ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ವರು ಐಪಿಎಲ್ ಆಟಗಾರರು
ಐಪಿಎಲ್ 2025 ರ ಪ್ಲೇಆಫ್‌ಗಳಿಗೆ ಮುಂಚಿತವಾಗಿ ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸಲು ತಮ್ಮ ದೇಶಕ್ಕೆ ಮರಳಿದ 4 ಆಟಗಾರರು ಇಂಗ್ಲೆಂಡ್‌ನ ಪ್ಲೇಯಿಂಗ್-11 ರಲ್ಲಿ ಸೇರಿದ್ದಾರೆ. ಇದರಲ್ಲಿ ಆಲ್‌ರೌಂಡರ್ ಜಾಕೋಬ್ ಬೆಥೆಲ್ (ಆರ್‌ಸಿಬಿ), ಮಾಜಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (ಜಿಟಿ) ಮತ್ತು ವಿಲ್ ಜ್ಯಾಕ್ಸ್ (ಎಂಐ) ಅವರ ಹೆಸರುಗಳು ಸೇರಿವೆ ಇವರೆಲ್ಲರೂ ಪ್ಲೇ ಆಫ್ ತಂಡದಲ್ಲಿದ್ದವರಾದರೆ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಸಿಎಸ್ಕೆ ತಂಡದ ಜೇಮೀ ಓವರ್ಟನ್ ಕೂಡ ಪ್ಲೇಯಿಂದ ಇಲೆವೆನ್ನಲ್ಲಿದ್ದಾರೆ
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಫಿಲ್ ಸಾಲ್ಟ್ ಅವರನ್ನು ತಂಡದಿಂದ ಕೈಬಿಡಲಾಗಿರುವುದರಿಂದ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಜೇಮೀ ಸ್ಮಿತ್ ಬೆನ್ ಡಕೆಟ್ ಜೊತೆಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ.
ಸರಣಿಯಿಂದ ಹೊರಬಿದ್ದ ಆರ್ಚರ್
ಮತ್ತೊಂದೆಡೆ, ಗಸ್ ಅಟ್ಕಿನ್ಸನ್ ಮತ್ತು ಜೋಫ್ರಾ ಆರ್ಚರ್ ಗಾಯಗಳಿಂದಾಗಿ ಸರಣಿಗೆ ಲಭ್ಯವಿರುವುದಿಲ್ಲ. ಜೋಫ್ರಾ ಆರ್ಚರ್ ಅವರನ್ನು ಆರಂಭದಲ್ಲಿ ಸರಣಿಯ ODI ತಂಡಕ್ಕೆ ಆಯ್ಕೆ ಮಾಡಲಾಗಿತ್ತು ಆದರೆ ನಂತರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಹೆಬ್ಬೆರಳಿನ ಗಾಯದಿಂದಾಗಿ ಅವರನ್ನು ಹೊರಗಿಡಲಾಗಿದೆ.
ಭಾರತ ಸರಣಿಗೆ ಲಭ್ಯ
ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ ವಿರುದ್ಧ ಇಂಗ್ಲೆಂಡ್ ತಂಡವು ಗೆದ್ದ ಏಕೈಕ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಟ್ಕಿನ್ಸನ್ ಮಂಡಿರಜ್ಜು ನೋವಿಗೆ ಒಳಗಾದರು. ಆದಾಗ್ಯೂ, ಜೂನ್ 20 ರಿಂದ ಆರಂಭವಾಗುವ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ.
ಎರಡೂ ತಂಡಗಳ ವಿವರ
ಇಂಗ್ಲೆಂಡ್‌ನ ಪ್ಲೇಯಿಂಗ್-11 : ಬೆನ್ ಡಕೆಟ್, ಜೇಮೀ ಸ್ಮಿತ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸೆ, ಸಾಕಿಬ್ ಮಹಮೂದ್, ಆದಿಲ್ ರಶೀದ್
ವೆಸ್ಟ್ ಇಂಡೀಸ್ ತಂಡ: ಬ್ರೆಂಡನ್ ಕಿಂಗ್, ಎವಿನ್ ಲೂಯಿಸ್, ಕೀಸೀ ಕಾರ್ಟಿ, ಶಾಯ್ ಹೋಪ್ (ವಿಕೆಟ್ ಕೀಪರ್/ನಾಯಕ), ಆಮಿರ್ ಜಂಗೂ, ಜಸ್ಟಿನ್ ಗ್ರೀವ್ಸ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋತಿ, ಶಮರ್ ಜೋಸೆಫ್, ಜೆಡಿಯಾ ಬ್ಲೇಡ್ಸ್, ಜ್ಯುವೆಲ್ ಆಂಡ್ರ್ಯೂ, ಜೇಡನ್ ಸೀಲ್ಸ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೊ ಶೆಫರ್ಡ್, ಶಿಮ್ರಾನ್ ಹೆಟ್ಮೈರ್.