Last Updated:
ದಕ್ಷಿಣ ಕನ್ನಡದ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬದಲ್ಲಿ 80 ಕ್ಕೂ ಹೆಚ್ಚು ಕಾಡಾನೆಗಳ ಹಾವಳಿ ಹೆಚ್ಚಿದ್ದು, ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಜನರು ಆತಂಕದಲ್ಲಿದ್ದಾರೆ.
ಮಂಗಳೂರು: ಮಾನವ ಹಾಗೂ ಪ್ರಾಣಿಗಳ (Animal) ಸಂಘರ್ಷ ತಾರಕಕ್ಕೇರಿದೆ ಎಂಬ ಕಳವಳದ ಮಾತಿನಲ್ಲಿ ತೇಜಸ್ವಿ ಅವರ ಸೂಚನೆ (Warning) ಪ್ರತಿನಿಧಿಸುತ್ತದೆ. ಮನುಷ್ಯನನ್ನ ಕಾಡೊಳಗೆ ಕಾಲಿಡದಂತೆ ನೋಡಿಕೊಂಡರೆ ಸಾಕು! ಅನ್ನೋದೇ ಆ ಸೂಚನೆಯ ಪೂರ್ವಾರ್ಧ. ಮನುಷ್ಯ (Man) ಗಡಿ ದಾಟಿ ತನಗೂ ಪ್ರಾಣಿಗಳಿಗೂ ಮಾರಕವಾಗಿದ್ದಾನೆ. ಅತಿಕ್ರಮಣದ ತೋಟ-ಮನೆ-ರೆಸಾರ್ಟುಗಳು (Resort) ಆನೆಗಳನ್ನು ಕೆರಳಿಸಿ ಈಗ ಅವು ವಿಲನ್ ಎಂಬಂತೆ ಬಿಂಬಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಂಚಿನ ಜನ ಪ್ರತೀ ದಿನ ಕಾಡಾನೆ ಹಾವಳಿಗೆ ಬೇಸತ್ತಿದ್ದಾರೆ. ಕಾಡಾನೆ ಸಂಚಾರದ ಬಗ್ಗೆ ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆಯವರೇ ಮಾಹಿತಿ ನೀಡಿದ್ದು, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬದ ಅರಣ್ಯದಂಚಿನ ಗ್ರಾಮಗಳಲ್ಲಿ ಸುಮಾರು 80 ಆನೆಗಳು ಸಂಚರಿಸುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯದಂಚಿನ ಪ್ರದೇಶದಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳು ಜನರನ್ನು ಆತಂಕದಿಂದ ದಿನದೂಡುವಂತೆ ಮಾಡುತ್ತಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆ ನಾಶವಾಗಿದ್ದು, ಹಲವು ತೋಟಗಳಲ್ಲಿ ಅಡಿಕೆ, ಬಾಳೆ ಗಿಡಗಳಿಗೆ ಹಾನಿಯಾಗಿದೆ. ಕಾಡಾನೆ ಉಪಟಳದಿಂದ ಜನ ಭಯಭೀತರಾಗಿದ್ದಾರೆ.
ಈ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗೆ ಸೂಚನೆ ನೀಡಿರುವ ಅರಣ್ಯ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ, ವಸತಿ ಪ್ರದೇಶಗಳ ಬಳಿ ಆನೆ ಬಂದಾಗ ನಿಗಾ ವಹಿಸಿ, ಕೂಡಲೇ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ಜೀವಹಾನಿ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ.
80 ಕ್ಕೂ ಹೆಚ್ಚು ಆನೆಗಳು ಬಂದಿರೋ ಮಾಹಿತಿ
Dakshina Kannada,Karnataka
December 18, 2025 2:42 PM IST