04
“ನಾನು ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಶತಕ ಬಾರಿಸಿದ ಬಳಿಕವೇ ನನಗೆ ಇದು ಯಾವುದಾದರೂ ದಾಖಲೆಯಾಗಿದೆ ಎಂದು ತಿಳಿಯುತ್ತದೆ. ನನ್ನ ಗುರಿ ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ಗಳನ್ನು ಗಳಿಸುವುದು, ಅದನ್ನು ಸಾಧಿಸಲು ಬಯಸುತ್ತೇನೆ,” ಎಂದು ಅವರು ಹೇಳಿ ಕೊಂಡಿದ್ದರು. ಆದರೆ ಕೊಹ್ಲಿಯ ಈ ಕನಸು ಈಡೇರದೇ ಉಳಿಯಿತು. 10,000 ರನ್ಗಳ ಗಡಿಗೆ 770 ರನ್ಗಳ ಕೊರತೆಯೊಂದಿಗೆ ಅವರು ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದ್ದಾರೆ.