Last Updated:
2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನದೊಂದಿಗೆ ಸೆಮಿಫೈನಲ್ ತಲುಪಿತ್ತು. ಆದರೆ, ಮಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವು ಎರಡು ದಿನಗಳ ಕಾಲ ಮಳೆಯಿಂದ ಅಡಚಣೆಗೊಳಗಾಗಿತ್ತು.
ಭಾರತ ತಂಡದ (Team India) ನಿರಾಶೆ ದಿನಗಳಲ್ಲಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ (ODI World Cup 2019) ಹಾಗೂ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲುಗಳು. ಎರಡೂ ಟೂರ್ನಿಯಲ್ಲೂ ಭಾರತ ಬಲಿಷ್ಠ ತಂಡವಾಗಿದ್ದರೂ, ಗೆಲುವು ಭಾರತಕ್ಕೆ ದಕ್ಕಲಿಲ್ಲ. 2019ರಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿದ್ದ ಭಾರತ ಸೆಮಿಫೈನಲ್‌ನಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿತ್ತು. ಆ ಸೋಲಿನ ಬಳಿಕ ಟೀಮ್ ಇಂಡಿಯಾದ ಅಂದಿನ ನಾಯಕ ವಿರಾಟ್ ಕೊಹ್ಲಿ (Virat Kohli) ಭಾವುಕರಾಗಿ ಕಣ್ಣೀರಿಟ್ಟಿದ್ದರು ಎಂದು ಟೀಮ್ ಇಂಡಿಯಾ ಬೌಲರ್ ಯುಜ್ವೇಂದ್ರ ಚಹಲ್ ಬಹಿರಂಗಪಡಿಸಿದ್ದಾರೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಚಹಲ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಸೋಲಿನ ನಂತರ ಬಾತ್ರೂಮ್ನಲ್ಲಿ ಕಣ್ಣೀರು ಹಾಕಿದ್ದರು ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಆ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದ್ದು, ತಂಡದ ಎಲ್ಲಾ ಆಟಗಾರರು ಭಾವುಕರಾಗಿದ್ದರು ಎಂದು ಚಹಲ್ ತಿಳಿಸಿದ್ದಾರೆ. ಈ ಸೋಲು ಕೊಹ್ಲಿಯ ನಾಯಕತ್ವದಲ್ಲಿ ಐಸಿಸಿ ಪ್ರಶಸ್ತಿ ಗೆಲ್ಲುವ ಕನಸನ್ನ ಹೊಂದಿತ್ತು. ಆದರೆ ಈ ಅನಿರೀಕ್ಷಿತ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ದೊಡ್ಡ ಆಘಾತವನ್ನುಂಟುಮಾಡಿತ್ತು.
2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನದೊಂದಿಗೆ ಸೆಮಿಫೈನಲ್ ತಲುಪಿತ್ತು. ಆದರೆ, ಮಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವು ಎರಡು ದಿನಗಳ ಕಾಲ ಮಳೆಯಿಂದ ಅಡಚಣೆಗೊಳಗಾಗಿತ್ತು. ಭಾರತಕ್ಕೆ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ, ಆರಂಭಿಕ ಆಘಾತದಿಂದ ತಂಡ ಕೇವಲ 5 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ರೋಹಿತ್, ವಿರಾಟ್ ಕೊಹ್ಲಿ ಹಾಗೂ ರಾಹುಲ್ ಕೇವಲ 1 ರನ್‌ಗೆ ಔಟ್ ಆಗಿದ್ದರು. ರವೀಂದ್ರ ಜಡೇಜಾ (77 ರನ್) ಮತ್ತು ಎಂಎಸ್ ಧೋನಿ (50 ರನ್) ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದರೂ, ಧೋನಿಯ ರನ್ ಔಟ್ ಭಾರತದ ಕನಸನ್ನು ಕಸಿದುಕೊಂಡಿತು. ನ್ಯೂಜಿಲೆಂಡ್ 18 ರನ್‌ಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿತು, ಆದರೆ ಭಾರತಕ್ಕೆ ಈ ಸೋಲು ಭಾವನಾತ್ಮಕವಾಗಿ ಭಾರೀ ಹೊಡೆತವಾಗಿತ್ತು.
” 2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ, ಕೊಹ್ಲಿ ಸ್ನಾನಗೃಹದಲ್ಲಿ ಕಣ್ಣೀರು ಹಾಕಿದ್ದರು. ಅವರು ಮಾತ್ರವಲ್ಲ, ತಂಡದ ಎಲ್ಲ ಆಟಗಾರರು ಅಳುತ್ತಿದ್ದರು. ಕ್ರೀಸ್‌ನಿಂದ ಕೊನೆಯವನಾಗಿ ಹೊರಬಂದವನು ನಾನು. ಕೊಹ್ಲಿಯ ಪಕ್ಕದಲ್ಲಿ ಡ್ರೆಸ್ಸಿಂಗ್ ರೂಂಗೆ ನಡೆದುಕೊಂಡು ಹೋಗುವಾಗ, ಅವರ ಕಣ್ಣುಗಳು ನೀರಿನಿಂದ ತುಂಬಿದ್ದವು. ಆ ಪಂದ್ಯವು ಧೋನಿಯ ಕೊನೆಯ ವಿಶ್ವಕಪ್ ಪಂದ್ಯವಾಗಿತ್ತು,” ಎಂದು ಚಾಹಲ್ ಭಾವುಕರಾಗಿ ಹೇಳಿದರು. ಆ ಪಂದ್ಯದಲ್ಲಿ ಚಹಲ್ 10 ಓವರ್‌ಗಳಲ್ಲಿ 63 ರನ್‌ಗೆ 1 ವಿಕೆಟ್ ಪಡೆದಿದ್ದರು, ಮತ್ತು ತಾನು 15 ರನ್‌ಗಳನ್ನು ಕಡಿಮೆ ಕೊಡಬಹುದಿತ್ತು ಎಂದು ತಮ್ಮ ಬೌಲಿಂಗ್ ಕುರಿತು ಪಶ್ಚಾತ್ತಾಪ ವ್ಯಕ್ತಪಡಿಸಿದರು. “ನಾನು ಒಂದಿಷ್ಟು ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು ಎಂದು ಆ ಕ್ಷಣದಲ್ಲಿ ನನಗೆ ಅನಿಸಿತು,” ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಅವಧಿಯಲ್ಲಿ (2014-2022) ಭಾರತ ತಂಡವನ್ನು ಅನೇಕ ಐತಿಹಾಸಿಕ ಗೆಲುವುಗಳತ್ತ ಮುನ್ನಡೆಸಿದರೂ, ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರ ನಾಯಕತ್ವದಲ್ಲಿ ಭಾರತವು 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ (ಪಾಕಿಸ್ತಾನ ವಿರುದ್ಧ ಸೋಲು), 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ (ನ್ಯೂಜಿಲೆಂಡ್ ವಿರುದ್ಧ ಸೋಲು), ಮತ್ತು 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ನ್ಯೂಜಿಲೆಂಡ್ ವಿರುದ್ಧ ಸೋಲು) ತಲುಪಿತು. ಆದರೆ, ಈ ಮೂರೂ ಸಂದರ್ಭಗಳಲ್ಲಿ ಭಾರತವು ಪ್ರಶಸ್ತಿಯಿಂದ ವಂಚಿತವಾಯಿತು. 2019ರ ಸೆಮಿಫೈನಲ್ ಸೋಲು ಕೊಹ್ಲಿಯನ್ನು ಭಾವನಾತ್ಮಕವಾಗಿ ಕುಗ್ಗಿಸಿತು, ಏಕೆಂದರೆ ಇದು ಎಂಎಸ್ ಧೋನಿಯ ಕೊನೆಯ ಏಕದಿನ ವಿಶ್ವಕಪ್ ಪಂದ್ಯವಾಗಿತ್ತು.
August 01, 2025 7:48 PM IST