Virat Kohli: ‘ಒಂಟಿಯಾಗಿ ತಲೆ ಮೇಲೆ ಕೈ ಹೊತ್ತು ದುಃಖಿಸಲು ಆಗಲ್ಲ’!ಬಿಸಿಸಿಐನ ಈ ಒಂದು ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ | Virat Kohli Talking Against To BCCI New Family Rule

Virat Kohli: ‘ಒಂಟಿಯಾಗಿ ತಲೆ ಮೇಲೆ ಕೈ ಹೊತ್ತು ದುಃಖಿಸಲು ಆಗಲ್ಲ’!ಬಿಸಿಸಿಐನ ಈ ಒಂದು ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ | Virat Kohli Talking Against To BCCI New Family Rule

ಕುಟುಂಬ ಸದಸ್ಯರು ಆಟಗಾರರ ಜೊತೆಗಿರಬೇಕು

ಟೀಂ ಇಂಡಿಯಾ ಪ್ರವಾಸದ ಸಂದರ್ಭದಲ್ಲಿ ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಬಾರದು ಎಂಬ ಬಿಸಿಸಿಐ ಆದೇಶದ ಕುರಿತು ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ESPNCricinfo ವರದಿ ಮಾಡಿದೆ. ಆಟಗಾರರು ಕಷ್ಟದ ಸಮಯಗಳನ್ನು ಎದುರಿಸುವಾಗ ಕುಟುಂಬಗಳು ಆ ಒತ್ತಡವನ್ನು ಕಡಿಮೆ ಮಾಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ ಎಂದು ESPNCricinfo ವರದಿ ಮಾಡಿದೆ.

ಬಿಸಿಸಿಐ ಹೊಸ ರೂಲ್ಸ್

ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರವಾಸಗಳಲ್ಲಿ ಕುಟುಂಬದೊಂದಿಗೆ ಇರಲು ನಿರ್ಬಂಧಗಳನ್ನು ಹೇರಿತು. ಈ ನಿರ್ಧಾರದ ನಂತರ ವಿರಾಟ್ ಈ ಹೇಳಿಕೆ ನೀಡಿದ್ದಾರೆ. 45 ದಿನಗಳಿಗಿಂತ ಹೆಚ್ಚಿನ ಪ್ರವಾಸಗಳಲ್ಲಿ ಮಾತ್ರ ಆಟಗಾರರ ಕುಟುಂಬ ಸದಸ್ಯರು ಮೊದಲ ಎರಡು ವಾರಗಳ ನಂತರ ಕೇವಲ 14 ದಿನಗಳವರೆಗೆ ಆಟಗಾರರೊಂದಿಗೆ ಇರಬೇಕು ಎಂದು ಬಿಸಿಸಿಐ ನಿಯಮ ಹೊರಿಡಿಸಿದೆ.

ಒತ್ತಡದ ಸಂದರ್ಭದಲ್ಲಿ ಕುಟುಂಬದ ಬೆಂಬಲ ಅತ್ಯಗತ್ಯ

ಈ ನಿಯಮಗಳ ಬಗ್ಗೆ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ವಿದೇಶ ಪ್ರವಾಸಗಳಂತಹ ಒತ್ತಡದ ಸಂದರ್ಭಗಳಿಂದ ಚೇತರಿಸಿಕೊಳ್ಳಲು ಕುಟುಂಬದ ಬೆಂಬಲ ಅತ್ಯಗತ್ಯ ಎಂದು ಅನೇಕ ಜನರಿಗೆ ತಿಳಿದಿಲ್ಲ. ಕುಟುಂಬದ ಮಹತ್ವವನ್ನು ಅರ್ಥಮಾಡಿಕೊಳ್ಳದ ಜನರೇ ಇಂತಹ ನಿಯಮಗಳನ್ನು ರಚಿಸಿರುವುದು ತೀವ್ರ ನಿರಾಶಾದಾಯಕವಾಗಿದೆ. ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಜನರಿಗೆ ಕುಟುಂಬದ ಮೌಲ್ಯ ಅರ್ಥವಾಗಲ್ಲ

ಕುಟುಂಬದ ಮೌಲ್ಯವನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏನಾಗುತ್ತಿದೆ ಎಂದು ತಿಳಿಯದೆ ಜನರು ಈ ಬಗ್ಗೆ ಮಾತನಾಡುತ್ತಾರೆ ಮತ್ತು ಆಟಗಾರರನ್ನು ಕುಟುಂಬದಿಂದ ದೂರ ಇಡಬೇಕು ಎಂದು ಹೇಳುತ್ತಾರೆ ಎಂದು ಅವರು ಹೇಳಿದರು.

ಕ್ರಿಕೆಟಿಗರು ಉತ್ತಮ ಮನಸ್ಥಿತಿಯಲ್ಲಿರುವುದು ಮುಖ್ಯ

ಕ್ರಿಕೆಟಿಗರು ಉತ್ತಮ ಮನಸ್ಥಿತಿಯಲ್ಲಿರುವುದು ಮುಖ್ಯ. ಆಗ ಮಾತ್ರ ನೀವು ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಅವರು ಹೇಳಿದರು. ನಾನು ಚೆನ್ನಾಗಿದ್ದರೆ ಮಾತ್ರ ನನ್ನ ಕರ್ತವ್ಯವನ್ನು ಪೂರ್ಣಗೊಳಿಸಬಹುದು ಮತ್ತು ನನ್ನ ಕೌಟುಂಬಿಕ ಜೀವನವನ್ನು ಹಿಂತಿರುಗಿ ನೋಡಬಹುದು. ಕೆಟ್ಟ ಆಟದ ನಂತರ ಯಾವುದೇ ಆಟಗಾರನು ತಲೆ ಮೇಲೆ ಕೈ ಹೊತ್ತು ಒಂಟಿಯಾಗಿ ಕುಳಿತುಕೊಳ್ಳಲು ಭಯಸುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: WPL 2025: ಮುಂಬೈ ಇಂಡಿಯನ್ಸ್​​ಗೆ 2ನೇ WPL ಚಾಂಪಿಯನ್ ಪಟ್ಟ! ಸತತ 3ನೇ ಫೈನಲ್​​ನಲ್ಲೂ ಸೋಲು ಕಂಡ ಡೆಲ್ಲಿ

ಕುಟುಂಬ ಜೊತೆಗಿದ್ರೆ ಏನಾದ್ರೂ ಸಾಧಿಸಬಹುದು

ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಕುಟುಂಬದೊಂದಿಗೆ ಇದ್ದಾಗ ನೀವು ಸಂಪೂರ್ಣವಾಗಿ ಸಾಮಾನ್ಯರಾಗುತ್ತೀರಿ. ನೀವು ನಿಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಮನೆಗೆ ಹಿಂತಿರುಗಿ, ಕುಟುಂಬದೊಂದಿಗೆ ಇರುತ್ತೀರಿ ಮತ್ತು ಸಾಮಾನ್ಯ ಜೀವನ ನಡೆಸುತ್ತೀರಿ. ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಸಿಗುವ ಪ್ರತಿಯೊಂದು ಅವಕಾಶವನ್ನು ನಾನು ಬಳಸಿಕೊಳ್ಳುತ್ತೇನೆ” ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್, ಐದು ಪಂದ್ಯಗಳಲ್ಲಿ 54.50 ಸರಾಸರಿಯಲ್ಲಿ 218 ರನ್ ಗಳಿಸಿದ್ದರು. ಪಾಕಿಸ್ತಾನದ ವಿರುದ್ಧ ಅವರು 100 ರನ್ ಗಳಿಸಿದರು ಮತ್ತು ಆಸ್ಟ್ರೇಲಿಯಾ ವಿರುದ್ಧ 98 ಎಸೆತಗಳಲ್ಲಿ 84 ರನ್ ಗಳಿಸುವ ಮೂಲಕ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.