Women’s World Cup: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಸ್ಟಾರ್ ಓಪನರ್​ಗೆ ಗಂಭೀರ ಗಾಯ | ಕ್ರೀಡೆ

Women’s World Cup: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಸ್ಟಾರ್ ಓಪನರ್​ಗೆ ಗಂಭೀರ ಗಾಯ | ಕ್ರೀಡೆ

Last Updated:

ಆಸೀಸ್ ವಿರುದ್ಧದ ಮಾಡು-ಅಥವಾ-ಮಡಿ ಸೆಮಿಫೈನಲ್ ಪಂದ್ಯವನ್ನು ಪ್ರತಿಕಾ ತಪ್ಪಿಸಿಕೊಂಡರೆ, ಟೀಂ ಇಂಡಿಯಾದ ಗೆಲುವಿನ ಸಾಧ್ಯತೆಗಳ ಮೇಲೆ ಖಂಡಿತವಾಗಿಯೂ ತಂಡದ ಸಂಯೋಜನೆ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಪ್ರತಿಕಾ ರಾವಲ್
ಪ್ರತಿಕಾ ರಾವಲ್

ಮಹಿಳಾ ಸಿಡಬ್ಲ್ಯೂಸಿ 2025ರ (Women’s ODI World Cup) ಭಾಗವಾಗಿ ಅಕ್ಟೋಬರ್ 30 ರಂದು ಆಸ್ಟ್ರೇಲಿಯಾ (India vs Australia) ವಿರುದ್ಧದ ಸೆಮಿಫೈನಲ್ (Semifinal) ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ದೊಡ್ಡ ಆಘಾತ ಅನುಭವಿಸಿತು. ಅದ್ಭುತ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ನಿನ್ನೆ (ಅಕ್ಟೋಬರ್ 26) ಬಾಂಗ್ಲಾದೇಶ ವಿರುದ್ಧದ ನಾಮಮಾತ್ರ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಅವರು ಸೆಮಿಫೈನಲ್ ಪಂದ್ಯಕ್ಕೆ ಲಭ್ಯರಾಗುತ್ತಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಪ್ರಸ್ತುತ ಪ್ರತಿಕಾ ಗಾಯದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ. ಅಭಿಮಾನಿಗಳಲ್ಲಿ ಅವರ ಗಾಯದ ವಿಚಾರ ಕಳವಳವಿದೆ. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ ಜೊತೆಗೆ ಪ್ರತಿಕಾ ಸ್ಫೋಟಕ ಶತಕ ಬಾರಿಸಿದ್ದರು. ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತಕ್ಕೆ ಉತ್ತಮ ಆರಂಭ ನೀಡುವ ಮೂಲಕ ಪ್ರತಿಕಾ- ಮಂಧಾನ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಆಸೀಸ್ ವಿರುದ್ಧದ ಮಾಡು-ಅಥವಾ-ಮಡಿ ಸೆಮಿಫೈನಲ್ ಪಂದ್ಯವನ್ನು ಪ್ರತಿಕಾ ತಪ್ಪಿಸಿಕೊಂಡರೆ, ಟೀಂ ಇಂಡಿಯಾದ ಗೆಲುವಿನ ಸಾಧ್ಯತೆಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.

ರದ್ಧಾದ ಕೊನೆಯ ಪಂದ್ಯ

ನಿನ್ನೆ ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ-ಬಾಂಗ್ಲಾದೇಶ ಪಂದ್ಯ ಮಳೆಯಿಂದಾಗಿ ಫಲಿತಾಂಶರಹಿತವಾಗಿ ಕೊನೆಗೊಂಡಿತು. 27 ಓವರ್‌ಗಳಿಗೆ ಮೊಟಕುಗೊಳಿಸಲಾದ ಈ ಪಂದ್ಯದಲ್ಲಿ, ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 9 ವಿಕೆಟ್‌ಗಳ ನಷ್ಟಕ್ಕೆ 119 ರನ್‌ಗಳಿಗೆ ಸೀಮಿತವಾಯಿತು. ಬಾಂಗ್ಲಾದೇಶ ಇನ್ನಿಂಗ್ಸ್‌ನ 21 ನೇ ಓವರ್‌ನ ಎರಡನೇ ಎಸೆತದಲ್ಲಿ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಪ್ರತೀಕಾ ಕಾಲು ಟ್ವಿಸ್ಟ್ ಆಗಿ ಗಂಭೀರವಾಗಿ ಗಾಯಗೊಂಡರು.

ಫೀಲ್ಡಿಂಗ್ ವೇಳೆ ದಾಖಲೆ

ತೇವಾಂಶ ಪೂರಿತ ನೆಲದಿಂದಾಗಿ, ಪ್ರತೀಕಾ ಓಡುವಾಗ ಅವರ ಬಲ ಪಾದ ಟ್ವಿಸ್ಟ್ ಆಯಿತು. ತೀವ್ರ ನೋವಿನಿಂದಾಗಿ ಸಿಬ್ಬಂದಿ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ದರು. ಆ ನಂತರ ಅವರು ಮೈದಾನಕ್ಕೆ ಹಿಂತಿರುಗಲಿಲ್ಲ. ಅವರ ಸ್ಥಾನದಲ್ಲಿ ಅಮನ್‌ಜೋತ್ ಕೌರ್ ಭಾರತೀಯ ಇನ್ನಿಂಗ್ಸ್ ಅನ್ನು ತೆರೆದರು. ಚೇಸಿಂಗ್‌ನಲ್ಲಿ ಅಮನ್‌ಜೋತ್ ಮತ್ತು ಮಂಧಾನ 8.4 ಓವರ್‌ಗಳಲ್ಲಿ 57 ರನ್‌ಗಳನ್ನು ಸೇರಿಸಿದ ನಂತರ, ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಪ್ರತಿಕಾ ಹೊರಗುಳಿದರೆ ಮುಂದೇನು?

ಪ್ರತಿಕಾ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಸೆಮಿಫೈನಲ್ ಪಂದ್ಯವನ್ನು ಮಿಸ್ ಮಾಡಿಕೊಂಡರೆ, ಟೀಮ್ ಇಂಡಿಯಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರತೀಕಾ ಬದಲಿಗೆ ತಂಡದಲ್ಲಿ ಯಾವುದೇ ಆರಂಭಿಕ ಆಟಗಾರ್ತಿ ಇಲ್ಲ. ಐಸಿಸಿ ಒಪ್ಪಿಗೆಯೊಂದಿಗೆ, ಮೀಸಲು ಪಡೆಯಲ್ಲಿಲ್ಲದ ಆಟಗಾರ್ತಿಯನ್ನು ಕರೆಯಬೇಕಾಗುತ್ತದೆ. ಪ್ರತೀಕಾ ಪಂದ್ಯಾವಳಿಯನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರೆ ಮಾತ್ರ ಇದು ಸಾಧ್ಯವಾಗುತ್ತದೆ.

ಟೀಮ್ ಇಂಡಿಯಾಗೆ ಮತ್ತೊಂದು ಸಮಸ್ಯೆ

ಪ್ರತಿಕ್ ಗಾಯಗೊಳ್ಳುವ ಮೊದಲು, ಟೀಮ್ ಇಂಡಿಯಾ ಮತ್ತೊಂದು ಸಮಸ್ಯೆಯನ್ನು ಎದುರಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸಮಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೂಡ ಗಾಯಗೊಂಡಿದ್ದರು. ಈ ಕಾರಣದಿಂದಾಗಿ, ಬಾಂಗ್ಲಾದೇಶ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಯಿತು. ಸೆಮಿಫೈನಲ್ ಪಂದ್ಯಕ್ಕೆ ರಿಚಾ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. ಗಾಯಗಳ ಸಮಸ್ಯೆಯಿಂದಾಗಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಟೀಮ್ ಇಂಡಿಯಾ ಎಷ್ಟರ ಮಟ್ಟಿಗೆ ಎದುರಿಸಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ.

ನಾಕೌಟ್ ಪಂದ್ಯ ಯಾವಾಗ?

ಈಗ ವಿಶ್ವಕಪ್‌ನಲ್ಲಿ ಭಾರತದೊಂದಿಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಅಕ್ಟೋಬರ್ 29 ರಂದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ (ಗುವಾಹಟಿ) ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ. 30 ರಂದು ಭಾರತ ಮತ್ತು ಆಸ್ಟ್ರೇಲಿಯಾ (ನವಿ ಮುಂಬೈ) ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ. ನವೆಂಬರ್ 2 ರಂದು ಫೈನಲ್ ಪಂದ್ಯ (ನವಿ ಮುಂಬೈ) ನಡೆಯಲಿದೆ.