Wasp: ಸಣ್ಣ ಜೀವ, ಭಯಂಕರ ರಗಳೆ! ಇದರ ಕಡೆ ಕಚ್ಚಿಸಿಕೊಂಡರೆ ನರಕಕ್ಕೆ ಮೂರೇ ಗೇಣು! | Girl dies from Wasp bite in Puttur dangerous venomous Insect | ದಕ್ಷಿಣ ಕನ್ನಡ

Wasp: ಸಣ್ಣ ಜೀವ, ಭಯಂಕರ ರಗಳೆ! ಇದರ ಕಡೆ ಕಚ್ಚಿಸಿಕೊಂಡರೆ ನರಕಕ್ಕೆ ಮೂರೇ ಗೇಣು! | Girl dies from Wasp bite in Puttur dangerous venomous Insect | ದಕ್ಷಿಣ ಕನ್ನಡ

Last Updated:

ಪುತ್ತೂರಿನಲ್ಲಿ ಕಣಜದ ಹುಳುಗಳು ಬಾಲಕಿಯನ್ನು ಕಚ್ಚಿ ಸಾವು ಸಂಭವಿಸಿದೆ. ಜೇನುಹುಳಗಳಿಗಿಂತ ಹೆಚ್ಚು ವಿಷಕಾರಿ ಈ ಹುಳುಗಳು ಮನುಷ್ಯರಿಗೆ ಅಪಾಯಕಾರಿಗಳು, ಗೂಡುಗಳನ್ನು ನಾಶ ಮಾಡಲಾಗುತ್ತದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಜೇನುಹುಳ (Bee) ಕಚ್ಚಿ ಸಾವನ್ನಪ್ಪಿದ ವರದಿಗಳನ್ನು(News) ಹಲವು ಕಡೆಗಳಲ್ಲಿ ಕೇಳುತ್ತೇವೆ. ಆದರೆ ವಾಸ್ತವವಾಗಿ ಜೇನುಹುಳಗಳು ಕಚ್ಚಿ ಸಾವನ್ನಪ್ಪುವ (Death) ಪ್ರಕರಣಗಳು ಕಡಿಮೆ. ಆದರೆ ಜೇನುಹುಳುಗಳನ್ನೇ ಹೋಲುವ ಕಣಜದ ಹುಳುಗಳು ಮನುಷ್ಯನಿಗೆ (Human) ಕಚ್ಚಿದಲ್ಲಿ ಗಂಭೀರ ಗಾಯದ ಜೊತೆಗೆ ಸಾವಾಗುವ ಸಾಧ್ಯತೆಗಳೂ ಹೆಚ್ಚು.

ಏನು ಪ್ರಯೋಜನವಿಲ್ಲದ ಹುಳು ಕೊಡುವುದು ತಾಪತ್ರಯ

ಕಣಜ ಹುಳುವನ್ನು ತುಳುವಿನಲ್ಲಿ ಕೂಡೋಲು ಎಂದು ಕರೆಯುತ್ತಾರೆ. ಇದು ಜೇನುಹುಳದಂತೆ ಕಂಡರೂ, ಅವುಗಳ ವರ್ತನೆ ಸ್ವಲ್ಪ ವಿಭಿನ್ನ ಮತ್ತು ಜೇನುಹುಳಗಳಿಗಿಂತ ಹಲವು ಪಟ್ಟು ಹೆಚ್ಚು ವಿಷಕಾರಿ. ಈ ಕಣಜದ ಹುಳುಗಳಿಂದ ಅಥವಾ ಇವುಗಳ ಗೂಡುಗಳಿಂದ ಮನುಷ್ಯರಿಗೆ ಪ್ರಯೋಜನವೇನಿಲ್ಲ. ಜೇನು ಹುಳುವಿನಲ್ಲಿ ಸಿಗುವ ಜೇನನ್ನಾದರೂ ಉಪಯೋಗಿಸಬಹುದು ಆದರೆ ಕಣಜದಿಂದ ನಮಗೆ ಏನು ಸಿಗುವುದಿಲ್ಲ.

ಕಣಜದ ಹುಳುಗಳು ಕಚ್ಚಿದರೆ ಸಾವು ನಿಶ್ಚಿತ

ಕಣಜದ ಹುಳುಗಳು ಕಚ್ಚಿದರೆ ಎಷ್ಟು ಅಪಾಯಕಾರಿ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಇತ್ತೀಚೆಗೆ ಪುತ್ತೂರಿನಲ್ಲಿ ಈ‌ ಹುಳುಗಳು‌ ಕಚ್ಚಿ ಸಾವನ್ನಪ್ಪಿದ್ದ ಓರ್ವ ಬಾಲಕಿಯ ಘಟನೆಯೂ ಸೇರಿಕೊಳ್ಳುತ್ತದೆ. ದಕ್ಷಿಣಕನ್ನಡದ ಹಳ್ಳಿಗಳ ಕಡೆ ಕಣಜದ ಗೂಡು ಸರ್ವೇಸಾಮಾನ್ಯ. ತೋಟಗಳಲ್ಲಿ, ಕಾಡುಗಳಲ್ಲಿ, ಮರಗಿಡಗಳಲ್ಲಿ ಈ ಕಣಜದ ಹುಳುಗಳು ಗೂಡು ಕಟ್ಟಿಕೊಂಡಿರುತ್ತವೆ. ನೋಡಲು ಕಾಗದದ ಗೂಡಿನಂತೆ ಕಾಣುವ ಈ ಗೂಡಿನ ನಿರ್ಮಾಣ ಬಹಳ ಅದ್ಭುತ.

ಹೇಗಿದೆ ಕಣಜದ ಹುಳುಗಳ ಚಟುವಟಿಕೆ?

ಬೆಳಗ್ಗಿನ ಹೊತ್ತು ಈ ಗೂಡು ರಂಧ್ರಗಳಿಂದ ಕೂಡಿರುತ್ತದೆ. ರಾತ್ರಿ ವೇಳೆ ಹುಳುಗಳೆಲ್ಲ ಗೂಡು ಸೇರಿದ ಮೇಲೆ ಸಂಪೂರ್ಣ ಮುಚ್ಚಿರುತ್ತದೆ. ಮನುಷ್ಯರು ಓಡಾಡುವ ಜಾಗದಲ್ಲಿ, ಅಕ್ಕಪಕ್ಕಗಳಲ್ಲಿ ಈ ಗೂಡು ಕಂಡು ಬಂದರೆ ರಾತ್ರಿ ಹೊತ್ತು ಬೆಂಕಿ ಕೊಟ್ಟು ಅದನ್ನು ಸುಟ್ಟು ಹಾಕುತ್ತಾರೆ. ರಾತ್ರಿ ವೇಳೆಯೇ ಈ ರೀತಿ ಮಾಡಲು‌ ಕಾರಣವೇನೆಂದರೆ ಗೂಡಿನ ರಂಧ್ರ ಸಂಪೂರ್ಣ ಮುಚ್ಚಿರುವುದರಿಂದ ಹುಳುಗಳಿಗೆ ಹೊರಗೆ ಬರಲು ಸಾಧ್ಯವಾಗೋದಿಲ್ಲ.  phospholipase A and phospholipase B,acetylcholine and serotonin, Anaphylaxis ಈ ಕೆಮಿಕಲ್‌ ಗಳನ್ನು ಕಣಜ ಹೊಂದಿದೆ, ಇಷ್ಟರಲ್ಲಿ ಕೊನೆಯ ಕೆಮಿಕಲ್‌ ಜೀವಾಂತಕವಾಗಿ ಪರಿಣಮಿಸಬಲ್ಲದು.

ಮನುಷ್ಯನ ಮೇಲೆ ಗಂಭೀರ ಪ್ರಭಾವ ಬೀರುವ ಕಣಜ

ಇದನ್ನೂ ಓದಿ: Achievement: ಈ ಯೋಜನೆ ಅಳವಡಿಸಿಕೊಂಡು ದೇಶಕ್ಕೇ ಮಾದರಿಯಾಯ್ತು ಪುತ್ತೂರು! 3 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಇಂಧನ ಕ್ರಾಂತಿ

ಒಂದು ವೇಳೆ ಬೆಳಗ್ಗೆ ಗೂಡಿನ ರಂಧ್ರಗಳು ತೆರೆದಿರುವಾಗ ಬೆಂಕಿ ಹಚ್ಚಿದಲ್ಲಿ ಹುಳುಗಳೆಲ್ಲ ಹೊರಗೆ ಬಂದು ಮನುಷ್ಯರನ್ನು ಕಚ್ಚುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಈ ಗೂಡನ್ನು ಕಂಡಲ್ಲಿ ಅವುಗಳನ್ನು ಬೆಂಕಿ‌ಕೊಟ್ಟು‌ ಸುಡಲಾಗುತ್ತದೆ. ಅತ್ಯಂತ ಅಪಾಯಕಾರಿ ವಿಷದ ಹುಳುಗಳಾಗಿರುವ ಕಾರಣ ಕೇವಲ ನಾಲ್ಕೈದು ಹುಳುಗಳು ಕಚ್ಚಿದರೂ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಮತ್ತು ಕೆಲವು ಸಂದರ್ಭದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಇರುವುದರಿಂದಲೇ, ಜನವಸತಿ ಇರುವ ಪ್ರದೇಶಗಳಲ್ಲಿ ಕಣಜದ ಹುಳುಗಳ ಗೂಡುಗಳನ್ನು ನಾಶ ಮಾಡಲಾಗುತ್ತದೆ.