ಅರೆ, ಕೋಳಿ ಮಾಂಸವನ್ನು ತಿನ್ನುತ್ತಾರೆ ಅಂದ್ರೆ, ಅದ್ಯಾವ ತರಹ ಮಾಂಸಹಾರವನ್ನು ತ್ಯಜಿಸಿದ್ದಾರೆ ಎಂದು ಕೊಂಡಿರಾ? ಅವರು ತಿನ್ನುತ್ತಿರುವುದು ಸಸ್ಯಾಹಾರಿ ಕೋಳಿ ಮಾಂಸವನ್ನು! ಹೌದು, ಅವರು ಮಾಕ್ ಚಿಕನ್ ಅರ್ಥಾತ್ ಅಣಕು ಕೋಳಿಯನ್ನು ತಿನ್ನುತ್ತಾರೆ. ಅರೆ, ಏನಿದು ಅಣಕು ಕೋಳಿ (Mock Chicken) ಎಂದರೆ, ಇಲ್ಲಿದೆ ನೋಡಿ ಅದರ ಕುರಿತು ಸಂಪೂರ್ಣ ಮಾಹಿತಿ:
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು ಕಟ್ಟಾ ಸಸ್ಯಾಹಾರಿಗಳು. ಅದರಂತೆ, ಸಸ್ಯಾಹಾರಿಗಳಾದವರು ಪ್ರಾಣಿಗಳಿಂದ ತಯಾರಾದ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಇದರಲ್ಲಿ ಮಾಂಸ, ಮೀನು ಮಾತ್ರವಲ್ಲ, ಹಾಲು, ಮೊಸರು, ಚೀಸ್ ಕೂಡ ಸೇರಿವೆ. ಆದರೆ, ವೈರಲ್ ವಿಡಿಯೋದಲ್ಲಿ ವಿರಾಟ್ ಅವರು ಕೋಳಿ ಮಾಂಸವನ್ನು ತಿನ್ನುತ್ತಿದ್ದಾರೆ, ಅದುವೇ, ಮಾಕ್ ಚಿಕನ್ ಅಥವಾ ಅಣಕು ಕೋಳಿಯಾಗಿದೆ.
ಮಾಕ್ ಚಿಕನ್ ಎಂದರೇನು?
ಮಾಕ್ ಚಿಕನ್ ಎನ್ನುವುದು ನಕಲಿ ಕೋಳಿಯಾಗಿದ್ದು, ಇದು ಕೋಳಿಯಂತೆ ಕಾಣುತ್ತದೆ, ಜೊತೆಗೆ, ರುಚಿಯೂ ಕೋಳಿಯಂತೆ ಇದ್ದರೂ, ವಾಸ್ತವವಾಗಿ ಕೋಳಿಯಿಂದ ತಯಾರಿಸಲಾಗಿರುವುದಿಲ್ಲ. ಇದು ಸಸ್ಯಾಹಾರಿ ಕೋಳಿಮಾಂಸದ ಪರ್ಯಾಯವಾಗಿದ್ದು, ಮಾಂಸಾಹಾರವನ್ನು ತ್ಯಜಿಸಿದವರು ಅಥವಾ ಸಸ್ಯಾಹಾರಿಗಳಾದವರು ಕೋಳಿಮಾಂಸದ ರುಚಿಯನ್ನು ಅನುಭವಿಸಲು ಬಯಸುವವರಿಗಾಗಿ ತಯಾರಿಸಲಾಗುತ್ತದೆ.
ಮಾಕ್ ಚಿಕನ್ ತಯಾರಿಕೆಗೆ ಬಳಸುವ ಪದಾರ್ಥಗಳು:
ಈ ಪದಾರ್ಥಗಳನ್ನು ಬಳಸಿ, ಮಾಕ್ ಚಿಕನ್‌ಗೆ ಕೋಳಿಮಾಂಸದಂತಹ ರುಚಿ ಮತ್ತು ಟೆಕ್ಸ್ಚರ್ ನೀಡಲಾಗುತ್ತದೆ.
ಹಾಗಾದ್ರೆ ಯಾಕೆ ಈ ಮಾಕ್ ಚಿಕನ್ ಜನಪ್ರಿಯ?
ವಿರಾಟ್ ಕೊಹ್ಲಿ ಅಥವಾ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿಯಂತಹ ಕ್ರೀಡಾಪಟುಗಳು ಮಾಂಸಾಹಾರದಿಂದ ಸಸ್ಯಾಹಾರಕ್ಕೆ ಬದಲಾದವರು. ಸಸ್ಯಾಹಾರಿಗಳು ಮಾಂಸವನ್ನು ತಪ್ಪಿಸಿದರೂ, ಅದರಿಂದ ಬರುವ ಪ್ರೋಟೀನ್ ಮತ್ತು ಶಕ್ತಿಯ ಅಗತ್ಯವನ್ನು ಪೂರೈಸಲು ಬಯಸುತ್ತಾರೆ. ಮಾಕ್ ಚಿಕನ್ ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ.

ಮಾಕ್ ಚಿಕನ್‌ನ ಪ್ರಯೋಜನಗಳು
ಮಾಕ್ ಚಿಕನ್ ಬಗ್ಗೆ ಮುನ್ನೆಚ್ಚರಿಕೆ: ಮಾಕ್ ಚಿಕನ್ ತಿನ್ನುವದರಿಂದ ಆರೋಗ್ಯಕ್ಕೆ ಕೆಲವು ಸವಾಲುಗಳೂ ಇವೆ, ಅವು:
ಹಾಗಾಗಿ, ಮಾಕ್ ಚಿಕನ್ ಸಸ್ಯಾಹಾರಿಗಳಿಗೆ ಕೋಳಿಮಾಂಸದ ರುಚಿಯನ್ನು ಆನಂದಿಸಲು ಮತ್ತು ಪ್ರೋಟೀನ್ ಪಡೆಯಲು ಒಳ್ಳೆಯ ಆಯ್ಕೆಯಾಗಿದೆ. ವಿರಾಟ್ ಕೊಹ್ಲಿಯಂತಹ ಸೆಲೆಬ್ರಿಟಿಗಳು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿರುವುದು ಜನರ ಗಮನ ಸೆಳೆದಿದೆ. ಆದರೆ, ಇದನ್ನು ಆರಿಸುವ ಮೊದಲು, ಉತ್ಪನ್ನದ ಗುಣಮಟ್ಟ, ಪದಾರ್ಥಗಳು ಮತ್ತು ಆರೋಗ್ಯದ ಮೇಲಿನ ಪರಿಣಾಮವನ್ನು ಪರಿಶೀಲಿಸುವುದು ಮುಖ್ಯ.
New Delhi,Delhi