Women’s ODI WC: ದೀಪ್ತಿ ಶರ್ಮಾ ಆಲ್​ರೌಂಡರ್​ ಆಟ! ಶ್ರೀಲಂಕಾ ಮಣಿಸಿ ವಿಶ್ವಕಪ್​​​ನಲ್ಲಿ ಭಾರತ ಶುಭಾರಂಭ | All-Rounder Deepti Sharma Powers India to Victory Over Sri Lanka Women | ಕ್ರೀಡೆ

Women’s ODI WC: ದೀಪ್ತಿ ಶರ್ಮಾ ಆಲ್​ರೌಂಡರ್​ ಆಟ! ಶ್ರೀಲಂಕಾ ಮಣಿಸಿ ವಿಶ್ವಕಪ್​​​ನಲ್ಲಿ ಭಾರತ ಶುಭಾರಂಭ | All-Rounder Deepti Sharma Powers India to Victory Over Sri Lanka Women | ಕ್ರೀಡೆ

Last Updated:

ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, 47 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತ್ತು. ಮಳೆಯಿಂದಾಗಿ ಪಂದ್ಯವನ್ನು 47 ಓವರ್ಗಳಿಗೆ ಇಳಿಸಲಾಗಿತ್ತು. ಶ್ರೀಲಂಕಾ ತಂಡ 45.4 ಓವರ್​ಗಳಲ್ಲಿ ಆಲೌಟ್ ಆಯಿತು.

ಭಾರತ ತಂಡ ಶುಭಾರಂಭಭಾರತ ತಂಡ ಶುಭಾರಂಭ
ಭಾರತ ತಂಡ ಶುಭಾರಂಭ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 (Women’s ODI world CUP) ಇಂದಿನಿಂದ ಪ್ರಾರಂಭವಾಗಿದೆ. ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಮೊದಲ ಪಂದ್ಯ ನಡೆದಿದ್ದು, ಭಾರತ ತಂಡ ಶ್ರೀಲಂಕಾ ತಂಡವನ್ನ 59 ರನ್​ಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, 47 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತ್ತು. ಮಳೆಯಿಂದಾಗಿ ಪಂದ್ಯವನ್ನು 47 ಓವರ್ಗಳಿಗೆ ಇಳಿಸಲಾಗಿತ್ತು. ಶ್ರೀಲಂಕಾ ತಂಡ 45.4 ಓವರ್​ಗಳಲ್ಲಿ ಆಲೌಟ್ ಆಯಿತು.

ಭಾರತ ನೀಡಿದ್ದ 270 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ವಿಕೆಟ್​ಗೆ ಕೇವಲ 30 ರನ್​ಗಳ ಜೊತೆಯಾಟ ನಡೆಸಿ ಹಾಸಿನಿ ಪೆರೆರಾ 14 ರನ್​ಗಳಿಸಿ ಔಟ್ ಆದರು. ನಂತರ 2ನೇ ವಿಕೆಟ್​ಗೆ ಚಾಮರಿ ಅಟಪಟ್ಟು ಹಾಗೂ ಹರ್ಷಿತ ಮಾಧವಿ2ನೇ ವಿಕೆಟ್​ಗೆ 52 ರನ್​ಗಳಿಸಿ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ 47 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 47 ರನ್​ಗಳಿಸಿ ಅಪಾಯಕಾರಿಯಾಗುತ್ತಿದ್ದ ಅಟಪಟ್ಟು ವಿಕೆಟ್ ಪಡೆದು ಬಿಗ್ ಬ್ರೇಕ್ ನೀಡಿದರು. ಈ ವಿಕೆಟ್ ನಂತರ ಶ್ರೀಲಂಕಾ ದೊಡ್ಡ ಜೊತೆಯಾಟ ನಡೆಸಲು ವಿಫಲವಾಯಿತು.

ಹರ್ಷಿತಾ 29, ನೀಲಾಕ್ಷಿ ಡಿ ಸಿಲ್ವಾ 35 ಕೊಂಚ ಪ್ರತಿರೋಧ ತೋರಿದರಾದರೂ ಗೆಲುವಿಗೆ ಅದು ಸಾಕಾಗಲಿಲ್ಲ. ಉಳಿದ ಯಾವ ಆಟಗಾರರು 20ರ ಗಡಿ ದಾಟಲಿಲ್ಲ. ವಿಷ್ಮಿ ಗುಣರತ್ನೆ 11, ಅಚಿನಿ ಕುಲಸುರಿಯಾ 17, ಕವಿಸಾ ದಿಲ್ಹರಿ 15, ಸುಂಗಂದಿಕ ಕುಮಾರಿ 10, ಅನುಷ್ಕಾ ಸಂಜೀವನಿ 6, ಇನೋಕ ರಣವೀರಾ 3 ರನ್​ಗಲಿಸಿದರು. ಬೌಲಿಂಗ್​​ನಲ್ಲಿ 4 ವಿಕೆಟ್ ಪಡೆದಿದ್ದ ಇನೋಕ ರಣವೀರ ಅಜೇಯ14 ರನ್​ಗಳಿಸಿದರು.

ಭಾರತದ ಪರ ದೀಪ್ತಿ ಶರ್ಮಾ 54ಕ್ಕೆ3,  ಚರಣಿ 37ಕ್ಕೆ2,  ಸ್ನೇಹ್ ರಾಣಾ 32ಕ್ಕೆ2, ಅಮನ್ಜೋತ್ ಕೌರ್ 37ಕ್ಕೆ1, ಕ್ರಾಂತಿ ಗೌಡ್ 41ಕ್ಕೆ1, ಪ್ರತಿಕಾ ರಾವಲ್ 6ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಟೀಮ್ ಇಂಡಿಯಾ ಇನ್ನಿಂಗ್ಸ್ 

ಟಾಸ್ ಸೋತ ನಂತರ ಬ್ಯಾಟಿಂಗ್ ಮಾಡಲು ಬಂದಿದ್ದ ಭಾರತ ತಂಡ ಉತ್ತಮ ಆರಂಭ ನೀಡಲಿಲ್ಲ. ನಾಲ್ಕನೇ ಓವರ್ ನಲ್ಲಿ ಸ್ಟಾರ್ ಓಪನರ್ ಸ್ಮೃತಿ ಮಂಧಾನ (8) ಔಟಾದರು. ಇದರ ನಂತರ ಪ್ರತಿಕಾ ರಾವಲ್ (59 ಎಸೆತಗಳಲ್ಲಿ 38,3 ಬೌಂಡರಿ, 1 ಸಿಕ್ಸರ್) ಹರ್ಲೀನ್ ಡಿಯೋಲ್ (64 ಎಸೆತಗಳಲ್ಲಿ 48,6 ಬೌಂಡರಿ) 2ನೇ ವಿಕೆಟ್​ ಜೊತೆಯಾಟದಲ್ಲಿ 67 ರನ್ ಜೊತೆಯಾಟ ಹಂಚಿಕೊಂಡರು. 20ನೇ ಓವರ್ ನಲ್ಲಿ ಪ್ರತಿಕಾ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಭಾರತ ತಂಡ ದಿಢೀರ್ ಕುಸಿತ ಕಂಡಿತು.

26ನೇ ಓವರ್​​ನ ಮೊದಲ ಎಸೆತದಲ್ಲಿ 48 ರನ್​ಗಳಿಸಿದ ಹರ್ಲೀನ್ ಡಿಯೋಲ್ ಇನೋಕ ರಣವೀರಗೆ ವಿಕೆಟ್ ಒಪ್ಪಿಸಿದರು, ನಂತರ ಎಸೆತದಲ್ಲೇ ಜೆಮಿಮಾ ರೋಡ್ರಿಗಸ್ ಖಾತೆ ತೆರೆಯದೆ ಬಂದ ದಾರಿಗೆ ಶುಂಕವಿಲ್ಲ ಎನ್ನುವಂತೆ ವಾಪಸ್ ತೆರಳಿದರು. ರಣವೀರ ಅದೇ ಓವರ್​ನ 5 ಎಸೆತದಲ್ಲಿ ನಾಯಕ ಹರ್ಮನ್ ಪ್ರೀತ್ ಕೌರ್​(21) ವಿಕೆಟ್ ಪಡೆದು ಭಾರತಕ್ಕೆ ಊಹಿಸಲಾಗದ ಆಘಾತ ನೀಡಿದರು. ನಂತರ ಬಂದ ವಿಕೆಟ್ ಕೀಪರ್​ ರಿಚಾ ಘೋಷ್ ಕೂಡ ಕೇವಲ 2 ರನ್​ಗಳಿಸಿ ಅಟಪಟ್ಟು ಬೌಲಿಂಗ್​​ನಲ್ಲಿ ಔಟ್ ಆದರು.

ಒಂದು ಹಂತದಲ್ಲಿ 120ಕ್ಕೆ2 ಇದ್ದ ಟೀಮ್ ಇಂಡಿಯಾ, ಕೇವಲ 4 ರನ್​ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. 120ಕ್ಕೆ 6 ವಿಕೆಟ್​ ಕಳೆದುಕೊಂಡು 200 ರನ್​ಗಳಿಸುವುದು ಅನುಮಾನ ಎನ್ನುವ ಸ್ಥಿತಿಗೆ ತಲುಪಿತ್ತು. ಆದರೆ ಆಲ್​ರೌಂಡರ್ಗಳಾದ ದೀಪ್ತಿ ಶರ್ಮಾ ಹಾಗೂ ಅಮನ್ಜೋತ್ ಕೌರ್​ ಪಂದ್ಯದ ಗತಿಯನ್ನೇ ಬದಲಿಸಿದರು. ಇವರಿಬ್ಬರು 7ನೇ ವಿಕೆಟ್ ಜೊತೆಯಾಟದಲ್ಲಿ 99 ಎಸೆತಗಳಲ್ಲಿ 103 ರನ್​ಗಳಿಸಿ ತಂಡದ ಮೊತ್ತವನ್ನ 124ರಿಂದ 227ಕ್ಕೆ ಏರಿಸಿದರು. ಕೌರ್ 56 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 57 ರನ್​ಗಳಿಸಿ 44ನೇ ಔಟ್ ಆದರು. ದೀಪ್ತಿ ಶರ್ಮಾ 53 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 53 ರನ್​ಗಳಿಸಿ ಇನ್ನಿಂಗ್ಸ್​ನ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್​ಗಳಲ್ಲಿ ಅಬ್ಬರಿಸಿದ ಸ್ನೇಹ್ ರಾಣಾ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 28 ರನ್​ಗಳಿಸಿದರು.