Virat Kohli: ಸಂಗಕ್ಕಾರ ದಾಖಲೆ ಬ್ರೇಕ್ ಮಾಡಿದ ವಿರಾಟ್; ಏಕದಿನದಲ್ಲಿ ಸಚಿನ್​ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಕೊಹ್ಲಿ/ Virat Kohli breaks Sri Lankan batsman Kumar Sangakkara’s record for most runs in One Day International cricket | ಕ್ರೀಡೆ

Virat Kohli: ಸಂಗಕ್ಕಾರ ದಾಖಲೆ ಬ್ರೇಕ್ ಮಾಡಿದ ವಿರಾಟ್; ಏಕದಿನದಲ್ಲಿ ಸಚಿನ್​ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಕೊಹ್ಲಿ/ Virat Kohli breaks Sri Lankan batsman Kumar Sangakkara’s record for most runs in One Day International cricket | ಕ್ರೀಡೆ

Last Updated:

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು

Virat kohli
Virat kohli

ದೀಪಾವಳಿ (Deepawali) ಹಬ್ಬದ ನಂತರ ಭಾರತೀಯರಿಗೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಭರ್ಜರಿ ಬಂಪರ್ ಗಿಫ್ಟ್ (Gift) ನೀಡಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಏಕದಿನ (ODI) ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಬ್ಬರಿಸಿ ಭಾರತ (India) ತಂಡಕ್ಕೆ 9 ವಿಕೆಟ್​​ಗಳ ಗೆಲುವು ತಂದು ಕೊಟ್ಟಿದ್​ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತ 2-1 ಅಂತರದಲ್ಲಿ ಸರಣಿ ಸೋತರೂ, ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಶ್ರೇಷ್ಠ ಬ್ಯಾಟರ್ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಈಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ದಾಖಲೆಯ ಪಟ್ಟಿಯಲ್ಲಿ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಕೇವಲ 54 ರನ್ ಗಳಿಸುವ ಮೂಲಕ ಕುಮಾರ್ ಸಂಗಕ್ಕಾರ ಅವರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಈಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ಬ್ಯಾಟರ್ ಆಗಿದ್ದಾರೆ.

ಸಂಗಕ್ಕಾರ ದಾಖಲೆ ಉಡೀಸ್

ಕುಮಾರ್ ಸಂಗಕ್ಕಾರ ತಮ್ಮ 15 ವರ್ಷಗಳ ಏಕದಿನ ವೃತ್ತಿಜೀವನದಲ್ಲಿ ಶ್ರೀಲಂಕಾ ಪರ 404 ಪಂದ್ಯಗಳನ್ನು ಆಡಿದ್ದು, 14234 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಈಗ 14255 ರನ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ 18426 ದಂತಕಥೆಯ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ.

ಸಿಡ್ನಿಯಲ್ಲಿ ಕೊಹ್ಲಿ ಸ್ಫೋಟಕ ಇನ್ನಿಂಗ್ಸ್

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್ ಮತ್ತು ಅಡಿಲೇಡ್‌ನಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಸಿಡ್ನಿಯಲ್ಲಿ ಕೊಹ್ಲಿ ತಮ್ಮ ವಿರಾಟ್ ರೂಪ ಪ್ರದರ್ಶನ ಮಾಡಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೊಹ್ಲಿ ತಮ್ಮ 75ನೇ ಏಕದಿನ ಅರ್ಧಶತಕ ಗಳಿಸಿದರು. ಕೊಹ್ಲಿ 81 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 74 ರನ್ ಗಳಿಸಿದರು.

ಏಕದಿನ ಕ್ರಿಕೆಟ್​​ನಲ್ಲಿ ಅತಿಹೆಚ್ಚು ರನ್ ಗಳಿಸಿದವರು

1. ಸಚಿನ್ ತೆಂಡೂಲ್ಕರ್ (ಭಾರತ) – 18426 ರನ್‌ಗಳು

2. ವಿರಾಟ್ ಕೊಹ್ಲಿ (ಭಾರತ) – 14235 ರನ್‌ಗಳು

3. ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 14234 ರನ್‌ಗಳು

4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 13704 ರನ್‌ಗಳು

5. ಸನತ್ ಜಯಸೂರ್ಯ (ಶ್ರೀಲಂಕಾ) – 13430 ರನ್

ಕೊಹ್ಲಿ ಏಕದಿನ ಸಾಧನೆ

ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಏಕದಿನ ಬ್ಯಾಟರ್ಸ್​‌ಗಳಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಇದುವರೆಗೆ 305 ಏಕದಿನ ಪಂದ್ಯಗಳಲ್ಲಿ ಭಾರತಕ್ಕಾಗಿ 57.65 ಸರಾಸರಿಯಲ್ಲಿ 14255 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 75 ಅರ್ಧಶತಕಗಳು ಸೇರಿವೆ. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 183 ರನ್‌ಗಳು.