Last Updated:
ಓಪನರ್ ಆಗಿ ರಿಂಗ್‌ಗೆ ಬಂದ ವೋಲ್ವಾರ್ಟ್, ಇಂಗ್ಲಿಷ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಅವರು ಕೇವಲ 115 ಎಸೆತಗಳಲ್ಲಿ ತಮ್ಮ ಹತ್ತನೇ ODI ಶತಕವನ್ನು ತಲುಪಿದರು. ಶತಕ ಪೂರ್ಣಗೊಳಿಸಿದ ನಂತರ, ಲಾರಾ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ಮಾಡಿ 169 ರನ್ಗಳಿಸಿದರು.
ಐಸಿಸಿ ಮಹಿಳಾ ವಿಶ್ವಕಪ್-2025 ರ ಭಾಗವಾಗಿ ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 319 ರನ್‌ಗಳ ಬೃಹತ್ ಸ್ಕೋರ್ ಗಳಿಸಿದೆ. ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ ಅದ್ಭುತ ಶತಕ ಸಿಡಿಸಿ ಮಿಂಚಿದರು.
ಓಪನರ್ ಆಗಿ ರಿಂಗ್‌ಗೆ ಬಂದ ವೋಲ್ವಾರ್ಟ್, ಇಂಗ್ಲಿಷ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಅವರು ಕೇವಲ 115 ಎಸೆತಗಳಲ್ಲಿ ತಮ್ಮ ಹತ್ತನೇ ODI ಶತಕವನ್ನು ತಲುಪಿದರು. ಶತಕ ಪೂರ್ಣಗೊಳಿಸಿದ ನಂತರ, ಲಾರಾ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ಮಾಡಿದರು. 47 ನೇ ಓವರ್‌ನಲ್ಲಿ ಲಿನ್ಸೆ ಸ್ಮಿತ್ ಓವರ್‌ನಲ್ಲಿ ವೋಲ್ವಾರ್ಡ್ಸ್ 20 ರನ್ ಸೂರೆಗೈದರು.
ಒಟ್ಟಾರೆ 143 ಎಸೆತಗಳನ್ನು ಎದುರಿಸಿದ ಲಾರಾ ವೋಲ್ವಾರ್ಟ್ 20 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 169 ರನ್ ಗಳಿಸಿದರು. ನಾಯಕಿಗೆ ಸಾಥ್ ನೀಡಿದ ಮತ್ತೊಬ್ವ ಆರಂಭಿಕ ಬ್ಯಾಟರ್ ತಾಜ್ಮಿನ್ ಬ್ರಿಟ್ಸ್ 65 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 45, ಕಾಪ್ 33 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 42, ಮತ್ತು ಟ್ರಯಾನ್ 26 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 33ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 4 ವಿಕೆಟ್ ಪಡೆದರು, ಲಾರೆನ್ ಬೆಲ್ ಎರಡು ಮತ್ತು ನ್ಯಾಟ್ ಸೀವರ್ ಒಂದು ವಿಕೆಟ್ ಪಡೆದರು.
ನಾಯಕ ವೋಲ್ವಾರ್ಟ್ ಅವರ ಶತಕದ ನೆರವಿನಿಂದ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಅತ್ಯಧಿಕ ಸ್ಕೋರ್ ದಾಖಲಿಸಿತು. ಇದಕ್ಕೂ ಮೊದಲು, ಪ್ರೋಟಿಯಸ್ ಪ್ರಸ್ತುತ ವಿಶ್ವಕಪ್‌ನಲ್ಲೆ ಪಾಕಿಸ್ತಾನ ವಿರುದ್ಧ 312 ರನ್ ಗಳಿಸಿತು.
ಅದೇ ರೀತಿ, ದಕ್ಷಿಣ ಆಫ್ರಿಕಾ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಗಳಿಸಿದ ತಂಡವಾಯಿತು. ಆಸ್ಟ್ರೇಲಿಯಾ ತಂಡ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2022 ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ 356 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು.
ವೋಲ್ವಾರ್ಟ್ ಮಹಿಳಾ ವಿಶ್ವಕಪ್ನಲ್ಲಿ 2ನೇ ಗರಿಷ್ಟ ಮೊತ್ತ ದಾಖಲಿಸಿದರು. ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 1997ರ ಆವೃತ್ತಿಯಲ್ಲಿ 229 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಲೌರಾ ವೋಲ್ವಾರ್ಟ್ 169 ರನ್ಗಳಿಸಿದರೆ, ಅಲಿಸಾ ಪೆರ್ರಿ ಇದೇ ಆವೃತ್ತಿಯಲ್ಲಿ ಭಾರತದ ವಿರುದ್ಧ 152 ರನ್ಗಳಿಸಿರುವುದು 3ನೇ ಗರಿಷ್ಠ ಸ್ಕೋರ್ ಆಗಿದೆ.
ಹರ್ಮನ್ಪ್ರೀತ್ ಕೌರ್ 7 ಸಿಕ್ಸರ್ vs ಆಸ್ಟ್ರೇಲಿಯಾ
ಲೌರಾ ವೋಲ್ವಾರ್ಟ್ 4 ಸಿಕ್ದರ್ vs ಇಂಗ್ಲೆಂಡ್
ಅಲೆಕ್ಸ್ ಬ್ಲಾಕ್ವೆಲ್ 3 ಸಿಕ್ಸರ್ vs ಭಾರತ
October 29, 2025 7:21 PM IST
Women’s World Cup: ವಿಶ್ವದಾಖಲೆಯ ಶತಕದೊಂದಿಗೆ ಆಂಗ್ಲರನ್ನ ಧೂಳೀಪಟ ವೋಲ್ವಾರ್ಟ್! ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ಗೆ ಬೃಹತ್ ಗುರಿ ನೀಡಿದ ದಕ್ಷಿಣ ಆಫ್ರಿಕಾ