WCL 2025: ಪಾಕಿಸ್ತಾನ ಬೌಲರ್​ಗಳನ್ನ ಚಿಂದಿ ಉಡಾಯಿಸಿ ಶತಕ ಸಿಡಿಸಿದ ಎಬಿಡಿ! WCL ಚಾಂಪಿಯನ್ ಆಗಿ ದಕ್ಷಿಣ ಆಫ್ರಿಕಾ | abd’s 47-ball ton steals the show as south africa champions lift wcl 2025 trophy | ಕ್ರೀಡೆ

WCL 2025: ಪಾಕಿಸ್ತಾನ ಬೌಲರ್​ಗಳನ್ನ ಚಿಂದಿ ಉಡಾಯಿಸಿ ಶತಕ ಸಿಡಿಸಿದ ಎಬಿಡಿ! WCL ಚಾಂಪಿಯನ್ ಆಗಿ ದಕ್ಷಿಣ ಆಫ್ರಿಕಾ | abd’s 47-ball ton steals the show as south africa champions lift wcl 2025 trophy | ಕ್ರೀಡೆ

Last Updated:


196 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ ಪವರ್​​ ಪ್ಲೇನಲ್ಲಿ 72 ರನ್​ಗಳಿಸಿತು. ಆದರೆ 6ನೇ ಓವರ್​ನ ಕೊನೆಯ ಹಾಶಿಮ್ ಆಮ್ಲಾ ಕೇವಲ 18 ರನ್‌ಗಳಿಗೆ ಔಟ್ ಆದರು.

ಎಬಿ ಡಿವಿಲಿಯರ್ಸ್​ಎಬಿ ಡಿವಿಲಿಯರ್ಸ್​
ಎಬಿ ಡಿವಿಲಿಯರ್ಸ್​

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ, ಎಬಿ ಡಿವಿಲಿಯರ್ಸ್ (AB de Villiers) ಅವರ ಮಿಂಚಿನ ಶತಕ ನೆರವಿನಿಂದ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ (South Africa Champions) ಪಾಕಿಸ್ತಾನ ಚಾಂಪಿಯನ್ಸ್ (Pakistan Champion) ವಿರುದ್ಧ 9 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ, ಪಾಕಿಸ್ತಾನ ಚಾಂಪಿಯನ್ಸ್ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು. ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು. ಈ ಗುರಿಯನ್ನ ದಕ್ಷಿಣ ಆಫ್ರಿಕಾ 16.5 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿ ಚಾಂಪಿಯನ್ ಆಯಿತು.

ಪಾಕಿಸ್ತಾನ ಇನ್ನಿಂಗ್ಸ್

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಪರ ಶಾರ್ಜೀಲ್ ಖಾನ್ ಮತ್ತು ಕಮ್ರಾನ್ ಅಕ್ಮಲ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಕಮ್ರಾನ್ ಅಕ್ಮಲ್ 2 ರನ್‌ಗಳಿಗೆ ಔಟಾದರು, ಆದರೆ ಶಾರ್ಜೀಲ್ ಖಾನ್ ಆಕ್ರಮಣಕಾರಿಯಾಗಿ ಆಡಿದರು. ಅವರು 44 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರು. ನಂತರ ಬಂದ ನಾಯಕ ಹಫೀಜ್ 17 ರನ್‌ಗಳಿಗೆ ಮತ್ತು ಶೋಯೆಬ್ ಮಲಿಕ್ 20 ರನ್‌ಗಳಿಗೆ ಔಟಾದರು. ಅಂತಿಮ ಹಂತದಲ್ಲಿ, ಉಮರ್ ಅಮೀನ್ 19 ಎಸೆತಗಳಲ್ಲಿ 36 ರನ್ ಗಳಿಸಿದರು ಮತ್ತು ಆಸಿಫ್ ಅಲಿ 15 ಎಸೆತಗಳಲ್ಲಿ 28 ರನ್ ಗಳಿಸಿ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಲು ನೆರವಾದರು. ದಕ್ಷಿಣ ಆಫ್ರಿಕಾ ಪರ, ಹಾರ್ಡಸ್ ವಿಲ್ಸನ್ ಮತ್ತು ವೇಯ್ನ್ ಪಾರ್ನೆಲ್ ತಲಾ ಎರಡು ವಿಕೆಟ್ ಪಡೆದರು.

ಎಬಿಡಿ ಸಿಡಿಲಬ್ಬರದಾಟ

196 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ ಪವರ್​​ ಪ್ಲೇನಲ್ಲಿ 72 ರನ್​ಗಳಿಸಿತು. ಆದರೆ 6ನೇ ಓವರ್​ನ ಕೊನೆಯ ಹಾಶಿಮ್ ಆಮ್ಲಾ ಕೇವಲ 18 ರನ್‌ಗಳಿಗೆ ಔಟ್ ಆದರು. ಆದರೆ’ಮಿಸ್ಟರ್ 360′ ಎಬಿ ಡಿವಿಲಿಯರ್ಸ್ ಪಾಕಿಸ್ತಾನಿ ಬೌಲಿಂಗ್ ಅನ್ನು ಚಿಂದಿ ಉಡಾಯಿಸಿದರು. ಎಬಿಡಿ ಜೊತೆಗೆ ನಿಂತ ಜೀನ್-ಪಾಲ್ ಡುಮಿನಿ ನಿಧಾನವಾಗಿ ಆಡಿದರೆ, ಡಿವಿಲಿಯರ್ಸ್ ಮಾತ್ರ ಕೊನೆಯವರೆಗೂ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಡಿವಿಲಿಯರ್ಸ್ ಕೇವಲ 60 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ ಔಟಾಗದೆ 120 ರನ್ ಗಳಿಸಿದರು. ಇದರೊಂದಿಗೆ, ಡಿವಿಲಿಯರ್ಸ್ ಈ ಸರಣಿಯಲ್ಲಿ ತಮ್ಮ ಮೂರನೇ ಶತಕವನ್ನು ದಾಖಲಿಸಿದರು.

ಡುಮಿನಿ 28 ಎಸೆತಗಳಲ್ಲಿ ಔಟಾಗದೆ 50 ರನ್ ಗಳಿಸಿದರು. ಈ ಜೋಡಿಯ ಅತ್ಯುತ್ತಮ ಪ್ರದರ್ಶನದಿಂದ, ದಕ್ಷಿಣ ಆಫ್ರಿಕಾ ತಂಡ 16.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ 9 ವಿಕೆಟ್‌ಗಳ ಅದ್ಭುತ ಅಂತರದಿಂದ ಕಪ್ ಗೆದ್ದುಕೊಂಡಿತು. ಡಿವಿಲಿಯರ್ಸ್ ಈ ಮಿಂಚಿನ ಆಟದ ಮೂಲಕ ಪಾಕಿಸ್ತಾನ ತಂಡದಿಂದ ಜಯವನ್ನು ಕಸಿದುಕೊಂಡರು.

ಟೂರ್ನಿಯಲ್ಲಿ ಡಿವಿಲಿಯರ್ಸ್ ಪ್ರದರ್ಶನ

ಎಬಿ ಡಿ ವಿಲಿಯರ್ಸ್ ಈ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದು, 431 ರನ್​ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 1 ಅರ್ಧಶತಕ ಕೂಡ ಇದೆ. 2ನೇ ಸ್ಥಾನದಲ್ಲಿರುವ ಜೆಜೆ ಸ್ಮಟ್ಸ್​ 186 ರನ್​ಗಳಿಸಿದ್ದಾರೆ. ಅಂದರೆ ಎಬಿಡಿ ಸುಮಾರು 250ಕ್ಕೂ ಹೆಚ್ಚು ರನ್​ಗಳ ಲೀಡ್​​ನಲ್ಲಿದ್ದಾರೆ. ಇದು ಮಾತ್ರವಲ್ಲ ಗರಿಷ್ಠ ಸಿಕ್ಸರ್​ಗಳಪಟ್ಟಿಯಲ್ಲಿ ಎಬಿಡಿ ಅಗ್ರಸ್ಥಾನದಲ್ಲಿದ್ದಾರೆ. ಅವರು 26 ಸಿಕ್ಸರ್ ಸಿಡಿಸಿದರೆ, 2ನೇ ಸ್ಥಾನದಲ್ಲಿರುವ ಕ್ರಿಸ್ ಲಿನ್ 16 ಸಿಕ್ಸರ್ ಸಿಡಿಸಿದ್ದಾರೆ. ಫೋರ್ಸ್​ಗಳ ಸಂಖ್ಯೆಯಲ್ಲೂ ಎಬಡಿ ಪ್ರಾಬಲ್ಯ ಸಾಧಿಸಿದ್ದಾರೆ. ಅವರು 46 ಫೋರ್ಸ್ ಸಿಡಿಸಿದರೆ, 2ನೇ ಸ್ಥಾನದಲ್ಲಿರುವ ಜೆಜೆ ಸ್ಮಟ್ಸ್ 23 ಬೌಂಡರಿ ಸಿಡಿಸಿದ್ದಾರೆ.