Women’s WC: ಸೋತು ಸುಣ್ಣವಾದರೂ ಕಂತ್ರಿಬುದ್ದಿ ಬಿಡದ ಪಾಕಿಗಳು! POKಯನ್ನ ಅಜಾದ್ ಕಾಶ್ಮೀರ ಎಂದು ಕರೆದು ಭಾರತ-ಪಾಕ್ ವಿವಾದದ ಬೆಂಕಿಗೆ ತುಪ್ಪ ಸುರಿದ ಮಾಜಿ ಕ್ರಿಕೆಟರ್ | Sana Mir’s Controversial Remark: Azad Kashmir Comment Sparks Fury in Women’s World Cup | ಕ್ರೀಡೆ

Women’s WC: ಸೋತು ಸುಣ್ಣವಾದರೂ ಕಂತ್ರಿಬುದ್ದಿ ಬಿಡದ ಪಾಕಿಗಳು! POKಯನ್ನ ಅಜಾದ್ ಕಾಶ್ಮೀರ ಎಂದು ಕರೆದು ಭಾರತ-ಪಾಕ್ ವಿವಾದದ ಬೆಂಕಿಗೆ ತುಪ್ಪ ಸುರಿದ ಮಾಜಿ ಕ್ರಿಕೆಟರ್ | Sana Mir’s Controversial Remark: Azad Kashmir Comment Sparks Fury in Women’s World Cup | ಕ್ರೀಡೆ

Last Updated:

ಗುರುವಾರ ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ಕಾಮೆಂಟ್ ಮಾಡುವಾಗ, ಮಿರ್ ಬ್ಯಾಟರ್​ ನತಾಲಿಯಾ ಪರ್ವೇಜ್ ಅವರನ್ನು ಕಾಶ್ಮೀರದಿಂದ ಬಂದವರೆಂದು ಕರೆದು, ತಕ್ಷಣ “ಆಜಾದ್ ಕಾಶ್ಮೀರ್” ದವರು ಎಂದು ಹೇಳಿ ಕೋಲಾಹಲ ಸೃಷ್ಟಿಸಿದ್ದಾರೆ.

ಸನಾ ಮಿರ್ಸನಾ ಮಿರ್
ಸನಾ ಮಿರ್

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ತನ್ನ ಆಟಗಾರರನ್ನು ಮಾತ್ರವಲ್ಲದೆ ನಿವೃತ್ತ ಆಟಗಾರರನ್ನು ಸಹ ತನ್ನ ಸ್ವಂತ ಲಾಭ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತದೆ. ಈಗಾಗಲೇ ಏಷ್ಯಾಕಪ್​ನಲ್ಲಿ (Asia Cup) ಎರಡು ತಂಡಗಳ ನಡುವಿನ ವಿವಾದದ ನಂತರ, ಹೊಸ ವಿಷಯವೊಂದು ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 2025ರ ಮಹಿಳಾ ಏಕದಿನ ವಿಶ್ವಕಪ್ (Women ODI World Cup) ಸಮಯದಲ್ಲಿ, ಪಾಕಿಸ್ತಾನದ ಮಾಜಿ ಮಹಿಳಾ ನಾಯಕಿ ಸನಾ ಮಿರ್ (Sana Mir) ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಉದ್ದೇಶಪೂರ್ವಕವಾಗಿ ಹೇಳಿಕೆ ವಿವಾದವನ್ನು ಸೃಷ್ಟಿಸಿದ್ದಾರೆ. ನೇರಪ್ರಸಾರದಲ್ಲಿ “ಆಜಾದ್ ಕಾಶ್ಮೀರ” ವಿಷಯದ ಕುರಿತು ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲದ ನಂತರ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಪಿಒಕೆಯನ್ನ ಅಜಾದ್ ಕಾಶ್ಮೀರ ಎಂದ ಮಿರ್

ಗುರುವಾರ ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ಕಾಮೆಂಟ್ ಮಾಡುವಾಗ, ಮಿರ್ ಬ್ಯಾಟರ್​ ನತಾಲಿಯಾ ಪರ್ವೇಜ್ ಅವರನ್ನು ಕಾಶ್ಮೀರದಿಂದ ಬಂದವರೆಂದು ಕರೆದು, ತಕ್ಷಣ “ಆಜಾದ್ ಕಾಶ್ಮೀರ್” ದವರು ಎಂದು ಹೇಳಿ ಕೋಲಾಹಲ ಸೃಷ್ಟಿಸಿದ್ದಾರೆ. ಭಾರತದ ಕಾಶ್ಮೀರವನ್ನ ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದರನ್ನ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ. ಆದರೆ ಸನಾ ಅದನ್ನ ಅಜಾದ್ ಕಾಶ್ಮೀರ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬೇಗನೆ ವೈರಲ್ ಆಗಿದ್ದು, ಪ್ರಸಾರಕರನ್ನು ಕ್ರಿಕೆಟ್​ಅನ್ನ ರಾಜಕೀಯಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಉದ್ದೇಶವನ್ನ ತಿರುಚಲಾಗುತ್ತಿದೆ ಎಂದ ಸನಾ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿರ್, ಸಾಮಾಜಿಕ ಜಾಲತಾಣದಲ್ಲಿ ತಾವು ಅಜಾದ್ ಕಾಶ್ಮೀರ ಪದವನ್ನ ಉಲ್ಲೇಖಿಸಿರುವುದರ ಹಿಂದಿನ ಉದ್ದೇಶಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ. ತಮ್ಮ ಹೇಳಿಕೆಗಳು ಪಾಕಿಸ್ತಾನದ ನಿರ್ದಿಷ್ಟ ಪ್ರದೇಶದಲ್ಲಿ ಪರ್ವೇಜ್ ಅವರ ಮೂಲ ಮತ್ತು ಅವರ ಸವಾಲಿನ ಪ್ರಯಾಣವನ್ನು ಎತ್ತಿ ತೋರಿಸುವ ಉದ್ದೇಶ ಮಾತ್ರ ಮಾತ್ರ ಹೊಂದಿವೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ವಿವರಿಸಿದ್ದಾರೆ.

” ನನ್ನ ಕಾಮೆಂಟ್ ಪಾಕಿಸ್ತಾನಿ ಆಟಗಾರ್ತಿಯೊಬ್ಬರ ತವರು, ಪಾಕಿಸ್ತಾನದ ನಿರ್ದಿಷ್ಟ ಪ್ರದೇಶದಿಂದ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಅದ್ಭುತ ಪ್ರಯಾಣವನ್ನು ಎತ್ತಿ ತೋರಿಸುವುದಾಗಿತ್ತು. ಆಟಗಾರರು ಎಲ್ಲಿಂದ ಬರುತ್ತಾರೆ ಎಂಬುದರ ಕುರಿತು ಕಾಮೆಂಟೇಟರ್ ಆಗಿ ನಮ್ಮ ಕಥೆ ಹೇಳುವಿಕೆಯ ಭಾಗವಾಗಿದೆ” ಎಂದು ಮಿರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಮ್ಮ ಹೇಳಿಕೆಯಲ್ಲಿ ರಾಜಕೀಯ ಉದ್ದೇಶವಿಲ್ಲ

ತಮ್ಮ ಮಾತುಗಳ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಮಿರ್ ಒತ್ತಿ ಹೇಳಿದ್ದು, ಇತರರು ತಮ್ಮ ವ್ಯಾಖ್ಯಾನವನ್ನು ರಾಜಕೀಯಗೊಳಿಸಬೇಡಿ ಎಂದು ಒತ್ತಾಯಿಸಿದ್ದಾರೆ. ” ಇಂದು ನಾನು ಇತರ ಪ್ರದೇಶಗಳಿಂದ ಬಂದ ಇಬ್ಬರು ಆಟಗಾರರಿಗೂ ಅದೇ ರೀತಿ ಮಾತನಾಡಿದ್ದೇನೆ. ದಯವಿಟ್ಟು ಇದನ್ನು ರಾಜಕೀಯಗೊಳಿಸಬೇಡಿ. ವರ್ಲ್ಡ್ ಫೀಡ್‌ನಲ್ಲಿ ಕಾಮೆಂಟೇಟರ್​ ಆಗಿ ನಮ್ಮ ಗಮನವು ಆಟ, ತಂಡಗಳು ಮತ್ತು ಆಟಗಾರರ ಮೇಲೆ ಇದೆ ಮತ್ತು ನಾವು ಸ್ಪೂರ್ತಿದಾಯಕ ಕಥೆಗಳನ್ನು ಹೈಲೈಟ್ ಮಾಡುತ್ತೇವೆ. ಯಾರ ಭಾವನೆಗಳನ್ನು ನೋಯಿಸುವ ಯಾವುದೇ ದುರುದ್ದೇಶ ಅಥವಾ ಉದ್ದೇಶ ನನಗಿಲ್ಲ” ಎಂದು ಅವರು ಹೇಳಿದ್ದಾರೆ.

ಅಜಾದ್ ಕಾಶ್ಮೀರ ಬದಲಿಸಿದ ಇಎಸ್​ಪಿಎನ್

ಸನಾ ಅವರ ಅಜಾದ್ ಕಾಶ್ಮೀರ ಹೇಳಿಕೆಗೆ ಭಾರತದಾದ್ಯಂತ ವಿರೋಧ ವ್ಯಕ್ತವಾದ ಹಿನ್ನಲೆ, ನತಾಲಿಯಾ ಪರ್ವೇಜ್ ಅವರ ಪ್ರೊಫೈಲ್​​ನಲ್ಲಿದ್ದ ಅಜಾದ್ ಕಾಶ್ಮೀರ ಹೆಸರನ್ನ ಪಾಕಿಸ್ತಾನ ಆಡಳಿತಕ್ಕೊಳಪಟ್ಟ ಕಾಶ್ಮೀರ ಎಂದು ಇಎಸ್​ಪಿಎಲ್ ಬದಲಾಯಿಸಿದೆ. ಈ ಸ್ಕ್ರೀನ್ ಶಾಟ್​ಅನ್ನ ಸನಾ ಹಂಚಿಕೊಂಡಿದ್ದಾರೆ. ಆದರೆ ಭಾರತೀಯರು ಮಾತ್ರ ಪಾಕ್​ ಆಕ್ರಮಿತ ಕಾಶ್ಮೀರವನ್ನ ಅಜಾದ್ ಕಾಶ್ಮೀರ ಎಂದು ಬಳಸಿದ್ದಕ್ಕೆ ಸನಾ ಮಿರ್​ ಅವರನ್ನ ಕಾಮೆಂಟರಿ ಪ್ಯಾನೆಲ್​ನಿಂದ ಕಿತ್ತೊಗೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s WC: ಸೋತು ಸುಣ್ಣವಾದರೂ ಕಂತ್ರಿಬುದ್ದಿ ಬಿಡದ ಪಾಕಿಗಳು! POKಯನ್ನ ಅಜಾದ್ ಕಾಶ್ಮೀರ ಎಂದು ಕರೆದು ಭಾರತ-ಪಾಕ್ ವಿವಾದದ ಬೆಂಕಿಗೆ ತುಪ್ಪ ಸುರಿದ ಮಾಜಿ ಕ್ರಿಕೆಟರ್