ ಆಗ್ಬಿಡ್ತು! ದಶಕಗಳ ಕನಸು ನನಸಾಗಿದ್ರೂ, ವಿಜಯ್ ಮಲ್ಯ ಅವರ (Vijay Mallya) ಒಂದು ಹೇಳಿಕೆ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. 2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು 6 ರನ್‌ಗಳಿಂದ ಸೋಲಿಸಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಗೆಲುವಿನ ಬಗ್ಗೆ ಹಳೆಯ ಮಾಲೀಕ ವಿಜಯ್ ಮಲ್ಯ ಅವರು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿಯೊಂದನ್ನ ಹೊರಹಾಕಿದ್ದಾರೆ.

ಲಲಿತ್ ಮೋದಿ ಮಾತು ಕೇಳಿ RCB ಖರೀದಿಸಿದ್ನಂತೆ ಮಲ್ಯ!

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್ ಶುರುವಾಗಿದ್ದಾಗ, ತಂಡಗಳನ್ನು ಖರೀದಿಸುವ ಪ್ರಕ್ರಿಯೆ ನಡೀತಿತ್ತು. ಆಗ್ಲೇ ಲಲಿತ್ ಮೋದಿ (ಐಪಿಎಲ್ ಮಾಜಿ ಚೇರ್ಮನ್) ನನ್ನ ಹತ್ರ ಬಂದು “ಒಂದು ತಂಡವನ್ನು ಖರೀದಿಸಿ” ಅಂತ ಹೇಳಿದ್ರಂತೆ. ಲಲಿತ್ ಮೋದಿ ಅವರ ಮಾತುಗಳಿಂದ ಪ್ರಭಾವಿತನಾಗಿ, ನಾನು ಆರ್‌ಸಿಬಿ ಖರೀದಿಸಲು ನಿರ್ಧರಿಸಿದೆ ಅಂತ ಮಲ್ಯ ಹೇಳಿದ್ದಾರೆ.

ಇದೇ ವೇಳೆ, “ನಾನು ಆರ್‌ಸಿಬಿಯನ್ನು ಸುಮಾರು $111.6 ಮಿಲಿಯನ್ (ಸುಮಾರು 476 ಕೋಟಿ ರೂಪಾಯಿ) ಕೊಟ್ಟು ಖರೀದಿಸಿದ್ದೆ. ಆ ಟೈಂನಲ್ಲಿ ಇದು ಎರಡನೇ ಅತಿ ಹೆಚ್ಚು ದುಬಾರಿ ಬಿಡ್ ಆಗಿತ್ತು. ಮುಂಬೈ ಇಂಡಿಯನ್ಸ್ ($111.9 ಮಿಲಿಯನ್) ಗಿಂತ ಸ್ವಲ್ಪ ಕಮ್ಮಿ” ಅಂತ ಮಲ್ಯ ಮಾಹಿತಿ ನೀಡಿದ್ದಾರೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಅಡಿಯಲ್ಲಿ RCB!

ಅದಕ್ಕೂ ಮೊದಲು, ವಿಜಯ್ ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನ ಮಾಲೀಕರಾಗಿದ್ದರು. ಹೀಗಾಗಿಯೇ, ತಂಡಕ್ಕೆ USL ಅಡಿಯಲ್ಲಿ ಜನಪ್ರಿಯ ಮದ್ಯದ ಬ್ರ್ಯಾಂಡ್ ‘ರಾಯಲ್ ಚಾಲೆಂಜ್’ ಹೆಸರನ್ನೇ ಇಡಲಾಯ್ತು. ಆದ್ರೆ, 2016ರಲ್ಲಿ ಕಾನೂನು ಹೋರಾಟದಲ್ಲಿ ವಿಜಯ್ ಮಲ್ಯ ಅವರು USL ತೊರೆದ ಮೇಲೆ, ಆರ್‌ಸಿಬಿಯ ಸಂಪೂರ್ಣ ಹತೋಟಿ ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ಗೆ ಹೋಯಿತು. 2016ರಿಂದ ಮಲ್ಯ ಅವರಿಗೆ ಆರ್‌ಸಿಬಿ ಮೇಲೆ ಯಾವುದೇ ಹಿಡಿತ ಇರ್ಲಿಲ್ಲ. ಆದ್ರೆ, ತಂಡ ತಮ್ಮ ಮೊದಲ ಪ್ರಶಸ್ತಿ ಗೆದ್ದಾಗ ಅವರು ಖಂಡಿತಾ ಖುಷಿಪಟ್ಟಿದ್ದಾರೆ.

ಮಲ್ಯ ಅವರ ಹಳೆಯ ಕನಸು ನನಸು!

18 ವರ್ಷಗಳ ಕಾಯುವಿಕೆಯ ನಂತರ ಟ್ರೋಫಿ ಗೆದ್ದ ತಂಡಕ್ಕೆ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರು ಬರೆದುಕೊಂಡಿದ್ದು, “ನಾನು ಆರ್‌ಸಿಬಿ ಸೇರಿಕೊಂಡಾಗ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬರಬೇಕು ಅನ್ನೋದು ನನ್ನ ಕನಸಾಗಿತ್ತು. ಯುವ ಆಟಗಾರನಾಗಿದ್ದಾಗ ವಿರಾಟ್ ಕೊಹ್ಲಿ ಅವರನ್ನ ಆಯ್ಕೆ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅವರು 18 ವರ್ಷಗಳಿಂದ ಆರ್‌ಸಿಬಿಯಲ್ಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತಿಹಾಸದ ಪ್ರಮುಖ ಭಾಗವಾಗಿರುವ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಅವರನ್ನ ಆಯ್ಕೆ ಮಾಡುವ ಗೌರವ ಕೂಡ ನನಗೆ ಸಿಕ್ಕಿತ್ತು” ಎಂದಿದ್ದಾರೆ.

ಕೊನೆಗೂ ಐಪಿಎಲ್ ಟ್ರೋಫಿ ಬೆಂಗಳೂರಿಗೆ ತಲುಪಿದೆ ಎಂದು ಮಲ್ಯ ಬರೆದಿದ್ದು, “ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು” ಎಂದು ಹೇಳಿದ್ದಾರೆ. ಒಟ್ಟಾರೆ, ಆರ್‌ಸಿಬಿ ಗೆಲುವು ವಿಜಯ್ ಮಲ್ಯರಿಗೂ ಸಂತಸ ತಂದಿದ್ದು, ಅವರ ಹಳೆಯ ನೆನಪುಗಳನ್ನು ಮರುಕಳಿಸಿದೆ.