Last Updated:
ವಿರಾಟ್ ಕೊಹ್ಲಿ ಕೊನೆಯದಾಗಿ ಪೇಯ್ಡ್ ಟ್ವೀಟ್ ಬದಲಿಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಎಂದರೆ ಅದುವೇ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನ ಗೆದ್ದ ಸಂದರ್ಭದಲ್ಲಿ ಮಾತ್ರ. ಅದನ್ನ ಹೊರೆತುಪಡಿಸಿದರೆ, ಅನಂತ್ ಅಂಬಾನಿ ವಂತಾರಾ ಕುರಿತು ಹಾಗೂ ಅಶ್ವಿನ್ ನಿವೃತ್ತಿ ಘೋಷಿಸಿದ ಬಗ್ಗೆ ಮಾತ್ರ ವಿರಾಟ್ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು
ಭಾರತದ ಪ್ರಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ವೈಯಕ್ತಿಕ ಹಾಗೂ ಕ್ರಿಕೆಟ್ಗೆ ಸಂಬಂಧಿಸಿದ ಅಪ್ಡೇಟ್ಗಳನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮಾತ್ರ ಹಂಚುಕೊಳ್ಳುತ್ತಿದ್ದರು. ಟ್ವಿಟರ್ನಲ್ಲಿ ಬಹುತೇಕ ಜಾಹೀರಾತುಗಳನ್ನ ಕಳೆದ ಒಂದು ವರ್ಷದಿಂದ ಶೇರ್ ಮಾಡುತ್ತಿದ್ದರು. ಇದೀಗ ಕೊಹ್ಲಿ ಟ್ವಿಟರ್ನಲ್ಲಿ ಜಾಹೀರೇತರ ವಿಚಾರವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕೊಹ್ಲಿ ಟ್ವಿಟರ್ನಲ್ಲಿ ಶುಭಾಶಯ ಕೋರಿದ್ದಾರೆ.
ವಿರಾಟ್ ಕೊಹ್ಲಿ ಅವರು ಇಂದು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಅವರು ಟ್ವೀಟ್ ಮಾಡಿ, ” ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸುಖವನ್ನು ಎಂದೆಂದಿಗೂ ಕೊಡುವಂತೆ ಪ್ರಾರ್ಥಿಸುತ್ತೇನೆ. ನಮ್ಮ ಈ ಸುಂದರ ದೇಶಕ್ಕೆ ನಿಮ್ಮ ಸೇವೆ, ನೀವು ಮಾಡಿರುವ ಪ್ರಯತ್ನಗಳು ಜಗತ್ತಿನ ಎಲ್ಲ ದೇಶಗಳ ಮುಂದೆ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ಜೈ ಹಿಂದ್, ಸರ್ @narendramodi 🙏 ” ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೊನೆಯದಾಗಿ ಪೇಯ್ಡ್ ಟ್ವೀಟ್ ಬದಲಿಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಎಂದರೆ ಅದುವೇ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನ ಗೆದ್ದ ಸಂದರ್ಭದಲ್ಲಿ ಮಾತ್ರ. ಅದನ್ನ ಹೊರೆತುಪಡಿಸಿದರೆ, ಅನಂತ್ ಅಂಬಾನಿ ವಂತಾರಾ ಕುರಿತು ಹಾಗೂ ಅಶ್ವಿನ್ ನಿವೃತ್ತಿ ಘೋಷಿಸಿದ ಬಗ್ಗೆ ಮಾತ್ರ ವಿರಾಟ್ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಪಿಎಂ ಮೋದಿಗೆ ಶುಭಾಶಯ ಕೋರಲು ಎಕ್ಸ್ ಖಾತೆಯನ್ನ ಬಳಿಸಿಕೊಂಡಿದ್ದಾರೆ.
Wishing our honourable Prime Minister Shri Narendra Modi Ji a very happy birthday with the warmest wishes. May God bless you with good health and happiness always. Your efforts for our beautiful nation have put us on a very high pedestal among all the countries of the world.
Jai…
— Virat Kohli (@imVkohli) September 17, 2025
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ವಿರಾಟ್ ಕೊಹ್ಲಿ ಮುನ್ನ, ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಕ್ರಿಕೆಟ್ ದಂತಕಥೆಗಳು ಪ್ರಧಾನಿ ಮೋದಿ ಅವರಿಗೆ 75ನೇ ಹುಟ್ಟುಹಬ್ಬದ ಅಂಗವಾಗಿ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸ್ವತಃ ಭಾರತೀಯ ಕ್ರಿಕೆಟ್ ತಂಡ ಮತ್ತು ದೇಶದ ಇತರ ಕ್ರೀಡಾಪಟುಗಳ ಅಭಿಮಾನಿಯಾಗಿದ್ದಾರೆ. 2024ರ ಟಿ 20 ವಿಶ್ವಕಪ್‌ನಲ್ಲಿ ತಂಡವು ಗೆದ್ದ ನಂತರ ಅವರು ಟೀಮ್ ಇಂಡಿಯಾಗೆ ಆತಿಥ್ಯ ನೀಡಿ ಶ್ಲಾಘಿಸಿದ್ದರು. ಈ ವಿಶೇಷ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರರು ಮಾತ್ರವಲ್ಲದೆ, ಇತರ ಒಲಿಂಪಿಕ್ ಕ್ರೀಡಾಪಟುಗಳು ಸಹ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ಲೆಜೆಂಡರಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಮತ್ತು ಶೂಟರ್ ಮನು ಭಾಕರ್ ಕೂಡ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
September 17, 2025 11:34 PM IST