Last Updated:
ದಕ್ಷಿಣಕನ್ನಡದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 12 ರೀತಿಯ ನೀರು ಪರೀಕ್ಷಾ ಕಿಟ್‌ಗಳ ತರಬೇತಿ ಅಭಿಯಾನ ಆರಂಭಿಸಿದೆ, 3 ತಿಂಗಳಿಗೊಮ್ಮೆ ನೀರು ಪರೀಕ್ಷೆ ಕಡ್ಡಾಯ.
ದಕ್ಷಿಣಕನ್ನಡ: ಮನುಷ್ಯನ ಬದುಕಿಗೆ ನೀರೆಷ್ಟು (Water) ಮುಖ್ಯವೋ, ಒಂದು ವೇಳೆ ಅದೇ ನೀರು ಕಲುಷಿತಗೊಂಡರೆ ಬದುಕಿನ ನಾಶಕ್ಕೂ (Destroy) ಕಾರಣವಾಗುತ್ತದೆ. ಮಾನವನಿಗೆ ಬರುವ ಬಹಳಷ್ಟು ರೋಗಗಳು ನೀರಿನಿಂದಲೇ ಉಂಟಾಗುತ್ತವೆ. ಈ ಹಿನ್ನಲೆಯಲ್ಲಿ ಇದೀಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ನೀರು ಪರೀಕ್ಷೆಯ (Examine) ಅಭಿಯಾನವೊಂದನ್ನು ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ನೀರು ಪರೀಕ್ಷೆಯ ಪ್ರಾಯೋಗಿಕ ತರಬೇತಿಯನ್ನು (Training) ನೀಡಲಾಗುತ್ತಿದೆ.
ಗ್ರಾಪಂಗಳಲ್ಲಿ ಈ ಹಿಂದೆಯೂ ನೀರು ಪರೀಕ್ಷೆ ನಡೆಸುವ ಕಿಟ್‌ಗಳನ್ನು ನೀಡಲಾಗಿತ್ತು. ಆದರೆ ಈ ಕಿಟ್‌ಗಳು ಕೋಣೆಯ ಮೂಲೆ ಸೇರಿದ್ದನ್ನು ಬಿಟ್ಟರೆ ಉಪಯೋಗವಾಗಿರುವುದು ಕಡಿಮೆ. ಹಾಗಾಗಿ ಗ್ರಾಮೀಣ ಮಟ್ಟದಲ್ಲಿ ಕಲುಷಿತ ನೀರು ಪರೀಕ್ಷೆ ಎಂಬ ವಿಚಾರವೇ ಬದಿಗೊತ್ತಲ್ಪಟ್ಟಿತ್ತು. ಆದರೆ ಇದೀಗ ಆಧುನಿಕ ವ್ಯವಸ್ಥೆಯ ಪ್ರಯೋಗಾಲಯ ಕಿಟ್‌ಗಳನ್ನು ಗ್ರಾಪಂಗಳಿಗೆ ನೀಡಲಾಗುತ್ತಿದೆ.
ಗ್ರಾಪಂಗಳಲ್ಲಿ ಆಯ್ಕೆಯಾಗಿರುವ ನೀರುಗಂಟಿಗಳಿಗೆ, ಅವರಿಗೆ ಪೂರಕವಾಗಿ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ತರಬೇತಿಯಲ್ಲಿ ಅವಕಾಶ ನೀಡಲಾಗಿದೆ. ಫೆಬ್ರವರಿ 2 ರಿಂದ 12 ತನಕ ರಾಜ್ಯದ ಎಲ್ಲಾ ತಾಪಂ ಕಚೇರಿಗಳಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 12 ರೀತಿಯ ಪರೀಕ್ಷೆಯನ್ನು ಈ ಪ್ರಯೋಗ ಕಿಟ್ ಮೂಲಕ ನಡೆಸಬಹುದಾಗಿದೆ.
ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲು ಪಿಎಚ್, ಐರ್ಬಿಡಿಟಿ, ಗಡಸುತನ, ಕ್ಯಾಲ್ಸಿಯಂ, ಮೆಗ್ನೇಷಿಯಂ, ಕ್ಷಾರೀಯತೆ, ಉಳಿಕೆ ಕ್ಲೋರಿನ್, ಕಬ್ಬಿಣಾಂಶ, ನೈಟ್ರೇಟ್, ಫ್ಲೋರೈಡ್ ಹಾಗೂ ಬ್ಯಾಕ್ಟಿರೀಯಾ ಪರೀಕ್ಷೆಗಳನ್ನು ನಡೆಸಲು ಈ ಅಭಿಯಾನದಲ್ಲಿ ತರಬೇತಿ ನೀಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ನೀರಿನ ಬಣ್ಣ ಬದಲಾಗದಿದ್ದರೆ ಅಥವಾ ಹಳದಿ ಬಣ್ಣಕ್ಕೆ ಬದಲಾದರೆ ಅದು ಕುಡಿಯಲು ಯೋಗ್ಯವಾದ ನೀರು ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಪರೀಕ್ಷೆಯ ಸಂದರ್ಭದಲ್ಲಿ ನೀರು ಕಪ್ಪು ಬಣ್ಣಕ್ಕೆ ಬದಲಾದರೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿಯಬೇಕು.
3 ತಿಂಗಳಿಗೊಮ್ಮೆ ಸ್ವಚ್ಛ ಮಾಡುವ ಯೋಜನೆ
ಗ್ರಾಪಂಗಳಿಂದ ಜನರಿಗೆ ಕುಡಿಯಲು ನೀಡಲಾಗುವ ನೀರನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು. ಅಂಗನವಾಡಿ ಮತ್ತು ಶಾಲೆಗಳಲ್ಲಿಯೂ ಇದೇ ರೀತಿಯಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಶಾಲೆ, ಅಂಗನವಾಡಿ ಮತ್ತು ಗ್ರಾಪಂಗೆ ಸೇರಿದ ನೀರಿನ ಟ್ಯಾಂಕ್‌ಗಳನ್ನು 3 ತಿಂಗಳಿಗೊಮ್ಮೆ ಸ್ವಚ್ಛ ಮಾಡಬೇಕು ಎಂಬ ಕಡ್ಡಾಯ ನಿಯಮವನ್ನೂ ಈ ತರಬೇತಿ ಸಮಯದಲ್ಲಿ ತಿಳಿಸಲಾಗುತ್ತಿದೆ.
Dakshina Kannada,Karnataka