WI vs BAN: 6 ಎಸೆತಗಳಲ್ಲಿ 5 ರನ್ ಗಳಿಸಲು ವಿಫಲ; ಆದರೆ ಸೂಪರ್ ಓವರ್​ನಲ್ಲಿ ಬಾಂಗ್ಲಾ ಬಗ್ಗು ಬಡಿದ ವೆಸ್ಟ್ ಇಂಡೀಸ್ ​/ West Indies beat Bangladesh in Super Over in second ODI | ಕ್ರೀಡೆ

WI vs BAN: 6 ಎಸೆತಗಳಲ್ಲಿ 5 ರನ್ ಗಳಿಸಲು ವಿಫಲ; ಆದರೆ ಸೂಪರ್ ಓವರ್​ನಲ್ಲಿ ಬಾಂಗ್ಲಾ ಬಗ್ಗು ಬಡಿದ ವೆಸ್ಟ್ ಇಂಡೀಸ್ ​/ West Indies beat Bangladesh in Super Over in second ODI | ಕ್ರೀಡೆ

Last Updated:

ಮಂಗಳವಾರ ಮೀರ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿತು.

West Indies vs Bangladesh
West Indies vs Bangladesh

ಮಂಗಳವಾರ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ (West Indies vs Bangladesh) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (ODI series)ಯ ಎರಡನೇ ಪಂದ್ಯ ಮಿರ್ಪುರದಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಈ ಪಂದ್ಯದ ಫಲಿತಾಂಶವನ್ನು ಸೂಪರ್ ಓವರ್‌(Super Over)ನಲ್ಲಿ ನಿರ್ಧರಿಸಲಾಯಿತು. ಮೊದಲು ಬ್ಯಾಟಿಂಗ್ (Batting) ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 213 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಕೂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 213 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಪಂದ್ಯದ ಫಲಿತಾಂಶ ಸೂಪರ್ ಓವರ್​ಗೆ ಹೋಯಿತು.

ಸೂಪರ್ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಒಂದು ವಿಕೆಟ್‌ ಕಳೆದುಕೊಂಡು 10 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಗೆಲ್ಲಲು 11 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ಬಾಂಗ್ಲಾ ತಂಡವು ಕೇವಲ 9 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಜೊತೆಗೆಒಂದು ವಿಕೆಟ್ ಕಳೆದುಕೊಂಡು ಪಂದ್ಯವನ್ನು ಸೋತಿತು.

ಇತಿಹಾಸ ಸೃಷ್ಟಿಸಿದ ವಿಂಡೀಸ್

ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯವು ಅಕ್ಟೋಬರ್ 23 ರಂದು ನಡೆಯಲಿದೆ.