Viral Video: ಲಂಡನ್ ಬೀದಿಯಲ್ಲಿ ವಿರುಷ್ಕಾ ದಂಪತಿ ಫುಲ್ ಜಾಲಿ-ಜಾಲಿ; ಹೇಗಿದ್ದಾರೆ ನೋಡಿ ನಿಮ್ಮ ಫೇವರಿಟ್ ಸ್ಟಾರ್ |Virat Kohli Test and T20 Retirement now he enjoy his personal life with Anushka sharma in London | ಕ್ರೀಡೆ

Viral Video: ಲಂಡನ್ ಬೀದಿಯಲ್ಲಿ ವಿರುಷ್ಕಾ ದಂಪತಿ ಫುಲ್ ಜಾಲಿ-ಜಾಲಿ; ಹೇಗಿದ್ದಾರೆ ನೋಡಿ ನಿಮ್ಮ ಫೇವರಿಟ್ ಸ್ಟಾರ್ |Virat Kohli Test and T20 Retirement now he enjoy his personal life with Anushka sharma in London | ಕ್ರೀಡೆ

Last Updated:

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಗೆಲುವಿನ ನಂತರ ಕೊಹ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಲಂಡನ್‌ನಲ್ಲಿ ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುತ್ತಿದ್ದಾರೆ.

ವಿರುಷ್ಕಾವಿರುಷ್ಕಾ
ವಿರುಷ್ಕಾ

ಲಂಡನ್: ಟೀಂ ಇಂಡಿಯಾದ (Team India) ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಇತ್ತೀಚೆಗೆ ಟೆಸ್ಟ್ ಹಾಗೂ ಟಿ-20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ, ಏಕದಿನ ಮಾದರಿಯಲ್ಲಿ ಮಾತ್ರ ಅವರು ಆಡುತ್ತಿದ್ದಾರೆ. ಆದ್ರೆ, ಸದ್ಯ ಯಾವುದೇ ಏಕದಿನ ಮಾದರಿಯ ಕ್ರಿಕೆಟ್ ಇಲ್ಲದಿರುವುದರಿಂದ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಲಂಡನ್‌ನ (London) ಬೀದಿಗಳಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಗೆಲುವಿನ ನಂತರ ಕೊಹ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಲಂಡನ್‌ನಲ್ಲಿ ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುತ್ತಿದ್ದಾರೆ.

ಸಾಮಾನ್ಯರಂತೆ ಲಂಡನ್ ಬೀದಿ ಸುತ್ತಿತ್ತಿದ್ದಾರೆ ವಿರುಷ್ಕಾ

ಕೊಹ್ಲಿಯ ದೀರ್ಘ ರಜೆಯ ಸಂದರ್ಭದಲ್ಲಿ ಲಡನ್‌ನ ಬೀದಿಯಲ್ಲಿ ಸುತ್ತಾಡುತ್ತಿರುವ ಸುಂದರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರಿಗೆ ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿಗಳಿರುವುದರಿಂದ ಅವರು ಮನೆಯಿಂದ ಆಚೆ ಬಂದು ಖಾಸಗಿ ಜೀವನ ಅನುಭವಿಸುವುದು ಕಷ್ಟವಾಗಬಹುದು. ಹಾಗಾಗಿ ಅವರು ಸಾಮಾನ್ಯ ನಾಗರಿಕನಂತೆ ಲಂಡನ್ ಬೀದಿಗಳಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ.

ಸದ್ಯ, ವೈರಲ್ ಆಗಿರುವ ವೀಡಿಯೊದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿದೆ. ಅವರು ಸೆಲೆಬ್ರಿಟಿ ದಂಪತಿಗಳೆಂಬ ಗುರುತು ಮರೆಮಾಚಿ ಜನರೊಂದಿಗೆ ಆರಾಮವಾಗಿ ಸುತ್ತಾಡುತ್ತಿದ್ದಾರೆ. ದಂಪತಿಗಳು ನಗು ನಗುತ್ತ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Asia Cup 2025: ರಾಹುಲ್ ಸೇರಿ ಈ ಐವರು ಸ್ಟಾರ್ ಆಟಗಾರರು ಏಷ್ಯಾ ಕಪ್‌ನಿಂದ ಔಟ್!

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಭಾಗವಹಿಸಿರಲಿಲ್ಲ. ಕಾರಣ ಅವರು ದಿಢೀರನೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಿವೃತ್ತಿಗೂ ಮೊದಲು ಅವರು ಟೆಸ್ಟ್ ಮಾದರಿಯಲ್ಲಿ, 123 ಪಂದ್ಯಗಳಿಂದ 46.85 ಸರಾಸರಿಯಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳೊಂದಿಗೆ 9230 ರನ್‌ ಗಳಿಸಿದ್ದಾರೆ.

ಇನ್ನೂ ಟೀಂ ಇಂಡಿಯಾದ ನಾಯಕರಾಗಿಯೂ ಅದ್ಭುತ ದಾಖಲೆ ಹೊಂದಿದ್ದಾರೆ. ಅವರು ನಾಯಕತ್ವ ವಹಿಸಿದ 68 ಪಂದ್ಯಗಳಲ್ಲಿ ಭಾರತವನ್ನು 40 ಗೆಲುವು ಸಾಧಿಸಿದ್ದಾರೆ. ಇವರು ಭಾರತ ತಂಡದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ದಾಖಲೆ ಕೂಡ ಮಾಡಿದ್ದಾರೆ. ಇದಕ್ಕೂ ಮೊದಲು 2024 ರ ಟಿ 20 ವಿಶ್ವಕಪ್ ಭಾರತದ ಗೆಲುವಿನ ನಂತರ, ಅವರು ಟಿ-20ಐ ನಿಂದ ನಿವೃತ್ತರಾಗಿದ್ದರಯ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಅವರು 76 (59) ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.