Virat Kohli: ಚೇಸಿಂಗ್​​ನಲ್ಲಿ ತಾವೇ ಕಿಂಗ್ ಎಂದು ಮತ್ತೆ ನಿರೂಪಿಸಿದ ವಿರಾಟ್! ಕೊಹ್ಲಿ ODI ಇತಿಹಾಸದಲ್ಲಿ ಈ ಮೈಲುಗಲ್ಲು ತಲುಪಿದ ಏಕೈಕ ಬ್ಯಾಟರ್ | Virat Kohli Makes History: First Batsman to Score 6000 Runs in Successful ODI Chases | ಕ್ರೀಡೆ

Last Updated:

ಕೊನೆಯ ಪಂದ್ಯದಲ್ಲಿ ಭಾರತದ ಮೊದಲ ವಿಕೆಟ್ ಬಿದ್ದ ನಂತರ ಒಂದಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಎರಡನೇ ವಿಕೆಟ್‌ಗೆ 168 ರನ್‌ಗಳ ಜೊತೆಯಾಟದ ಮೂಲಕ ಆಸೀಸ್ ವಿರುದ್ಧ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಈ ಜೊತೆಯಾಟ ಭಾರತದ ಚೇಸ್‌ನಲ್ಲಿ ದಾಖಲೆಯನ್ನ ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತೋರಿಸಿತು.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ (India vs Australia) ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ತಮ್ಮ ವೈಫಲ್ಯವನ್ನ ಮೀರಿ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದರು. ಮೊದಲ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆದ ಕೊಹ್ಲಿ, ಮೂರನೇ ಪಂದ್ಯದಲ್ಲಿ 81 ಎಸೆತಗಳಲ್ಲಿ 74 ರನ್‌ಗಳನ್ನು (ನಾಟ್ ಔಟ್) ಮಾಡಿ ಟೀಮ್ ಇಂಡಿಯಾವನ್ನು 237 ರನ್‌ಗಳ ಗುರಿಯತ್ತ ತಲುಪಿಸಿದರು. ಈ ಗೆಲುವಿನೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದರು.

ಕೊನೆಯ ಪಂದ್ಯದಲ್ಲಿ ಭಾರತದ ಮೊದಲ ವಿಕೆಟ್ ಬಿದ್ದ ನಂತರ ಒಂದಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಎರಡನೇ ವಿಕೆಟ್‌ಗೆ 168 ರನ್‌ಗಳ ಜೊತೆಯಾಟದ ಮೂಲಕ ಆಸೀಸ್ ವಿರುದ್ಧ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಈ ಜೊತೆಯಾಟ ಭಾರತದ ಚೇಸ್‌ನಲ್ಲಿ ದಾಖಲೆಯನ್ನ ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತೋರಿಸಿತು.

ರೋಹಿತ್ ಶರ್ಮಾ ಶತಕದೊಂದಿಗೆ ಪ್ಲೇಯರ್ ಆಫ್ ದಿ ಮ್ಯಾಚ್

ನಾಯಕತ್ವದಿಂದ ದೂರವಿರುವ ನಡುವೆಯೂ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಶತಕದೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿದರು. 125 ಎಸೆತ್ಳಲ್ಲಿ 121 ರನ್‌ಗಳಿಸಿದ ರೋಹಿತ್, ಎರಡನೇ ಏಕದಿನ ಪಂದ್ಯದಲ್ಲು ಅರ್ಧ ಶತಕ ಸಿಡಿಸಿಡಿದ್ದರು. ಈ ಎರಡು ಪ್ರದರ್ಶನದಿಂದ ಸರಣಿಯಲ್ಲಿ ಗರಿಷ್ಟ ಸ್ಕೋರರ್ ಆಗಿ ಅವರು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗಳಿಸಿದರು. ರೋಹಿತ್‌ನ ಈ ಫಾರ್ಮ್ ಭಾರತದ ಓಪನಿಂಗ್‌ನಲ್ಲಿ ಸ್ಥಿರತೆಯನ್ನು ತಂದಿದ್ದು, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಚೇಸ್‌ನಲ್ಲಿ ವಿರಾಟ್ ವಿಶ್ವ ದಾಖಲೆ

ರನ್​ಮಷಿನ್, ಚೇಸಿಂಗ್ ಕಿಂಗ್ ಎನಿಸಿಕೊಂಡಿರುವ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಬರೆದರು. ವಿರಾಟ್ ಏಕದಿನ ಕ್ರಿಕೆಟ್​​ನಲ್ಲಿ ಯಶಸ್ವಿ ಚೇಸ್‌ಗಳಲ್ಲಿ 6000 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡರು. ಈಗಾಗಲೇ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಕೊಹ್ಲಿ, ಈ ಇನ್ನಿಂಗ್ಸ್‌ನೊಂದಿಗೆ ತಮ್ಮ ಆಧಿಪತ್ಯವನ್ನು ಬಲಪಡಿಸಿದ್ದಾರೆ. ಈ ದಾಖಲೆಯು ಅವರ ಚೇಸ್ ಮ್ಯಾಸ್ಟರ್ ಎಂಬ ಹೆಗ್ಗಳಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಸಚಿನ್ ತೆಂಡೂಲ್ಕರ್ 5490 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 4701 ರನ್ಸ್, ರಿಕಿ ಪಾಂಟಿಂಗ್ 4186 ರನ್ಸ್, ಜಾಕ್ ಕಾಲೀಸ್ 3950 ರನ್ಸ್ ಸಿಡಿಸಿದ್ದಾರೆ.

ಕೊಹ್ಲಿಯ 24 ಶತಕಗಳ ಆಧಿಪತ್ಯ

ಯಶಸ್ವಿ ರನ್ ಚೇಸಿಂಗ್​ನಲ್ಲಿ ಹೆಚ್ಚು ರನ್ ಮಾತ್ರವಲ್ಲ ಹೆಚ್ಚು ಶತಕ ಸಿಡಿಸಿದ ವಿಶ್ವದಾಖಲೆ ಕೂಡ ವಿರಾಟ್ ಹೆಸರಿನಲ್ಲಿಯೇ ಇದೆ. ವಿರಾಟ್ ಚೇಸಿಂಗ್ ಮಾಡಿ ಭಾರತ ಗೆದ್ದ ಸಂದರ್ಭದಲ್ಲಿ 24 ಶತಕ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 14 ಶತಕ ಸಿಡಿಸಿದ್ದಾರೆ. ಹಿಟ್​ ಮ್ಯಾನ್ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, ಅವರು ಕೂಡ 14 ಶತಕ ಸಿಡಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Virat Kohli: ಚೇಸಿಂಗ್​​ನಲ್ಲಿ ತಾವೇ ಕಿಂಗ್ ಎಂದು ಮತ್ತೆ ನಿರೂಪಿಸಿದ ವಿರಾಟ್! ಕೊಹ್ಲಿ ODI ಇತಿಹಾಸದಲ್ಲಿ ಈ ಮೈಲುಗಲ್ಲು ತಲುಪಿದ ಏಕೈಕ ಬ್ಯಾಟರ್