Last Updated:
ವಿರಾಟ್ ಕೊಹ್ಲಿ ಆವ್ನೀತ್ ಕೌರ್ ಫ್ಯಾನ್ ಪೇಜ್ ಪೋಸ್ಟ್ ಲೈಕ್ ಮಾಡಿದ್ದು ವಿವಾದಕ್ಕೆ ಕಾರಣವಾಯಿತು. ಕೊಹ್ಲಿ ತಾಂತ್ರಿಕ ದೋಷ ಎಂದು ಸ್ಪಷ್ಟನೆ ನೀಡಿದರು. ಐಪಿಎಲ್ 2025ರಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರ ವಿರಾಟ್ ಕೊಹ್ಲಿ (Virat Kohli), ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಆವ್ನೀತ್ ಕೌರ್ (Avneet Kaur) ಅವರ ಫ್ಯಾನ್ ಪೇಜ್‌ನ ಪೋಸ್ಟ್‌ಗೆ ‘ಲೈಕ್’ ಮಾಡಿದ್ದಾರೆ ಎಂಬ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯು ಆನ್‌ಲೈನ್‌ನಲ್ಲಿ ತೀವ್ರ ಗಮನ ಸೆಳೆದಿದ್ದು, ಕೆಲವರು ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ಕಾಮೆಂಟ್ ವಿಭಾಗದಲ್ಲಿ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನಗತ್ಯವಾಗಿ ಟ್ಯಾಗ್ ಮಾಡಿದ್ದಾರೆ. ಈ ವಿವಾದಕ್ಕೆ ತೆರೆ ಎಳೆಯಲು ಕೊಹ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕೊಹ್ಲಿಯಿಂದ ಸ್ಪಷ್ಟನೆ
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ” ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಆಲ್ಗಾರಿದಮ್ ಕಾರಣದಿಂದ ತಪ್ಪಾಗಿ ಲೈಕ್ ಮಾಡಿರಬಹುದು. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ದಯವಿಟ್ಟು ಅನಗತ್ಯ ಊಹಾಪೋಹಗಳನ್ನು ಸೃಷ್ಟಿಸದಿರಿ. ಎಲ್ಲರಿಗೂ ಧನ್ಯವಾದ,” ಎಂದು ಬರೆದಿದ್ದಾರೆ. ನಟಿಯ ಹೆಸರು ಅಥವಾ ನಿರ್ದಿಷ್ಟ ಪೋಸ್ಟ್‌ನ್ನು ಉಲ್ಲೇಖಿಸದೆ, ಕೊಹ್ಲಿ ಈ ವಿವಾದವನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಮೇ 2 ರಂದು, ಕೆಲವು ಗಮನಿಗ ಇನ್‌ಸ್ಟಾಗ್ರಾಮ್ ಬಳಕೆದಾರರು ಕೊಹ್ಲಿಯ ಅಫೀಷಿಯಲ್ ಖಾತೆಯು ಆವ್ನೀತ್ ಕೌರ್‌ನ ಫ್ಯಾನ್ ಪೇಜ್‌ನ ಪೋಸ್ಟ್‌ಗೆ ‘ಲೈಕ್’ ಮಾಡಿರುವುದನ್ನು ಗಮನಿಸಿದ್ದರು. ಈ ಪೋಸ್ಟ್ ಕ್ಷಿಪ್ರವಾಗಿ ವೈರಲ್ ಆಗಿತ್ತು, ಹಲವರು ಇದನ್ನು ತಾಂತ್ರಿಕ ದೋಷ ಅಥವಾ ಸಿಬ್ಬಂದಿಯ ತಪ್ಪು ಎಂದು ತಮಾಷೆಯಾಗಿ ಪರಿಗಣಿಸಿದರೆ, ಕೆಲವರು ಟ್ರೋಲ್ ಮಾಡಿದ್ದರು. ಪ್ರಸ್ತುತ, ಆ ‘ಲೈಕ್’ನ್ನು ತೆಗೆದುಹಾಕಲಾಗಿದೆ.
ಅನುಷ್ಕಾ ಶರ್ಮಾ ಮತ್ತು ಕೊಹ್ಲಿಯ ವೈಯಕ್ತಿಕ ಜೀವನ
ಈ ಘಟನೆಗೂ ಒಂದು ದಿನ ಮೊದಲು, ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರ ಜನ್ಮದಿನಕ್ಕೆ ಭಾವುಕ ಸಂದೇಶವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. 2017ರಲ್ಲಿ ವಿವಾಹವಾದ ಈ ಜೋಡಿಯು 2021ರಲ್ಲಿ ತಮ್ಮ ಮೊದಲ ಮಗು ವಾಮಿಕಾ ಮತ್ತು 2024ರ ಫೆಬ್ರವರಿಯಲ್ಲಿ ಎರಡನೇ ಮಗು ಅಕಾಯ್‌ಗೆ ಜನ್ಮ ನೀಡಿದ್ದರು. ಕೊಹ್ಲಿಯ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಯಾವಾಗಲೂ ಅಭಿಮಾನಿಗಳ ಗಮನ ಸೆಳೆಯುತ್ತವೆ, ಆದರೆ ಈ ಘಟನೆಯು ಅನಗತ್ಯ ವಿವಾದಕ್ಕೆ ಕಾರಣವಾಯಿತು.

ವಿರಾಟ್ ಕೊಹ್ಲಿ ಪೋಸ್ಟ್- ಲೈಕ್ ಮಾಡಿ ಪೋಟೋ
ಅದ್ಭುತ ಫಾರ್ಮ್‌ನಲ್ಲಿ ಕೊಹ್ಲಿ
ಕೊಹ್ಲಿ ಐಪಿಎಲ್ 2025 ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಈ ಋತುವಿನಲ್ಲಿ ಇದುವರೆಗೆ ಅವರು 10 ಪಂದ್ಯಗಳಲ್ಲಿ 138.87 ಸ್ಟ್ರೈಕ್ ರೇಟ್‌ನಲ್ಲಿ 443 ರನ್ ಗಳಿಸಿದ್ದಾರೆ. ಐಪಿಎಲ್ 2025 ರಲ್ಲಿ ಕೊಹ್ಲಿ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಋತುವಿನಲ್ಲಿ ಗುರಿಯನ್ನು ಬೆನ್ನಟ್ಟುವಾಗ, ವಿರಾಟ್ ಕೊಹ್ಲಿ ನಾಲ್ಕು ಬಾರಿ 50 ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಇಷ್ಟೇ ಅಲ್ಲ, ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಸ್ವರೂಪದಲ್ಲಿ ಇಷ್ಟೊಂದು ರನ್ ಗಳಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್. ಕೊಹ್ಲಿಗಿಂತ ಮೊದಲು ಕ್ರಿಸ್ ಗೇಲ್, ಅಲೆಕ್ಸ್ ಹೇಲ್ಸ್, ಶೋಯೆಬ್ ಮಲಿಕ್ ಮತ್ತು ಕೀರನ್ ಪೊಲಾರ್ಡ್ ಮಾತ್ರ ಟಿ20ಯಲ್ಲಿ 13000 ರನ್ ಪೂರೈಸಿದ್ದಾರೆ. ಕೊಹ್ಲಿ ಈ ಸಾಧನೆಯನ್ನು ವೇಗವಾಗಿ ತಲುಪಿದ ಎರಡನೇ ಬ್ಯಾಟ್ಸ್‌ಮನ್. ಕೊಹ್ಲಿ ತಮ್ಮ 386ನೇ ಟಿ20 ಇನ್ನಿಂಗ್ಸ್‌ನಲ್ಲಿ 13000 ರನ್‌ಗಳನ್ನು ಪೂರ್ಣಗೊಳಿಸಿದರು. ಅವರಿಗಿಂತ ಮುಂದಿರುವುದು ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್, ಅವರು 381 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
May 02, 2025 10:18 PM IST