Viral Video: ಕ್ರೀಸ್ ಮಧ್ಯೆ ಡಿಕ್ಕಿ ಹೊಡೆದುಕೊಂಡು ಬಿದ್ದ ಇಬ್ಬರು ಬ್ಯಾಟರ್ಸ್: ಮೂರು ಅವಕಾಶ ಸಿಕ್ರೂ ರನೌಟ್ ಮಿಸ್, ಕ್ರಿಕೆಟ್‌ನಲ್ಲಿ ನೀವು ನೋಡಿರದ ದೃಶ್ಯ | Maharashtra Premier League Kolhapur Team Hilarious Run Out Miss video Goes Viral

Viral Video: ಕ್ರೀಸ್ ಮಧ್ಯೆ ಡಿಕ್ಕಿ ಹೊಡೆದುಕೊಂಡು ಬಿದ್ದ ಇಬ್ಬರು ಬ್ಯಾಟರ್ಸ್: ಮೂರು ಅವಕಾಶ ಸಿಕ್ರೂ ರನೌಟ್ ಮಿಸ್, ಕ್ರಿಕೆಟ್‌ನಲ್ಲಿ ನೀವು ನೋಡಿರದ ದೃಶ್ಯ | Maharashtra Premier League Kolhapur Team Hilarious Run Out Miss video Goes Viral

Last Updated:

ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) ನಡೆಯುತ್ತಿದೆ. ಈ ಟೂರ್ನಿಯಲ್ಲಿ ಪಂದ್ಯ ಒಂದರ ನಡುವೆ ವಿಚಿತ್ರ ಸನ್ನಿವೇಶವೊಂದು ಸಂಭವಿಸಿದ್ದು, ಈ ಘಟನೆಯನ್ನು ನೀವು ಕ್ರಿಕೆಟ್‌ನಲ್ಲಿ ಅತ್ಯಂತ ವಿರಳ ಸಂದರ್ಭದಲ್ಲಿ ಮಾತ್ರ ನೋಡಿರಲು ಸಾಧ್ಯ.

ಎಂಪಿಎಲ್‌ನಲ್ಲಿ ನಡೆದ ವಿಚಿತ್ರ ಘಟನೆಎಂಪಿಎಲ್‌ನಲ್ಲಿ ನಡೆದ ವಿಚಿತ್ರ ಘಟನೆ
ಎಂಪಿಎಲ್‌ನಲ್ಲಿ ನಡೆದ ವಿಚಿತ್ರ ಘಟನೆ

ಭಾರತದಂತಹ ದೇಶದಲ್ಲಿ ಕ್ರಿಕೆಟ್ (Cricket) ಅನ್ನು ಒಂದು ಧರ್ಮವಾಗಿ ಪ್ರೀತಿಸುತ್ತಾರೆ. ಇಲ್ಲಿ ಸದಾ ಕಾಲವು ಒಂದಿಲ್ಲ ಒಂದು ಟೂರ್ನಿಗಳು ನಡೆಯುತ್ತಿರುವುದ್ನು ಕಾಣಬಹುದು ಇತ್ತೀಚೆಗೆ ತಾನೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಕ್ತಾಯಗೊಂಡಿದ್ದು, ಸದ್ಯ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) ನಡೆಯುತ್ತಿದೆ. ಈ ಟೂರ್ನಿಯಲ್ಲಿ ಪಂದ್ಯ ಒಂದರ ನಡುವೆ ವಿಚಿತ್ರ ಸನ್ನಿವೇಶವೊಂದು ಸಂಭವಿಸಿದ್ದು, ಈ ಘಟನೆಯನ್ನು ನೀವು ಕ್ರಿಕೆಟ್‌ನಲ್ಲಿ ಅತ್ಯಂತ ವಿರಳ ಸಂದರ್ಭದಲ್ಲಿ ಮಾತ್ರ ನೋಡಿರಲು ಸಾಧ್ಯ. ಹಾಗಿದ್ರೆ ಏನದು ಎಂದು ನೋಡೋಣ ಬನ್ನಿ.

ರಾಯಗಡ್ ರಾಯಲ್ಸ್ ತಂಡವು ಕೊಲ್ಹಾಪುರ ಟಸ್ಕರ್ಸ್ ವಿರುದ್ಧ 6 ವಿಕೆಟ್‌ಗಳಿಂದ ಜಯಗಳಿಸಿತು. ನಿರ್ಣಾಯಕ ಪಂದ್ಯದಲ್ಲಿ ಕೊಲ್ಹಾಪುರ ತಂಡವು ಮೈದಾನದಲ್ಲಿ ಸುಲಭದ ರನ್-ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ರಾಯಗಢ ತಂಡದ ಬ್ಯಾಟ್ಸ್‌ಮನ್‌ ಬಾಲ್ ಅನ್ನು ನಿಧಾನವಾಗಿ ಪುಶ್ ಮಾಡಿ ರನ್ ಕದಿಯಲು ಯತ್ನಿಸಿದರು. ಒಂದು ರನ್ ಅನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದ್ರೆ, ಎರಡು ರನ್ ಓಡುವಾಗ ಇಬ್ಬರು ಬ್ಯಾಟ್ಸ್‌ಮನ್‌ಗಳು ಡಿಕ್ಕಿ ಹೊಡೆದುಕೊಂಡು ನೆಲಕ್ಕೆ ಬೀಳುತ್ತಾರೆ.

ಆ ಸಂದರ್ಭದಲ್ಲಿ ಫೀಲ್ಡರ್ ಬಾಲ್ ಅನ್ನು ನಾನ್ ಸ್ಟ್ರೈಕರ್ ಎಂಡ್‌ಗೆ ಎಸೆಯುತ್ತಾರೆ. ಆದ್ರೆ, ಆ ಸಂದರ್ಭದಲ್ಲಿ ವಿಕೆಟ್ ಕೀಪರ್ ಬಾಲ್ ಅನ್ನು ಸ್ಟಂಪ್‌ಗೆ ಮುಟ್ಟಿಸದೇ ವಿಕೆಟ್ ಕೀಪರ್ ಕಡೆಗೆ ಎಸೆಯುತ್ತಾನೆ. ಅಷ್ಟರಲ್ಲಾಗಲೆ ಬ್ಯಾಟರ್ ಸ್ಟ್ರೈಕರ್ ಕಡೆ ಓಡಿ ಕ್ರೀಸ್ ಮುಟ್ಟಿರುತ್ತಾನೆ.

ಆದ್ರೆ, ಇನ್ನೊಬ್ಬ ಬ್ಯಾಟರ್ ಇನ್ನೂ ಕೂಡ ನೆಲದಲ್ಲೇ ಬಿದ್ದಿರುವುದನ್ನು ಗಮನಿಸಿದ ರಾಹುಲ್ ತ್ರಿಪಾಟಿ ಬಾಲ್ ಹಿಡಿದುಕೊಂಡು ನಾನ್ ಸ್ಟ್ರೈಕರ್ ಕಡೆ ಓಡುತ್ತಾರೆ. ಆದ್ರೆ, ವಿಕೆಟ್ ಹತ್ತಿರ ಹೋಗುತ್ತಿದ್ದಾಗ ಬಾಲ್ ಅನ್ನು ವಿಕೆಟ್‌ ಕಡೆಗೆ ಜೋರಾಗಿ ಹೊಡೆಯುತ್ತಾರೆ. ಆದ್ರೆ, ಅಲ್ಲಿ ಕೂಡ ಬಾಲ್ ಅನ್ನು ವಿಕೆಟ್‌ಗೆ ತಾಗಿಸಲು ಆಗದೆ ಬ್ಯಾಟರ್ಸ್ ಸೇಫ್ ಆಗುತ್ತಾರೆ. ಒಟ್ಟು ಮೂರು ಬಾರಿ ಅವಕಾಶ ಸಿಕ್ಕರು ಕೂಡ ಎರಡೂ ಕಡೆ ವಿಕೆಟ್ ಪಡೆಯುವ ಅವಕಾಶ ಇದ್ದಾಗಲೂ ಕೂಡ ಒಬ್ಬರನ್ನೂ ಔಟ್ ಮಾಡಲಾಗದೆ ಕೊಲ್ಹಾಪುರ ಆಟಗಾರರು ನಿರಾಸೆ ಒಳಗಾಗಿದ್ದನ್ನು ಕಾಣಬಹುದಾಗಿದೆ.

ಈ ಹಾಸ್ಯಾಸ್ಪದ ರನೌಟ್ ಮಿಸ್ ಆದ ಬಳಿಕ ಬ್ಯಾಟರ್ ಓಸ್ವಾಲ್ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಾರೆ. 54 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ರಾಯ್ಗಡ್ ರಾಯಲ್ಸ್ ತಂಡಕ್ಕೆ ನಾಟಕೀಯ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ, ರಾಯಲ್ಸ್ ತಂಡವು ಕ್ವಾಲಿಫೈಯರ್ 2 ಕ್ಕೆ ಪ್ರವೇಶ ಪಡೆದುಕೊಳ್ಳುತ್ತದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Viral Video: ಕ್ರೀಸ್ ಮಧ್ಯೆ ಡಿಕ್ಕಿ ಹೊಡೆದುಕೊಂಡು ಬಿದ್ದ ಇಬ್ಬರು ಬ್ಯಾಟರ್ಸ್: ಮೂರು ಅವಕಾಶ ಸಿಕ್ರೂ ರನೌಟ್ ಮಿಸ್, ಕ್ರಿಕೆಟ್‌ನಲ್ಲಿ ನೀವು ನೋಡಿರದ ದೃಶ್ಯ