Last Updated:
ಇಲ್ಲಿಯವರೆಗೆ ಭಾರತ ತಂಡ 11 ವಿಶ್ವಕಪ್ಗಳಲ್ಲಿ ಆಡಿದ್ದು, 3 ಬಾರಿ ಫೈನಲ್ ಪ್ರವೇಶಿಸಿದೆ. 1978ರಲ್ಲಿ ಮೊದಲ ಬಾರಿಗೆ ಭಾರತ ತಂಡ ವಿಶ್ವಕಪ್ ಆಡಿತ್ತು. 1997ರಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಲಾಗಿತ್ತು. 2000ರ ಆವೃತ್ತಿಯಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು.
ಭಾರತ ಮಹಿಳಾ ತಂಡ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡವನ್ನ 5 ವಿಕೆಟ್ಗಳಿಂದ ಮಣಿಸುವ ಮೂಲಕ ಭಾರತ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮತ್ತೊಂದು ಕಡೆ ಇಂಗ್ಲೆಂಡ್ ತಂಡವನ್ನ ಮಣಿಸಿದ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಹಾಗಾಗಿ ಈ ಬಾರಿ ಯಾವುದೇ ತಂಡ ಫೈನಲ್ನಲ್ಲಿ ಗೆದ್ದರೆ ಅದೇ ತಂಡ ಚೊಚ್ಚಲ ಬಾರಿಗೆ ವಿಶ್ವಚಾಂಪಿಯನ್ ಕಿರೀಟ ಧರಿಸಲಿದೆ. ಇದುವರೆಗೂ ಈ ಎರಡು ತಂಡಗಳೂ ಯಾವುದೆ ಐಸಿಸಿ ವಿಶ್ವಕಪ್ ಜಯಿಸಿಲ್ಲ.
ಭಾರತ ತಂಡ ಕೊನೆಯ ಬಾರಿ 2017ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಆ ಬಾರಿ ಕೂಡ ಸೆಮಿಫೈನಲ್ನಲ್ಲಿ ಇದೇ ಆಸ್ಟ್ರೇಲಿಯಾವನ್ನ ಮಣಿಸಿ ಫೈನಲ್ ಪ್ರವೇಶಿಸಿತ್ತು. ವಿಶೇಷವೆಂದರೆ ಆಸ್ಟ್ರೇಲಿಯಾ ಆ ಬಳಿಕ ಸೋತ 2ನೇ ಪಂದ್ಯ ಇದಾಗಿದೆ. ಅಂದರೆ ಕಳೆದ 3 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಸೋತಿರುವ 2 ಪಂದ್ಯಗಳೂ ಭಾರತದ ವಿರುದ್ಧವೇ ಎನ್ನುವುದು ಅಚ್ಚರಿಯ ವಿಷಯ.
ಭಾರತ ತಂಡ ವಿಶ್ವಕಪ್ ಸಾಧನೆ
ಇಲ್ಲಿಯವರೆಗೆ ಭಾರತ ತಂಡ 11 ವಿಶ್ವಕಪ್ಗಳಲ್ಲಿ ಆಡಿದ್ದು, 3 ಬಾರಿ ಫೈನಲ್ ಪ್ರವೇಶಿಸಿದೆ. 1978ರಲ್ಲಿ ಮೊದಲ ಬಾರಿಗೆ ಭಾರತ ತಂಡ ವಿಶ್ವಕಪ್ ಆಡಿತ್ತು. 1997ರಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಲಾಗಿತ್ತು. 2000ರ ಆವೃತ್ತಿಯಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು. 2005ರಲ್ಲಿ ಭಾರತ ತಂಡ ರನ್ನರ್ ಅಪ್ ಆಗಿತ್ತು. 2009ರಲ್ಲಿ 3, 2013ರಲ್ಲಿ 7ನೇ, 2017ರಲ್ಲಿ ರನ್ನರ್ ಅಪ್ ಆಗಿತ್ತು. 2022ರಲ್ಲಿ 5ನೇ ಸ್ಥಾನ ಪಡೆದಿತ್ತು. ಇದೀಗ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ದಕ್ಷಿಣ ಆಫ್ರಿಕಾ ವಿಶ್ವಕಪ್ ದಾಖಲೆ
1997ರಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ವಿಶ್ವಕಪ್ ಆಡಿತ್ತು. 2000ನೇ ಆವೃತ್ತಿಯಲ್ಲಿ ಸೆಮಿಫೈನಲ್ ಆಡಿತ್ತು. ನಂತರ ಮೂರು ಆವೃತ್ತಿಯಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. 2017 ಹಾಗೂ 2022ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇದೀಗ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಎರಡೂ ತಂಡಗಳು ಯಾವುದೇ ಸ್ವರೂಪದ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿಲ್ಲ. ಭಾರತ ಏಕದಿನದಲ್ಲಿ 2 ಬಾರಿ ರನ್ನರ್ ಅಪ್, ಟಿ20 ವಿಶ್ವಕಪ್ನಲ್ಲಿ ಒಮ್ಮೆ ರನ್ನರ್ ಅಪ್ ಆಗಿದೆ. ದಕ್ಷಿಣ ಆಫ್ರಿಕಾ 2 ಬಾರಿ ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿದೆ. ಏಕದಿನದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಪಂದ್ಯದ ಹೈಲೈಟ್ಸ್
ಭಾರತ ತಂಡ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 338 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದು ವಿಶ್ವಕಪ್ ನಾಕೌಟ್ ಹಂತದಲ್ಲಿ ಅತ್ಯಂತ ಗರಿಷ್ಠ ಸ್ಕೋರ್ ಆಗಿತ್ತು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿ ಫೀಬೆ ಲಿಚ್ಫೀಲ್ಡ್ 93 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಸೇರಿ 119 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಎಲಿಸ್ ಪೆರ್ರಿ 73, ಆಶ್ಲೀ ಗಾರ್ಡ್ನರ್ 63 ವಿಶ್ವದಾಖಲೆಯ ರನ್ಗಳಿಸಲು ನೆರವಾಗಿದ್ದರು.
ಭಾರತ ತಂಡ 339 ರನ್ಗಳ ಗುರಿಯನ್ನ ಇನ್ನು 9 ಎಸೆತಗಳಿರುವಂತೆ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜೆಮಿಮಾ ರೋಡ್ರಿಗಸ್ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ ಅಜೇಯ 127 ರನ್ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ 88 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 89 ರನ್, ರಿಚಾ ಘೋಷ್ 16 ಎಸೆತಗಳಲ್ಲಿ 26, ದೀಪ್ತಿ ಶರ್ಮಾ 24 ರನ್, ಮಂಧಾನ 24, ಅಮನ್ಜೋತ್ ಕೌರ್ ಅಜೇಯ 15 ರನ್ಗಳಿಸಿ ಗೆಲುವಿನ ರೂವಾರಿಯಾದರು.
October 31, 2025 12:16 AM IST