WI vs AUS: 4 ಸಿಕ್ಸರ್, 2 ಬೌಂಡರಿ, ವಿದಾಯದ ಪಂದ್ಯದಲ್ಲೂ ಅಬ್ಬರಿಸಿದ ವಿಂಡೀಸ್ ದೈತ್ಯ! ಆಸಿಸ್ ಬೆಂಡೆತ್ತಿ ನಿವೃತ್ತಿಯಾದ ಸ್ಟಾರ್ ಆಲ್​ರೌಂಡರ್ | Andre Russell explosive batting in his final match retires with 36 runs

WI vs AUS: 4 ಸಿಕ್ಸರ್, 2 ಬೌಂಡರಿ, ವಿದಾಯದ ಪಂದ್ಯದಲ್ಲೂ ಅಬ್ಬರಿಸಿದ ವಿಂಡೀಸ್ ದೈತ್ಯ! ಆಸಿಸ್ ಬೆಂಡೆತ್ತಿ ನಿವೃತ್ತಿಯಾದ ಸ್ಟಾರ್ ಆಲ್​ರೌಂಡರ್ | Andre Russell explosive batting in his final match retires with 36 runs

Last Updated:

2ನೇ ಟಿ-20 ಪಂದ್ಯವನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತು. ಈ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು

ರಸೆಲ್ ನಿವೃತ್ತಿರಸೆಲ್ ನಿವೃತ್ತಿ
ರಸೆಲ್ ನಿವೃತ್ತಿ

ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (West Indies vs Australia) ನಡುವಿನ 2ನೇ ಟಿ-20 ಪಂದ್ಯವನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತು. ಈ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು. ಆದ್ರೆ, ತಮ್ಮ ಕೊನೆಯ ಪಂದ್ಯದಲ್ಲೂ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಅವರು ಗಮನಸೆಳೆದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅಂಡ್ರೆ ರಸೆಲ್ (Andre Russell) ಹೊಡಿಬಡಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡಲು ಕಾರಣರಾದರು.

ವೆಸ್ಟ್ ಇಂಡೀಸ್ ತಂಡ ರೋಸ್ಟನ್ ಚೇಸ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರ ವಿಕೆಟ್‌ಗಳನ್ನು ಬ್ಯಾಕ್ ಟು ಬ್ಯಾಕ್ ಕಳಡದುೊಂಡಾಗ ವಿಂಡೀಸ್ 98-5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಲು ಬಂದ ರಸೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಬೌಂಡರಿ ಸಿಕ್ಸರ್ ಸುರಿಮಳೆ

ಅವರು ತಾವು ಎದುರಿಸಿದ ಎರಡನೇ ಎಸೆತವನ್ನೇ ಸಿಕ್ಸರ್ ಬಾರಿಸುವ ಮೂಲಕ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಬೆನ್ ದ್ವಾರ್ಶುಯಿಸ್ ಬೌಲಿಂಗ್‌ನಲ್ಲಿ ಅವರು ಮತ್ತೆರಡು ಸಿಕ್ಸರ್‌ಗಳನ್ನು ಬಾರಿಸಿದರು ಮತ್ತು 7 ಎಸೆತಗಳಲ್ಲಿ 20 ರನ್‌ಗಳನ್ನು ಗಳಿಸಿದರು. ನಂತರ ರಸೆಲ್ ಮುಂದಿನ ಓವರ್‌ನಲ್ಲಿ ಆಡಮ್ ಝಂಪಾ ಬೌಲಿಂಗ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಆ ಮೂಲಕ ಅವರು ತಮ್ಮ ಕೊನೆಯ ಪಂದ್ಯದಲ್ಲಿ 15 ಎಸೆತಗಳಲ್ಲಿ 36 ರನ್‌ಗಳಿಗೆ ಔಟಾದರು. ರಸೆಲ್ ಅವರ ಈ ಸ್ಫೋಟಕ ಬ್ಯಾಟಿಂಗ್ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 172 ರನ್ ಗಳಿಸಲು ಸಹಕಾರಿಯಾಯಿತು.

ಅನುಭವಿ ಆಲ್‌ರೌಂಡರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅವರು ಒಟ್ಟು 86 ಪಂದ್ಯಗಳಲ್ಲಿ 163 ಸ್ಟ್ರೈಕ್ ರೇಟ್‌ನಲ್ಲಿ 1122 ರನ್‌ ಗಳಿಸಿದ್ದಾರೆ. ಮಾತ್ರಲ್ಲ, ರಸೆಲ್ ತಮ್ಮ ಟಿ-20ಐ ವೃತ್ತಿಜೀವನದಲ್ಲಿ 61 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಆಂಡ್ರೆ ರಸೆಲ್‌ಗೆ ಗಾರ್ಡ್ ಆಫ್ ಆನರ್

ಇದಕ್ಕೂ ಮುನ್ನ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಬ್ಯಾಟಿಂಗ್ ಮಾಡಲು ಬಂದ ವೆಸ್ಟ್ ಇಂಡೀಸ್‌ನ ಶ್ರೇಷ್ಠ ಆಟಗಾರನಿಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಗಾರ್ಡ್ ಆಫ್ ಆನರ್ ನೀಡಿದರು. ಇನ್ನೂ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟಿಂಗ್ ಬರುವ ಸಂದರ್ಭದಲ್ಲಿ ಅವರು ಭಾವುಕರಾಗಿರುವುದು ಕೂಡ ಕಂಡು ಬಂದಿತು. ತಂಡಕ್ಕಾಗಿ ಉತ್ತಮವಾಗಿ ಆಡುವತ್ತ ಗಮನಹರಿಸಿದ್ದೆ. ತಮ್ಮ ಕೊನೆಯ ಟಿ20ಐ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಅಧಿಕ ಸಂಖ್ಯೆಯ ಅಭಿಮಾನಿಗಳಿಗೆ ರಸೆಲ್ ಧನ್ಯವಾದ ಅರ್ಪಿಸಿದರು.

ವಿಧಾಯದ ಪಂದ್ಯವನ್ನು ಸೋಲಿನೊಂದಿಗೆ ಮುಗಿಸಲು ಇಷ್ಟಪಡುವುದಿಲ್ಲ. ಇಂದಿನ ಗೆಲುವು ನನಗೆ ಮತ್ತು ವಿಂಡೀಸ್ ತಂಡಕ್ಕೆ ಮುಖ್ಯವಾಗಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ನಾವು ಬ್ಯಾಟಿಂಗ್‌ನಲ್ಲಿ 20 ರನ್ ಕಡಿಮೆ ಕಲೆಹಾಕಿದೆವು ಎಂದು ನನಗೆ ಅನಿಸುತ್ತದೆ ಎಂದರು. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಗೆಲುವಿನೊಂದಿಗೆ ಮುಗಿಸಲು ಬಯಸುತ್ತೇನೆ, ಕೊನೆಯ ಬಾರಿ ಬ್ಯಾಟಿಂಗ್ ಹೋದಾಗ ಸ್ವಲ್ಪ ಭಾವುಕನಾಗಿದ್ದೆ. ಆದರೆ ನಾನು ನನ್ನ ಕೆಲಸದ ಮೇಲೆ ಕೇಂದ್ರೀಕರಿಸಿದ್ದೆ ಎಂದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

WI vs AUS: 4 ಸಿಕ್ಸರ್, 2 ಬೌಂಡರಿ, ವಿದಾಯದ ಪಂದ್ಯದಲ್ಲೂ ಅಬ್ಬರಿಸಿದ ವಿಂಡೀಸ್ ದೈತ್ಯ! ಆಸಿಸ್ ಬೆಂಡೆತ್ತಿ ನಿವೃತ್ತಿಯಾದ ಸ್ಟಾರ್ ಆಲ್​ರೌಂಡರ್