Women’s World Cup: ಅಲಿಸಾ ಹೀಲಿ ಸಿಡಿಲಬ್ಬರದ ಶತಕ: ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಆಸೀಸ್ | Australia Cruises into Semifinals with 10-Wicket Thrashing of Bangladesh | ಕ್ರೀಡೆ

Women’s World Cup: ಅಲಿಸಾ ಹೀಲಿ ಸಿಡಿಲಬ್ಬರದ ಶತಕ: ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಆಸೀಸ್ | Australia Cruises into Semifinals with 10-Wicket Thrashing of Bangladesh | ಕ್ರೀಡೆ

Last Updated:

ಬಾಂಗ್ಲಾದೇಶ ವಿರುದ್ಧ ಬಂದ ಈ ಗೆಲುವು ಆಸ್ಟ್ರೇಲಿಯಾಗೆ ಲೀಗ್​ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಒಂದು ಪಂದ್ಯ ರದ್ದಾಗಿದ್ದು, ಒಟ್ಟು ಒಂಬತ್ತು ಅಂಕಗಳೊಂದಿಗೆ ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಅಲ್ಲದೆ ಈ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ತಂಡಕ್ಕೆ ಜಯಆಸ್ಟ್ರೇಲಿಯಾ ತಂಡಕ್ಕೆ ಜಯ
ಆಸ್ಟ್ರೇಲಿಯಾ ತಂಡಕ್ಕೆ ಜಯ

ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ, ಆರಂಭಿಕ ಆಟಗಾರ್ತಿ ಮತ್ತು ನಾಯಕಿ ಅಲಿಸಾ ಹೀಲಿ (Alyssa Healy) ಅವರ ಅಜೇಯ ಶತಕ ಮತ್ತು ಫೋಬೆ ಲಿಚ್‌ಫೀಲ್ಡ್ (Phoebe Litchfield) ಅವರ ಮುರಿಯದ ಆರಂಭಿಕ ಜೊತೆಯಾಟದ ನೆರವಿನಿಂದ ಗುರುವಾರ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಬಾಂಗ್ಲಾದೇಶವನ್ನು (Australia vs Bangladesh) 10 ವಿಕೆಟ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶ ನೀಡಿದ 199 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ನಾಯಕ ಹೀಲಿ ಮತ್ತು ಲಿಚ್‌ಫೀಲ್ಡ್ ಇಬ್ಬರೆ ಪೂರ್ಣಗೊಳಿಸಿದರು. ಆಸ್ಟ್ರೇಲಿಯಾ ಇಬ್ಬರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನೊಂದ ಇನ್ನೂ 151 ಎಸೆತಗಳು ಬಾಕಿ ಇರುವಾಗ ವಿಕೆಟ್ ನಷ್ಟವಿಲ್ಲದೆ 202 ರನ್ ಗಳಿಸುವ ಮೂಲಕ ಸುಲಭವಾಗಿ ಗೆಲುವಿನ ಗಡಿ ದಾಟಿತು.

ಬಾಂಗ್ಲಾದೇಶ ವಿರುದ್ಧ ಬಂದ ಈ ಗೆಲುವು ಆಸ್ಟ್ರೇಲಿಯಾಗೆ ಲೀಗ್​ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಒಂದು ಪಂದ್ಯ ರದ್ದಾಗಿದ್ದು, ಒಟ್ಟು ಒಂಬತ್ತು ಅಂಕಗಳೊಂದಿಗೆ ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಅಲ್ಲದೆ ಈ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಆಸ್ಟ್ರೇಲಿಯಾ

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್​ಗಳಿಸಿತು. ಆಸ್ಟ್ರೇಲಿಯಾದ ಶಿಸ್ತಿನ ಬೌಲಿಂಗ್ ವಿರುದ್ಧ ಬಾಂಗ್ಲಾದೇಶ ಬ್ಯಾಟರ್​ಗಳು ರನ್​ಗಳಿಸಲು ವಿಫಲವಾಗಿದ್ದಲ್ಲದೆ, ಸತತ ವಿಕೆಟ್‌ಗಳನ್ನು ಕಳೆದುಕೊಂಡಿತು. ಶೋಭನಾ ಮೊಸ್ಟಾರಿ ಒಂದು ಬದಿಯಲ್ಲಿ ಬ್ಯಾಟಿಂಗ್ ತಂಡದ ಮೊತ್ತವನ್ನ 200ರ ಸನಿಹ ಕೊಂಡೊಯ್ದರು. ಶೋಭನಾ 80 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 66 ರನ್ ಗಳಿಸಿ ತಂಡವು ಗೌರವಾನ್ವಿತ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. ಮೊಸ್ಟಾರಿ ಅವರ ಇನ್ನಿಂಗ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಆರಂಭಿಕ ಆಟಗಾರ್ತಿ ರುಬಯಾ ಹೈದರ್ ಕೂಡ 44 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಉಳಿದ ಬ್ಯಾಟರ್ಸ್ ಯಾರೂ 20ರ ಗಡಿ ದಾಟಲಿಲ್ಲ.

ಗುರಿಯನ್ನು ಬೆನ್ನಟ್ಟಿದ ಆಸೀಸ್ ನಿರಾಯಾಸವಾಗಿ 24.5 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ನಾಯಕಿ ಅಲಿಸಾ 77 ಎಸೆತಗಳಲ್ಲಿ 20 ಬೌಂಡರಿಗಳ ನೆರವಿನಿಂದ ಅಜೇಯ 113 ರನ್​ಗಳಿಸಿದರೆ, ಲಿಚ್​ಫೀಲ್ಡ್​ 73 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 84 ರನ್​ಗಳಿಸಿದರು.

ಸತತ ಎರಡನೇ ಶತಕ ಸಿಡಿಸಿದ ಅಲಿಸಾ ಹೀಲಿ

ಅಲಿಸಾ 43 ಎಸೆತಗಳಲ್ಲಿ ತಮ್ಮ ನಾಲ್ಕನೇ ವಿಶ್ವಕಪ್ ಅರ್ಧಶತಕವನ್ನು ತಲುಪಿದರು. ಇದು ಅವರ 18ನೇ ಏಕದಿನ ಅರ್ಧಶತಕವಾಗಿದೆ. ನಂತರ ತಮ್ಮ ಸ್ಫೋಟಕ ಆಟಕ್ಕೆ ಮೊರೆ ಹೋದ ಅಲಿಸಾ ಮುಂದಿನ 29 ಎಸೆತಗಳಲ್ಲಿ 100 ರನ್ ಪೂರೈಸಿದರು. ಅವರು 72 ಎಸೆತಗಳಲ್ಲಿ ಮೂರಂಕಿ ದಾಟುವ ಮೂಲಕ ಏಕದಿನ ವಿಶ್ವಕಪ್​ನಲ್ಲಿ 2ನೇ ವೇಗದ ಶತಕ ಸಿಡಿಸಿ ಹೆಗ್ಗಳಿಕೆಗೆ ಪಾತ್ರರಾದರು. 2017ರಲ್ಲಿ ದಿಯಾಂಡ್ರ ಡಟ್ಟಿನ್ ಪಾಕಿಸ್ತಾನದ ವಿರುದ್ಧ 71 ಎಸೆತಗಳಲ್ಲಿ ಶತಕ ಸಿಡಿಸಿರುವುದು ವಿಶ್ವಕಪ್​ನ ವೇಗದ ಶತಕವಾಗಿದೆ.

ವಿಕೆಟ್ ನಷ್ಟವಿಲ್ಲದೆ 2ನೇ ಗರಿಷ್ಠ ಚೇಸ್

ಮಹಿಳಾ ಏಕದಿನದಲ್ಲಿ ವಿಕೆಟ್ ಕಳೆದುಕೊಳ್ಳದೆ ಚೇಸ್ ಮಾಡಿದ ಗೆದ್ದ 2ನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2023ರಲ್ಲಿ ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡವೇ 210ರನ್​ಗಳ ಗುರಿಯನ್ನ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡಿತ್ತು. ಇದೀಗ ವಿಕೆಟ್ ನಷ್ಟವಿಲ್ಲದೆ 200ರನ್​ಗಳ ಯಶಸ್ವಿಯಾಗಿ ಬೆನ್ನಟ್ಟಿದೆ. ಇದು ವಿಶ್ವಕಪ್​ನಲ್ಲಿ ವಿಶ್ವದಾಖಲೆಯಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s World Cup: ಬಾಂಗ್ಲಾದೇಶ ವಿರುದ್ಧ ಅಲಿಸಾ ಹೀಲಿ ಸಿಡಿಲಬ್ಬರದ ಶತಕ: ಸತತ ನಾಲ್ಕನೇ ಪಂದ್ಯ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯಾ