Vision Problems in Dakshina Kannada School Children ಮಕ್ಕಳಿಗೆ ಮೊಬೈಲ್‌ ನೀಡೋ ಮುನ್ನ ಜೋಕೆ; ದ.ಕನ್ನಡ ಜಿಲ್ಲೆಯಲ್ಲಿ 4 ಸಾವಿರ ಮಕ್ಕಳನ್ನ ಕಾಡ್ತಿದೆ ಕಣ್ಣಿನ ಸಮಸ್ಯೆ

Vision Problems in Dakshina Kannada School Children ಮಕ್ಕಳಿಗೆ ಮೊಬೈಲ್‌ ನೀಡೋ ಮುನ್ನ ಜೋಕೆ; ದ.ಕನ್ನಡ ಜಿಲ್ಲೆಯಲ್ಲಿ 4 ಸಾವಿರ ಮಕ್ಕಳನ್ನ ಕಾಡ್ತಿದೆ ಕಣ್ಣಿನ ಸಮಸ್ಯೆ

Last Updated:

ಮಂಗಳೂರಿನಲ್ಲಿ 4 ಸಾವಿರ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಇದೆ ಎಂದು ಆರೋಗ್ಯ ಇಲಾಖೆ ವರದಿ. ಟಿವಿ, ಮೊಬೈಲ್ ಬಳಕೆ ಕಾರಣ. 2066 ಮಕ್ಕಳಿಗೆ ಕಡ್ಡಾಯ ಕನ್ನಡಕ ಅಗತ್ಯ. ಪೋಷಕರು ಎಚ್ಚೆತ್ತು, ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ (Mangaluru) ಆರೋಗ್ಯ ಇಲಾಖೆ (Health Department) ರಿಲೀಸ್‌ ಮಾಡಿರುವ ವರದಿಯೊಂದು ಆತಂಕ ಸೃಷ್ಟಿಸಿದೆ. ಒಂದಲ್ಲ ಎರಡಲ್ಲ ಬರೊಬ್ಬರಿ 4 ಸಾವಿರ ಮಕ್ಕಳಲ್ಲಿ (Children) ದೃಷ್ಟಿ ದೋಷ ಸಮಸ್ಯೆ (Visual Impairment Problem) ಇದೆ. ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ನೀಡಿದೆ. ಈ ಸಮಸ್ಯೆಗೆ ಕಾರಣ ಏನು ಅನ್ನೋ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪ ಆಗಿದೆ.

ಟಿವಿ, ಮೊಬೈಲ್​​​ ವೀಕ್ಷಣೆಯಿಂದ ಸಮಸ್ಯೆ

ಇತ್ತೀಚಿಗೆ ಹೃದಯಾಘಾತ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ವರದಿಯೊಂದನ್ನು ಹೊರ ಹಾಕಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬೆಚ್ಚಿ ಬೀಳಿಸುವ ವರದಿ ಹೊರಬಿದ್ದಿದೆ. ಈ ವರದಿಯಿಂದ ಪೋಷಕರು ಆತಂಕ್ಕೀಡಾಗಿದ್ದಾರೆ.

ಆನ್​ಲೈನ್ ಕ್ಲಾಸ್​​, ಪೋಷಕರು ಕಂಗಾಲು!​

ಮೊಬೈಲ್‌ ಅನ್ನೋ ಪುಟ್ಟ ಪ್ರಪಂಚ ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರು, ಹಿರಿಯರಿಗೂ ಅಚ್ರಚು ಮೆಚ್ಚು. ಮೊಬೈಲ್‌ ಅನ್ನೋದು ವ್ಯಸನದ ರೀತಿ ಆಗಿದೆ. ಇದರಿಂದ ನಮ್ಮ ಕಣ್ಣು, ಮನಸ್ಸಿನ ಆರೋಗ್ಯಕ್ಕೆ ಸಮಸ್ಯೆ ತಂದಿದೆ. ಪುಟ್ಟ ಪುಟ್ಟ ಮಕ್ಕಳು ಮೊಬೈಲ್‌ ಬಳಸೋದ್ರಿಂದ ಕಣ್ಣಿನ ಸಮಸ್ಯೆ ಉಲ್ಬಣ ಆಗ್ತಿದೆ ಎಂದು ರಾಷ್ಟ್ರೀಯ ಅಂಧತ್ವ ನಿವಾರಣಾ ಇಲಾಖೆ ವರದಿ ಬಹಿರಂಗ ಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಕ್ಕಳು ದೃಷ್ಟಿ ದೋಷದ ಸಮಸ್ಯೆಗೆ ತುತ್ತಾಗಿದ್ದಾರೆ. 4398 ಮಕ್ಕಳಲ್ಲಿ ಗಂಭೀರ ದೃಷ್ಟಿ ದೋಷದ ಸಮಸ್ಯೆಯಿರೋದು ದೃಢಪಟ್ಟಿದೆ. ಈ ಪೈಕಿ 2066 ಮಕ್ಕಳಿಗೆ ಕಡ್ಡಾಯ ಕನ್ನಡಕ ಧರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ. 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1,45,951 ಮಕ್ಕಳನ್ನು ರಾಷ್ಟ್ರೀಯ ಅಂಧತ್ವ ನಿವಾರಣಾ ಯೋಜನೆಯಡಿ ತಪಾಸಣೆ ಮಾಡಲಾಗಿದ್ದು, ಸಮಸ್ಯೆ ಹೊರ ಬಿದ್ದಿದೆ.

ಕೊರೊನಾ ಸಮಯದಲ್ಲಿ ಆನ್‌ಲೈನ್‌ ಕ್ಲಾಸ್‌ ಹೆಸರಲ್ಲಿ ಮಕ್ಕಳ ಕೈ ಸೇರಿದ್ದ ಮೊಬೈಲ್‌, ಇದೀಗ ಅವರ ಕೈಯಿಂದ ಬಿಡಸಲಾಗದಷ್ಟು ಬಿಗಿಯಾಗಿದೆ. ಇನ್ನಾದರು ಪೋಷಕರು ಎಚ್ಚೆತ್ತು, ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿ , ತಜ್ಞರ ಸಲಹೆ ಪಡೆಯುವುದು ಅಗತ್ಯವಾಗಿದೆ. (ವರದಿ: ಕಿಶನ್ ಶೆಟ್ಟಿ, ನ್ಯೂಸ್ 18, ಮಂಗಳೂರು)