ವಿರಾಟ್ ಕೊಹ್ಲಿ ಇತ್ತೀಚೆಗೆ ಭಾರತದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವುದರೊಂದಿಗೆ ಸುದ್ದಿಯಲ್ಲಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಜೇಯ ಶತಕ ಬಾರಿಸಿದರೆ, ವೇಗದ ಬೌಲರ್ ಹರ್ಷಿತ್ ರಾಣಾ ನಾಲ್ಕು ವಿಕೆಟ್ ಪಡೆದು ಭಾರತ ಅಂತಿಮ ಪಂದ್ಯವನ್ನು ಒಂಬತ್ತು ವಿಕೆಟ್‌ಗಳಿಂದ ಜಯಗಳಿಸಿದರೂ,1 ಸರಣಿಯನ್ನು 1-2ರಿಂದ ಸೋತಿತು. ಮೈದಾನ ಹೊರಗೆ ಕೊಹ್ಲಿ ಮತ್ತೊಂದು ಉದ್ಯಮದ ಇನ್ನಿಂಗ್ಸ್‌ನಲ್ಲಿ ಬಿಜಿಯಾಗಿದ್ದಾರೆ.
ಕ್ರಿಕೆಟ್ ಸೂಪರ್‌ಸ್ಟಾರ್ 2022ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ರೆಸ್ಟೋರೆಂಟ್ ಉದ್ಘಾಟಿಸಿದ್ದರು. ಇದು ಅವರ ಹೆಸರಿನೊಂದಿಗೆ ಮಾತ್ರವಲ್ಲ, ಉತ್ತಮ ಊಟದ ರುಚಿಯಿಂದಲೂ ಗಮನ ಸೆಳೆಯಿತು. ಈಗ ರೆಸ್ಟೋರೆಂಟ್‌ನ ಮೆನು ಇಂಟರ್ನೆಟ್‌ನಲ್ಲಿ ವೈರಲ್ ಆಗುವ ಮೂಲಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಒನ್8 ಕಮ್ಯೂನ್ ಎಂಬ ರೆಸ್ಟೋರೆಂಟ್ ಜುಹುನ ಐಕಾನಿಕ್ ಗೌರಿ ಕುಂಜ್ ಬಂಗಲೆಯಲ್ಲಿದ್ದು, ಇದು ಈ ಮೊದಲು ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರದ್ದಾಗಿತ್ತು. ಇದು ತಾನು ಬಹಳ ದಿನಗಳಿಂದ ಆರಾಧಿಸುವ ಗಾಯಕನಿಗೆ ನೀಡುವ ಗೌರವವಾಗಿದೆ ಎನ್ನುವ ವಿಷಯವೂ ಸುಳಿದಾಡುತ್ತಿದೆ. ರೆಸ್ಟೋರೆಂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕ್ರಿಕೆಟಿಗ ವಿರಾಟ್ ಕೊಹ್ಲಿದಂಪತಿಯನ್ನು ನಟ ಮತ್ತು ಆ್ಯಂಕರ್ ಮನೀಷ್ ಪಾಲ್‌ಗೆ ಸಂದರ್ಶನ ಮಾಡಿ, ಆಹಾರದ ಬಗ್ಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಉನ್ನತ ಗುಣಮಟ್ಟದ ಆಹಾರದ ಜತೆಗೆ ಆರೋಗ್ಯಕ ವಾತಾವರಣ ಸೃಷ್ಟಿಸಲಾಗಿದೆ ಎನ್ನುವುದನ್ನು ಖಾತ್ರಿ ಪಡಿಸಿದ್ದಾರೆ.
ರೆಸ್ಟೋರೆಂಟ್‌ನ ಮೆನುವಿನಲ್ಲಿ ಸಸ್ಯಾಹಾರಿ ಹಾಗೂ ಮಾಂಸಹಾರಿ ಭೋಜನವು ಲಭ್ಯವಿರಲಿದೆ. ವಿರಾಟ್‌ನ ಫೇವರಿಟ್ಸ್ ಎಂಬ ಮತ್ತೊಂದು ವಿಭಾಗವನ್ನು ಮನುವಿನಲ್ಲಿ ಸೇರಿಸಲಾಗಿದೆ. ಇದರಲ್ಲಿ ಟೋಫು ಸ್ಟೀಕ್, ಟ್ರಫಲ್ ಆಯಿಲ್‌ನೊಂದಿಗೆ ಮಶ್ರೂಮ್ ಡಂಪ್ಲಿಂಗ್ಸ್ ಮತ್ತು ಸೂಪರ್‌ಫುಡ್ ಸಲಾಡ್ ಇವೆ, ಇದು ಕೊಹ್ಲಿಯ ಇತ್ತೀಚಿನ ಸಸ್ಯಾಹಾರಿ ಆಹಾರವಾಗಿದೆ.
ಝೋಮ್ಯಾಟೋ ಪ್ರಕಾರ, ಜುಹು ಔಟ್‌ಲೆಟ್‌ನ ಮೆನು ಬೆಲೆಗಳು ಸ್ವಲ್ಪ ದುಬಾರಿಯಾಗಿವೆ ಎಂಬುದು. ಸ್ಟೀಮ್ಡ್ ರೈಸ್ 318ರೂ., ಸಾಲ್ಟೆಡ್ ಫ್ರೈಸ್ 348 ರೂ., ತಂದೂರಿ ರೊಟ್ಟಿ ಅಥವಾ ಬೇಬಿ ನಾನ್ 118 ರೂ., ಮಾಸ್ಕಾರ್ಪೋನ್ ಚೀಸ್‌ಕೇಕ್ 748 ರೂ., ಪಿಇಟಿ ಫುಡ್ ಕೂಡ ಲಭ್ಯವಿದೆ. ಇವುಗಳ ಬೆಲೆ 518 ರೂ., ರಿಂದ 818 ರೂಪಾಯಿವರೆಗೆ ಇರಲಿದೆ.
ಒನ್8 ಕಮ್ಯೂನ್ ಕೊಹ್ಲಿಯ ಕ್ರಿಕೆಟ್ ಜೊತೆಗೂ ಸಂಬಂಧ ಹೊಂದಿದೆ. ರೆಸ್ಟೋರೆಂಟ್ ಹೆಸರು ಕೊಹ್ಲಿಯ ಜರ್ಸಿ ಸಂಖ್ಯೆ 18ಕ್ಕೆ ಸಂಬಂಧಿಸಿದೆ. ಅವರ ಕ್ರೀಡಾ ಪರಂಪರೆಯನ್ನು ಹೊಸ ಆತಿಥ್ಯ ಉದ್ಯಮದೊಂದಿಗೆ ಸಂಯೋಜಿಸುತ್ತದೆ. ಉತ್ತಮ ವಾತಾವರಣ ಮುಖ್ಯವಾದರೂ, ಆಹಾರದ ಗುಣಮಟ್ಟವೇ ಪ್ರಮುಖ, ಪ್ರತಿ ಭೋಜನವೂ ಅತಿಥಿಗಳು ತೃಪ್ತರಾಗಿ ಹೊರಡುವಂತೆ ಮತ್ತು ಮತ್ತೆ ಬರುವಂತೆ ತಯಾರಿಸಲಾಗುತ್ತದೆ. ರೆಸ್ಟೋರೆಂಟ್ ಕಿಶೋರ್ ಕುಮಾರ್‌ಗೆ ಗೌರವವನ್ನೂ ಸೂಚಕವಾಗಿದೆ ಎಂದೂ ಶ್ಲಾಘೀಸಿದ್ದಾರೆ.
ಮುಂಬೈನ ಒನ್8 ಕಮ್ಯೂನ್ ಕೊಹ್ಲಿಯ ಮೊದಲ ಆತಿಥ್ಯ ಉದ್ಯಮವಲ್ಲ. ದೆಹಲಿ, ಕೋಲ್ಕತ್ತಾ ಮತ್ತು ಪುಣೆಯಲ್ಲಿ ಈಗಾಗಲೇ ಔಟ್‌ಲೆಟ್‌ಗಳಿವೆ. ಈ ಹೊಸ ಸ್ಥಳವು ಚೈನ್‌ನ ವಿಸ್ತರಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇತ್ತ ವೈಯಕ್ತಿಕ ಜೀವನದಲ್ಲಿ, ವಿರಾಟ್ ಕೊಹ್ಲಿ 2017ರಲ್ಲಿ ಅನುಷ್ಕಾ ಶರ್ಮಾರನ್ನು ವಿವಾಹವಾದರು ಮತ್ತು ಇಬ್ಬರು ಮಕ್ಕಳಿದ್ದಾರೆ, ಒಬ್ಬಳು ಮಗಳು ವಾಮಿಕಾ ಮತ್ತು ಒಬ್ಬ ಮಗ ಅಕಾಯ್.
ಈ ದಂಪತಿ ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಡುತ್ತಲೇ ಬಂದಿದ್ದಾರೆ. ಅನುಷ್ಕಾ ಕೊನೆಯ ಬಾರಿಗೆ 2018ರ ಚಲನಚಿತ್ರ ಜೀರೋದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಅವರ ಕ್ರೀಡಾ ಚಿತ್ರ ಚಕ್ದಾ ಎಕ್ಸ್‌ಪ್ರೆಸ್ ರದ್ದಾದ ನಂತರ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಇದು ಅವರು ಕೌಟುಂಬಿಕ ಜೀವನಕ್ಕೆ ಒತ್ತು ನೀಡುತ್ತಿದ್ದಾರೆ ಎನ್ನುವುದನ್ನು ಪ್ರತಿಬಿಂಭಿಸುತ್ತದೆ.
(ವರದಿ: ಭೀಮಸಿ ಕೋಳೆಪ್ಪನವರ, ನ್ಯೂಸ್ 18 ಕನ್ನಡ)
Mumbai,Maharashtra
October 26, 2025 9:49 PM IST