Virat-Rohit: ಬಿಸಿಸಿಐನ ಎ+ ಗ್ರೇಡ್‌ನಿಂದ ಹೊರಹೋಗ್ತಾರಾ ‘ರೋ-ಕೋ’? ಈ ಬಗ್ಗೆ ಬಿಸಿಸಿಐ ಕೊಡ್ತು ಶಾಕಿಂಗ್ ರಿಯಾಕ್ಷನ್! | Virat Kohli Rohit Sharma Retirement Announcement BCCI A Grade Continuation

Virat-Rohit: ಬಿಸಿಸಿಐನ ಎ+ ಗ್ರೇಡ್‌ನಿಂದ ಹೊರಹೋಗ್ತಾರಾ ‘ರೋ-ಕೋ’? ಈ ಬಗ್ಗೆ ಬಿಸಿಸಿಐ ಕೊಡ್ತು ಶಾಕಿಂಗ್ ರಿಯಾಕ್ಷನ್! | Virat Kohli Rohit Sharma Retirement Announcement BCCI A Grade Continuation

Last Updated:

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನದಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಹಾಗಾಗಿ ಏಕದಿನ ಫಾರ್ಮ್ಯಾಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಇಬ್ಬರೂ ಎ+ ಗ್ರೇಡ್ ಉಳಿಸಿಕೊಳ್ತಾರ ಎಂಬ ಗೊಂದಲ ಉಂಟಾಗಿದೆ. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾವಿರಾಟ್ ಕೊಹ್ಲಿ-ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಕ್ರಮವಾಗಿ ಮೇ 12 ಮತ್ತು ಮೇ 7 ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದ್ರೆ, ಈ ಇಬ್ಬರು ಆಟಗಾರರು ಕೂಡ ಕಳೆದ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಗ್ರೇಡ್ ಎ+ ಗ್ರೇಡ್ ಉಳಿಸಿಕೊಂಡಿದ್ದರು. ಇದೀಗ ಈ ಇಬ್ಬರೂ ಕೂಡ ಕೇವಲ ಏಕದಿನದಲ್ಲಿ (ODI) ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಹಾಗಾಗಿ ಏಕದಿನ ಫಾರ್ಮ್ಯಾಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಇಬ್ಬರೂ ಎ+ ಗ್ರೇಡ್ ಉಳಿಸಿಕೊಳ್ತಾರ ಎಂಬ ಗೊಂದಲ ಉಂಟಾಗಿದೆ. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ (BCCI Secretary Devajit Saikia) ಉತ್ತರ ನೀಡಿದ್ದಾರೆ.

ಕೊಹ್ಲಿ-ರೋಹಿತ್ ಗ್ರೇಡ್‌ ಬದಲಾಗಲ್ಲ

ಹೌದು, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ-20ಐ ಮತ್ತು ಟೆಸ್ಟ್‌ಗಳಿಂದ ನಿವೃತ್ತರಾಗಿದ್ದರೂ ಸಹ ಅವರ ಗ್ರೇಡ್ ಎ+ ಒಪ್ಪಂದ ಮುಂದುವರಿಯುತ್ತದೆ. ಅವರು ಇನ್ನೂ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ ಮತ್ತು ಅವರು ಎ+ ಗ್ರೇಡ್‌ನ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ’ ಎಂದು ಸೈಕಿಯಾ ಧೃಡಪಡಿಸಿದ್ದಾರೆ.

ಎ+ ಪಡೆದಿದ್ದರು ಜಡ್ಡು, ಕೊಹ್ಲಿ, ರೋಹಿತ್, ಬುಮ್ರಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಪ್ರಿಲ್‌ನಲ್ಲಿ 2024-25ರ ವಾರ್ಷಿಕ ಒಪ್ಪಂದ ಮಾಡಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್ ಶರ್ಮಾ, ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ಎ+ ಗ್ರೇಡ್ ನೀಡಲಾಗಿದೆ.

ಎಲ್ಲಾ ಸ್ವರೂಪದಲ್ಲಿ ಆಡುವ ಆಟಗಾರರನ್ನು ಸಾಮಾನ್ಯವಾಗಿ ಎ+ ಗ್ರೇಡ್ ವರ್ಗಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ 2024-25ರ ಋತುವಿನಲ್ಲಿ ನೀಡಿರುವ ಎ+ ಗ್ರೇಡ್ ನೀಡಿರುವ ಆಟಗಾರರಲ್ಲಿ ಬುಮ್ರಾ ಹೊರತುಪಡಿಸಿ ಉಳಿದ ಯಾರೂ ಕೂಡ ಮೂರು ಫಾರ್ಮ್ಯಾಟ್ ಆಡುತ್ತಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ಭಾರತದ ಟಿ-20 ವಿಶ್ವಕಪ್-2024ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ರೋಹಿತ್, ಕೊಹ್ಲಿ ಮತ್ತು ಜಡೇಜಾ ಟಿ-20ಐನಿಂದ ನಿವೃತ್ತಿ ಘೋಷಿಸಿದರು ಮತ್ತು ಮೇ 7 ರಂದು ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತರಾದರು. ಹಾಗೂ ಕೊಹ್ಲಿ ಮೇ 12 ರಂದು ನಿವೃತ್ತಿ ಘೋಷಿಸಿದರು.

14 ವರ್ಷದಲ್ಲಿ ವಿರಾಟ್ ಸಾಧನೆ

ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಕೊಹ್ಲಿ ಟೀಮ್ ಇಂಡಿಯಾ ಪರ 123 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳ ಸಹಾಯದಿಂದ 9230 ರನ್ ಗಳಿಸಿದ್ದಾರೆ. 36 ವರ್ಷದ ಬಲಗೈ ಬ್ಯಾಟ್ಸ್‌ಮನ್ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಲ್ಲಿ ಒಬ್ಬರಾಗಿದ್ದು, ನಾಯಕನಾಗಿ 68 ಪಂದ್ಯಗಳಲ್ಲಿ 40 ಗೆಲುವು ದಾಖಲಿಸಿದ್ದಾರೆ. ಮಾತ್ರವಲ್ಲ, ಅವರು ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ರೋಹಿತ್ ಶರ್ಮಾರ 12 ವರ್ಷಗಳ ಕ್ರಿಕೆಟ್ ಜರ್ನಿ

ಮತ್ತೊಂದೆಡೆ, ರೋಹಿತ್ 2013 ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ 12 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 67 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳ ಮೂಲಕ 4301 ರನ್ ಗಳಿಸಿದ್ದಾರೆ.