Viral Video: ಬೇರೆ ಹುಡುಗಿ ಜೊತೆ ಆತ್ಮೀಯವಾಗಿ ಮಾತಾಡ್ತಿದ್ದ ಗಿಲ್! ಕದ್ದುಕದ್ದು ನೋಡಿದ ಸಾರಾ, ವಿಡಿಯೋ ವೈರಲ್ | Shubman Gill and Sara tendulkar dating rumor in social media now viral a new video

Viral Video: ಬೇರೆ ಹುಡುಗಿ ಜೊತೆ ಆತ್ಮೀಯವಾಗಿ ಮಾತಾಡ್ತಿದ್ದ ಗಿಲ್! ಕದ್ದುಕದ್ದು ನೋಡಿದ ಸಾರಾ, ವಿಡಿಯೋ ವೈರಲ್ | Shubman Gill and Sara tendulkar dating rumor in social media now viral a new video

Last Updated:

ಕಳೆದ ಕೆಲವು ವರ್ಷಗಳಿಂದ ಗಿಲ್ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಈ ನಡುವೆ ಇಬ್ಬರ ಕುರಿತಾದ ಹೊಸ ವಿಡಿಯೋ ವೈರಲ್ ಆಗಿದೆ.

ಶುಭ್‌ಮನ್ ಗಿಲ್ಶುಭ್‌ಮನ್ ಗಿಲ್
ಶುಭ್‌ಮನ್ ಗಿಲ್

ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಗಾಗಿ (Tendulkar-Anderson) ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು (Team India) ನಾಯಕನಾಗಿ ಶುಭ್ಮನ್ ಗಿಲ್ (Shubhman Gill) ಆಯ್ಕೆಯಾಗಿದ್ದಾರೆ. ಮಾತ್ರವಲ್ಲ, ಅವರು ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ ಅತ್ಯದಿಕ ರನ್ ಸಿಡಿಸಿದ ಆಟಗಾರನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲ, ಕಳೆದ ಕೆಲವು ವರ್ಷಗಳಿಂದ ಗಿಲ್ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ.

ಇತ್ತ ಲಂಡನ್‌ನಲ್ಲಿ ನಡೆದ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಕಾಣಿಸಿಕೊಂಡಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಆಯಾಮದ ಚರ್ಚೆ ಆರಂಭವಾಗಿದೆ. ಕಳೆದ ವಾರ ಲಂಡನ್‌ನಲ್ಲಿ ನಡೆದ ಲಾರ್ಡ್ಸ್ ಟೆಸ್ಟ್‌ಗೆ ಮುಂಚಿತವಾಗಿ, ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಪ್ರತಿಷ್ಠಾನ ‘ಯೂವೀಕ್ಯಾನ್’ ಗಾಗಿ ಚಾರಿಟಿ ಡಿನ್ನರ್ ಆಯೋಜಿಸಿದ್ದರು.

ಯುವರಾಜ್ ಸಿಂಗ್ ಅವರ ಚಾರಿಟಿ ಡಿನ್ನರ್‌ಗೆ ಆಹ್ವಾನಿತರಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಸೇರಿದಂತೆ ಇಡೀ ಭಾರತೀಯ ಟೆಸ್ಟ್ ತಂಡವಿತ್ತು. ವೇಳೆ ಭಾರತದ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ತೆಂಡೂಲ್ಕರ್ ಸೇರಿದಂತೆ ಅವರ ಕುಟುಂಬವನ್ನು ಸಹ ಆಹ್ವಾನಿಸಿದ್ದರು.

ವಿಡಿಯೋ ಒಂದರಲ್ಲಿ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಅವರನ್ನು ನೋಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದ್ರೆ, ಅದೇ ಕಾರ್ಯಕ್ರಮದ ಮತ್ತೊಂದು ಕ್ಲಿಪ್ ಈಗ ವೈರಲ್ ಆಗುತ್ತಿದೆ. ಅದರಲ್ಲಿ ಶುಭಮನ್ ಗಿಲ್ ಸಾರಾ ಹೊರತುಪಡಿಸಿ ಬೇರೊಬ್ಬ ಹುಡುಗಿಯ ಜೊತೆ ಮಾತನಾಡುತ್ತಿದ್ದಾರೆ ಮತ್ತು ಸಾರಾ ತೆಂಡೂಲ್ಕರ್ ಗಿಲ್ ಅವರನ್ನು ದಿಟ್ಟಿಸಿ ನೋಡುತ್ತಿರುವುದನ್ನು ಕಾಣಬಹುದು.

ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಂದಿಗೂ ದೃಢಪಡಿಸಿಲ್ಲ. ಅದಾಗ್ಯೂ, ಗಿಲ್ ಮತ್ತು ಸಾರಾ ತೆಂಡೂಲ್ಕರ್ ಇಬ್ಬರೂ ಇಲ್ಲಿಯವರೆಗೆ ಬೇರೆಯವರೊಂದಿಗೆ ಡೇಟಿಂಗ್ ಮಾಡುವುದನ್ನು ನೋಡಿಲ್ಲ. ರವೀಂದ್ರ ಜಡೇಜಾ ಅವರು ಸಾರಾ ತೆಂಡೂಲ್ಕರ್ ಬಗ್ಗೆ ಶುಭಮನ್ ಗಿಲ್ ಅವರನ್ನು ಕೀಟಲೆ ಮಾಡುತ್ತಿರುವುದು ಕಂಡುಬಂದಿದೆ.