ಟಾಸ್ ಸಮಯದಲ್ಲಿ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಮತ್ತು ಮ್ಯಾಚ್ ರೆಫರಿ ಹಾಜರಿದ್ದರು. ಹರ್ಮನ್ಪ್ರೀತ್ ಕೌರ್ ಕಾಯಿನ್ ಗಾಳಿಯಲ್ಲಿ ಎಸೆದಾಗ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಸ್ಪಷ್ಟವಾಗಿ ‘ಟೈಲ್ಸ್’ ಎಂದರು. ಕಾಯಿನ್ ಬಿದ್ದ ನಂತರ, ಫಲಿತಾಂಶವು ಸ್ಪಷ್ಟವಾಗಿ ‘ಹೆಡ್ಸ್’ ಆಗಿತ್ತು. ಆದರೆ, ಮ್ಯಾಚ್ ರೆಫರಿ ಫಲಿತಾಂಶವನ್ನು ‘ಹೆಡ್ಸ್’ ಎಂದು ಘೋಷಿಸಿದ ನಂತರ, ರೆಫ್ರಿ ಇದ್ದಕ್ಕಿದ್ದಂತೆ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಕಡೆಗೆ ಸನ್ನೆ ಮಾಡಿ ಪಾಕಿಸ್ತಾನ ಟಾಸ್ ಗೆದ್ದಿದೆ ಎಂದು ಘೋಷಿಸಿ ಬಿಟ್ಟರು.
ಸಾಮಾನ್ಯವಾಗಿ, ಟಾಸ್ ನಿಯಮಗಳ ಪ್ರಕಾರ, ಫಲಿತಾಂಶವು ನಾಯಕನ ಕರೆಗಿಂತ ಭಿನ್ನವಾಗಿದ್ದರೆ, ತಂಡವು ಟಾಸ್ ಸೋತಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಘಟನೆಯಲ್ಲಿ, ಫಾತಿಮಾ ಸನಾ ‘ಟೈಲ್ಸ್’ ಎಂದು ಕರೆದರು. ‘ಹೆಡ್ಸ್’ ಬಿದ್ದಿದ್ದರೂ ಪಾಕಿಸ್ತಾನಕ್ಕೆ ಟಾಸ್ ನೀಡಲಾಯಿತು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು. ಪಂದ್ಯದ ರೆಫರಿ ಫಲಿತಾಂಶವನ್ನು ಘೋಷಿಸುವಾಗ ತಪ್ಪಾಗಿ ಕೇಳಿರಬಹುದು ಅಥವಾ ತಪ್ಪಾಗಿ ಪಾಕಿಸ್ತಾನದ ಪರವಾಗಿ ನಿರ್ಧಾರ ನೀಡಿರಬಹುದು. ಪಾಕಿಸ್ತಾನ ನಾಯಕಿ ಫಾತಿಮಾ ಸನಾ ನೀಡಿದ ಕರೆಯನ್ನು ಮೈಕ್ರೊಫೋನ್‌ನಲ್ಲಿ ಟೈಲ್ಸ್ ಎಂದು ಸ್ಪಷ್ಟವಾಗಿ ಕೇಳಲಾಗಿದ್ದರೂ, ಅವರ ಕರೆ ರೆಫರಿಗೆ ಸ್ವಲ್ಪ ಗೊಂದಲವನ್ನು ಉಂಟುಮಾಡಿರಬಹುದೇನೋ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಈ ದೃಶ್ಯವನ್ನು ನೋಡಿದ ಟೀಮ್ ಇಂಡಿಯಾ ಅಭಿಮಾನಿಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. “ಟೀಮ್ ಇಂಡಿಯಾಕ್ಕೆ ಅನ್ಯಾಯವಾಗಿದೆ, ಟಾಸ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ಸರಿಯಾದ ಫಲಿತಾಂಶವನ್ನು ನಿರ್ಧರಿಸಲು ಐಸಿಸಿ ವೀಡಿಯೊವನ್ನು ಪರಿಶೀಲಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಟಾಸ್ ವಿವಾದದ ಹೊರತಾಗಿಯೂ, ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧಿಸಿದೆ.
ಭಾರತ ಮತ್ತು ಪಾಕಿಸ್ತಾನ ಇಲ್ಲಿಯವರೆಗೆ 11 ಬಾರಿ ODI ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ, ಮತ್ತು ಈ ಎಲ್ಲಾ ಸಂದರ್ಭಗಳಲ್ಲಿ, ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎಲ್ಲಾ ಪಂದ್ಯಗಳಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇಂದು, ಭಾರತ ಮತ್ತು ಪಾಕಿಸ್ತಾನ ನಡುವಿನ 12 ನೇ ಪಂದ್ಯ ನಡೆಯಲಿದ್ದು, ಹರ್ಮನ್ಪ್ರೀತ್ ಕೌರ್ ಮತ್ತು ತಂಡವು ಈ ಅಜೇಯ ದಾಖಲೆಯನ್ನು ಕಾಯ್ದುಕೊಳ್ಳಲು ಮತ್ತು ಪಾಕಿಸ್ತಾನ ವಿರುದ್ಧ ತಮ್ಮ 12 ನೇ ಗೆಲುವು ದಾಖಲಿಸಲು ಬಯಸುತ್ತದೆ.
ಸ್ಮೃತಿ ಮಂಧಾನ, ಪ್ರತಿಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೀ ಚರಣಿ.
ಮುನಿಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮಿಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಫಾತಿಮಾ ಸನಾ (ನಾಯಕಿ), ನಟಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್
October 05, 2025 5:14 PM IST