Last Updated:
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯುವ ಅವಕಾಶ ಕೂಡ ಇತ್ತು. ಆದ್ರೆ, ಅವರು 367 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು.
ದಕ್ಷಿಣ ಆಫ್ರಿಕಾದ ಹಂಗಾಮಿ ನಾಯಕ ವಿಯಾನ್ ಮುಲ್ಡರ್ (Wian Mulder) ಕೆಲವು ದಿನಗಳ ಹಿಂದೆ ದೊಡ್ಡ ದಾಖಲೆ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ, ಅವರಿಗೆ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ (Brian Lara) ಅವರ 400 ರನ್‌ಗಳ ದಾಖಲೆಯನ್ನು ಮುರಿಯುವ ಅವಕಾಶ ಕೂಡ ಇತ್ತು. ಆದ್ರೆ, ಅವರು 367 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು. ಅವರು ಲಾರ ದಾಖಲೆಗೆ ಜಸ್ಟ್ 33 ರನ್ ದೂರದಲ್ಲಿದ್ದರು. ಬಳಿಕ ಅವರು ಆ ದಾಖಲೆ ಲಾರ ಹೆಸರಿನಲ್ಲೇ ಉಳಿಯಬೇಕು ಎಂದು ಇನ್ನಿಂಗ್ಸ್ ಡಿಕ್ಲೆರ್ ಮಾಡಿಕೊಂಡಿರುವುದಾಗಿ ಹೇಳಿದರು.
ಈ ಘಟನೆಯಿಂದಾಗಿ, ಕ್ರಿಕೆಟ್ ವಲಯವು ಆಶ್ಚರ್ಯಚಕಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಈಗ ವಿಯಾನ್ ಮುಲ್ಡರ್ ಅವರ ನಿರ್ಧಾರವನ್ನು ಖಂಡಿಸಿದ್ದಾರೆ. ಮಾತ್ರವಲ್ಲ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮುಲ್ಡರ್ 367 ರನ್ ಗಳಿಸಿ ಅಜೇಯರಾಗಿದ್ದರು. ಈ ಸಮಯದಲ್ಲಿ, ಅವರು ಬ್ರಿಯಾನ್ ಲಾರಾ ಅವರ 400 ರನ್‌ಗಳ ವಿಶ್ವ ದಾಖಲೆಗೆ ಕೇವಲ 33 ರನ್‌ಗಳ ದೂರದಲ್ಲಿದ್ದರು. ಆದರೆ ಅದೇ ಸಮಯದಲ್ಲಿ, ಅವರು ತಂಡದ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದ್ದರು.
ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ರಿಸ್ ಗೇಲ್ ಅವರ ನಿರ್ಧಾರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯಲು ಪ್ರಯತ್ನಿಸದೆ ಮುಲ್ಡರ್ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಅವರು ಹೇಳಿದರು.
ಟಾಕ್ಸ್‌ಸ್ಪೋರ್ಟ್‌ನ ಹಾಕ್ಸ್‌ಬೈ ಮತ್ತು ಜೇಕಬ್ಸ್‌ನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಲ್, “ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್ ಗಳಿಸುವುದು ಸುಲಭವಲ್ಲ. ಅದು ಆಗಾಗ್ಗೆ ಸಂಭವಿಸುದೂ ಇಲ್ಲ. ನೀವು ಮತ್ತೆ ಯಾವಾಗ ತ್ರಿಶತಕ ಗಳಿಸುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ನಿಮಗೆ ಅಂತಹ ಅವಕಾಶ ಸಿಕ್ಕಾಗಲೇ ಅದನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಆದರೆ ಅವರು (ಮುಲ್ಡರ್) ತುಂಬಾ ಉದಾರರಾಗಿದ್ದರು ಮತ್ತು ಬ್ರಿಯಾನ್ ಲಾರಾ ಅವರ ಹೆಸರಿನಲ್ಲೇ ಆ ದಾಖಲೆ ಉಳಿಯಬೇಕೆಂದು ಬಯಸಿದ್ದರು. ಮಾತ್ರವಲ್ಲ, ಅವರು ಭಯಭೀತರಾಗಿರಬಹುದು. ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ” ಎಂದು ಗೇಲ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಜಿಂಬಾಬ್ವೆಯಂತಹ ತಂಡದ ವಿರುದ್ಧ ಕೂಡ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲವು ದಾಖಲೆಗಳನ್ನು ಹಾಗೆಯೇ ಉಳಿಸಲು ನಿರ್ಧರಿಸಿದರೆ ಹೇಗೆ?. ವಿರೋಧಿ ತಂಡ ಯಾರೇ ಆಗಿರಲಿ, ನೀವು ಯಾವುದೇ ತಂಡದ ವಿರುದ್ಧ 100 ರನ್ ಗಳಿಸಿದರೆ, ಅದು ಟೆಸ್ಟ್ ಶತಕ. ನೀವು ಡಬಲ್ ಅಥವಾ ಟ್ರಿಪಲ್, 400 ರನ್ ಗಳಿಸಿದರೆ, ಅದು ಟೆಸ್ಟ್ ಕ್ರಿಕೆಟ್ ಇತಿಹಾಸ. ಅಂತಿಮವಾಗಿ ಅದನ್ನು ಆಟ ಎಂದಷ್ಟೇ ಕರೆಯಲಾಗುತ್ತದೆ” ಎಂದು ಗೇಲ್ ಹೇಳಿದರು.
July 09, 2025 7:54 PM IST