Last Updated:
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಥಿಷ ಪತಿರಾನ ಅದ್ಭುತ ಕ್ಯಾಚ್ ಹಿಡಿದು ವೈರಲ್ ಆಗಿದ್ದಾರೆ. ರಾಜಸ್ಥಾನ 182 ರನ್ ಗಳಿಸಿತು.
ಐಪಿಎಲ್ನಲ್ಲಿ ಇಂದು (ಮಾರ್ಚ್ 30) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳದುಕೊಂಡು 182 ರನ್ ಕಲೆಹಾಕಿತು. ಈ ಪಂದ್ಯದ ನಡುವೆ ಚೆನ್ನೈನ ಮತೀಶ ಪತಿರಾಣ (Matheesha Patirana) ಹಿಡಿದ ಕ್ಯಾಚ್ ಒಂದು ಸಖತ್ ವೈರಲ್ ಆಗ್ತಾ ಇದೆ.
ಪರಿರಾಣ ಕ್ಯಾಚ್ ವೈರಲ್
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಮಥಿಷ ಪತಿರಾನ ಅದ್ಭುತ ಕ್ಯಾಚ್ ಹಿಡಿದರು. ಪತಿರಾಣ ಹಿಡಿದ ಫ್ಲೈಯಿಂಗ್ ಕ್ಯಾಚ್ ನೋಡಿದ್ರೆ ನೀವು ಗ್ಲೆನ್ ಫಿಲಿಪ್ಸ್ ಅವರನ್ನು ಮರೆತುಬಿಡುತ್ತೀರಿ. ಸದ್ಯ ಪತಿರಾಣ ಅವರು ಹಿಡಿದ ಕ್ಯಾಚ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗ್ತಾ ಇದೆ.
What a catch by M. Pathirana
Noor got #2 #csk #noor #Yellove pic.twitter.com/qXLbbN3DHo
— Arv (@Arv922137579481) March 30, 2025
ಧ್ರುವ್ ಜುರೆಲ್ ಕ್ಯಾಚ್ ಹಿಡಿದ ಪತಿರಾಣ
ಚೆನ್ನೈ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ 14 ನೇ ಓವರ್ ಬೌಲಿಂಗ್ ಮಾಡಲು ಬಂದರು. ಈ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಪತನವಾಯಿತು. ನೂರ್ ಅಹ್ಮದ್ ಎಸೆದ ಈ ಚೆಂಡನ್ನು ಜುರೆಲ್ ಶಾಟ್ ಹೊಡೆಯಲು ಮುಂದಾಗುತ್ತಾರೆ. ಆದ್ರೆ, ಬಾಲ್ ಹೊಡೆದ ಕಡೆ ಹೋಗದೆ ಪಾಯಿಂಟ್ನಲ್ಲಿ ನಿಂತಿದ್ದ ಪತಿರಾಣಾ ಕಡೆಗೆ ಹೋಗುತ್ತದೆ. ಈ ವೇಳೆ ಪತಿರಾಣ ಗಾಳಿಯಲ್ಲಿ ಜಿಗಿದು ಕ್ಯಾಚ್ ಪಡೆದುಕೊಳ್ಳತ್ತಾರೆ. ಈ ಕ್ಯಾಚ್ ನೋಡಿದ ಅಭಿಮಾನಿಗಳು ಒಂದು ಕ್ಷಣ ಮೂಕವಿಸ್ಮಿತರಾಗುತ್ತಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರಾಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಋತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜ, ಎಂಎಸ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜೇಮೀ ಓವರ್ಟನ್, ನೂರ್ ಅಹ್ಮದ್, ಮಥಿಶಾ ಪತಿರಾನ, ಖಲೀಲ್ ಅಹ್ಮದ್.
ರಾಜಸ್ಥಾನ್ ರಾಯಲ್ಸ್ ತಂಡ 11: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಾಯೆರ್, ವನಿಂದು ಹಸ್ರಂಗ, ಜೋಫ್ರಾ ಆರ್ಚರ್, ಮಹೀಶ್ ತಿಕ್ಷಾನ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
March 30, 2025 10:08 PM IST