Last Updated:
ಮಂಗಳೂರಿನ ಕದ್ರಿ ಪಾರ್ಕ್‌ನ ವೈನ್ ಮೇಳದಲ್ಲಿ ಜನ ವೈನ್ ಖರೀದಿಗೆ ಮುಗಿಬಿದ್ದು, ರತ್ನಾಸ್ ವೈನ್ ವಾಲ್ಟ್ ಮತ್ತು ಶೂಲನ್ ಗ್ರೂಪ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಹಬ್ಬದ ಸಂಭ್ರಮ ಹೆಚ್ಚಾಯಿತು.
ಮಂಗಳೂರು: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ (New Year) ದಿನಗಣನೆ ಆರಂಭವಾಗಿದೆ. ಕಡಲ ನಗರಿಯ ಜನ ಹಬ್ಬಕ್ಕೆ ಕಿಕ್ಕೇರಿಸಲು ಸಜ್ಜಾಗಿದ್ದಾರೆ. ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ (Kadri Park) ವೈನ್ ಮೇಳ ನಡೆದಿದ್ದು, ಜನ ದ್ರಾಕ್ಷಾರಸಕ್ಕಾಗಿ (Wine) ಮುಗಿಬಿದ್ದು ಖರೀದಿಸಿದ್ದಾರೆ.
ತರಹೇವಾರಿ ಬಾಟಲಿಗಳು, ವಿವಿಧ ಫ್ಲೇವರ್‌ಗಳ ವೈನ್‌ಗಳು, ಹಬ್ಬಕ್ಕೆ ಕಿಕ್ ನೀಡಿದ ಜನಗಳು. ಈ ದೃಶ್ಯ ಕಂಡು ಬಂದಿದ್ದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ. ರತ್ನಾಸ್ ವೈನ್ ವೇಟ್, ಶೂಲನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ವೈನ್ ಮೇಳ ನಡೆದಿದೆ. ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ವೈನ್ ಮೇಳ ನಡೆದಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪನ್ನಗಳು, ಎಲ್ಲಾ ಕಂಪೆನಿಗಳ ಹೊಸ ಹೊಸ ಪಾನೀಯವನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗಿದೆ. ಅಲ್ಲದೇ ದ್ರಾಕ್ಷಾರಸದ ಉಪಯೋಗಗಳು, ವೈನ್ ಸವಿಯುವ ಕ್ರಮದ ಬಗ್ಗೆಯೂ ಜನರಿಗೆ ವೈನ್ ಮೇಳದಲ್ಲಿ ಮಾಹಿತಿ ನೀಡಲಾಗಿದೆ.
ಕಳೆದ ವರ್ಷವೂ ವೈನ್ ಮೇಳಕ್ಕೆ ಮಂಗಳೂರಿಗರ ಅದ್ಭುತ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಈ ಬಾರಿಯೂ ಜನ ವೈನ್ ಮೇಳದಲ್ಲಿ ಮುಗಿಬಿದ್ದು ವೈನ್ ಖರೀದಿಸಿದ್ದಾರೆ. ವೈನ್ ಖರೀದಿಗೂ ಮುನ್ನ ರುಚಿಯನ್ನು ಸವಿದು ಖರೀದಿ ಮಾಡಬಹುದಾದ ಅವಕಾಶವನ್ನೂ ನೀಡಲಾಗಿತ್ತು. ಹೀಗಾಗಿ ಜನರೂ ಎಲ್ಲಾ ವೈನ್‌ಗಳನ್ನು ಟೇಸ್ಟ್ ಮಾಡಿ ಇಷ್ಟವಾಗಿದ್ದನ್ನು ಖರೀದಿಸಿ ಖುಷಿ ಪಟ್ಟರು.
ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಾನಾ ಸೌಲಭ್ಯ!
Dakshina Kannada,Karnataka
December 08, 2025 10:49 AM IST