Last Updated:
ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನ ಕೇವಲ 97ಕ್ಕೆ ಆಲೌಟ್ ಮಾಡಿತ್ತು. ಕೇವಲ 16.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 98 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಅಗ್ರಸ್ಥಾನಿಯಾಗಿ ಲೀಗ್ ಮುಗಿಸಿತು.
ಇಂದೋರ್‌ನಲ್ಲಿ ಶನಿವಾರ (ಅಕ್ಟೋಬರ್ 25) ದಕ್ಷಿಣ ಆಫ್ರಿಕಾ (Australia vs South Africa) ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 (Women’s World Cup) ರಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರಿಸಿದೆ. ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನ ಕೇವಲ 97ಕ್ಕೆ ಆಲೌಟ್ ಮಾಡಿತ್ತು. ಕೇವಲ 16.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 98 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಅಗ್ರಸ್ಥಾನಿಯಾಗಿ ಜಯ ಸಾಧಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ತಂಡಕ್ಕೆ ಬ್ಯಾಟಿಂಗ್ ನೀಡಿತು. ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತೋರಿದ ಕೆಟ್ಟ ಬ್ಯಾಟಿಂಗ್ ಪ್ರದರ್ಶವನ್ನ ಇಂದೂ ರಿಟೀಪ್ ಮಾಡಿತು. ಮೊದಲ ವಿಕೆಟ್ಗೆ 32 ರನ್ಗಳಿಸಿದ ಹರಿಣ ಪಡೆದ, ಆ ನಂತರ ಪೆವಿಲಿಯನ್ ಪರೇಡ್ ನಡೆಸಿದರು. ನಾಯಕಿ ಲೌರಾ ವೋಲ್ವಾರ್ಟ್ 31 ರನ್ಗಳಿಸಿದರೆ, ವಿಕೆಟ್ ಕೀಪರ್ ಸಿನಾಲೋ ಜಫ್ಟಾ 29 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. 14 ರನ್ಗಳಿಸಿದ ನಾಡಿನ್ ಡಿ ಕ್ಲರ್ಕ್ 14 ರನ್ಗಳಿಸಿ ಎರಡಂಕಿ ದಾಟಿದ ಮೂರನೇ ಬ್ಯಾಟರ್ ಎನಿಸಿಕೊಂಡರು. ಉಳಿದ 7 ಆಟಗಾರರು ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದರು.
ತಾಂಜಿಮ್ ಬ್ರಿಟ್ಸ್ 6, ಸುನೆ ಲೂಸ್ 6, ಅನೇರಿಯಾ ಡರ್ಕ್ಸನ್ 5, ಮರಿಜಾನ್ ಕಾಪ್ 0, ಕೋಲ್ ಲೆಸ್ಲಿ ಟ್ರಯಾನ್ 0, ಮಸಬಟಾ ಕ್ಲಾಸ್ 4, ಅಯಬೊಂಗಾ ಖಾಕಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಸ್ಪಿನ್ನರ್ ಅಲಾನಾ ಕಿಂಗ್ ಕೇವಲ 18 ರನ್ ನೀಡಿ 7 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಪತನಕ್ಕೆ ಕಾರಣರಾದರು. ಮೆಗನ್ ಶೂಟ್,ಆಶ್ ಗಾರ್ಡ್ನರ್ ಹಾಗೂ ಕಿಮ್ ಗರ್ತ್ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 81 ಎಸೆತಗಳಲ್ಲಿ ಚೇಸಿಂಗ್ ಮುಗಿಸಿತು. ಆರಂಭಿಕ ಬ್ಯಾಟರ್ ಲಿಚ್ ಫೀಲ್ಡ್ ಕೇವಲ 5 ರನ್ಸ್ ಹಾಗೂ ಎಲಿಸ್ ಪೆರ್ರಿ ಡಕ್ ಔಟ್ ಆದರು. ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಬೆತ್ ಮೂನಿ (42) ಮತ್ತು ಜಾರ್ಜಿಯಾ ವೋಲ್ (ಅಜೇಯ 38) 76 ರನ್ಗಳಿಸಿ. 41 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 42 ರನ್ಗಳಿಸಿದ್ದ ಮೂನಿ ಗೆಲುವಿಗೆ ಕೇವಲ 11 ರನ್ ಅಗತ್ಯವಿದ್ದಾಗ ನಾಡಿನ್ ಡಿ ಕ್ಲರ್ಕ್ ಬೌಲಿಂಗ್ನಲ್ಲಿ ಔಟ್ ಆದರು. ನಂತರ, ಅನ್ನಾಬೆಲ್ ಸದರ್ಲ್ಯಾಂಡ್ ಅವರ ನಾಲ್ಕು ಎಸೆತಗಳಲ್ಲಿ 10 ರನ್‌ಗಳ ತ್ವರಿತ ಇನ್ನಿಂಗ್ಸ್ ಆಸ್ಟ್ರೇಲಿಯಾವನ್ನು ಸುಲಭ ಗೆಲುವಿನತ್ತ ಕೊಂಡೊಯ್ದಿತು.
ಈ ಸುಲಭ ಜಯದೊಂದಿಗೆ ಆಸ್ಟ್ರೇಲಿಯಾ ಅಂಕಪಟಟಿಯಲ್ಲಿ 13 ಅಂಕ ಪಡೆದು ಅಗ್ರಸ್ಥಾನಿಯೊಂದಿಗೆ ಲೀಗ್ ಮುಗಿಸಿತು. ಆಸ್ಟ್ರೇಲಿಯಾ ಈಗ ಅಕ್ಟೋಬರ್ 30 ರಂದು ನವಿ ಮುಂಬೈನಲ್ಲಿ ಭಾರತವನ್ನು ಎದುರಿಸಲಿದೆ. ಸೋತ ದಕ್ಷಿಣ ಆಫ್ರಿಕಾ ಅಕ್ಟೋಬರ್ 29 ರಂದು ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಪಂದ್ಯಗಳ ವಿಜೇತರು ನವೆಂಬರ್ 2 ರಂದು ಫೈನಲ್‌ನಲ್ಲಿ ಆಡಲಿದ್ದಾರೆ.
October 25, 2025 7:20 PM IST