Last Updated:
ಒಂದೇ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಈಗ ತಂಡವಾಗಿ ಅತಿ ಹೆಚ್ಚು ವೈಯಕ್ತಿಕ ಶತಕ ಸಿಡಿಸಿದ ದಾಖಲೆಯನ್ನು ಹೊಂದಿದೆ. ಆಸ್ಟ್ರೇಲಿಯಾ 2025 ರಲ್ಲಿ ಇಂಗ್ಲೆಂಡ್‌ನ 32 ವರ್ಷಗಳ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ (Australia Women Cricket Team) ತಂಡದ ಆರಂಭಿಕ ಆಟಗಾರ್ತಿ ಫೀಬೆ ಲಿಚ್‌ಫೀಲ್ಡ್ (Phoebe Litchfield) 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನ (Women’s World Cup) ಸೆಮಿಫೈನಲ್‌ನಲ್ಲಿ ಭಾರತದ (India vs Australia) ವಿರುದ್ಧ ಶತಕ ಗಳಿಸಿದರು. ಇದರೊಂದಿಗೆ, ಆಸ್ಟ್ರೇಲಿಯಾ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. ಆಸ್ಟ್ರೇಲಿಯಾ ಈಗ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಶತಕಗಳನ್ನು ಗಳಿಸಿದ ದೇಶವಾಗಿದೆ. 32 ವರ್ಷಗಳ ಹಿಂದೆ ಇಂಗ್ಲೆಂಡ್ ಸ್ಥಾಪಿಸಿದ್ದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ಮುರಿದಿದೆ.
ಇಂಗ್ಲೆಂಡ್ ಈ ಹಿಂದೆ ಒಂದೇ ಮಹಿಳಾ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಐದು ಶತಕಗಳನ್ನು ಗಳಿಸಿತ್ತು. ಇಂಗ್ಲೆಂಡ್ ಈ ಸಾಧನೆಯನ್ನ ಎರಡು ಬಾರಿ ಮಾಡಿದೆ. ಇಂಗ್ಲೆಂಡ್‌ನ ಐದು ಬ್ಯಾಟ್ಸ್‌ಮನ್‌ಗಳು 1993 ರ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 5 ಶತಕ ಸಿಡಿಸಿದ್ದರು. ಇಂಗ್ಲೆಂಡ್ ಮತ್ತೆ 2017ರ ವಿಶ್ವಕಪ್‌ನಲ್ಲಿ ಈ ವಿಶ್ವ ದಾಖಲೆಯನ್ನು ಸರಿಗಟ್ಟಿತ್ತು. ಇದೀಗ ಆಸ್ಟ್ರೇಲಿಯಾ 2025ರ ಆವೃತ್ತಿಯಲ್ಲಿ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಆಶ್ಲೀ ಗಾರ್ಡ್ನರ್ ಮತ್ತು ಅಲಿಸಾ ಹೀಲಿ ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ತಲಾ ಎರಡು ಶತಕಗಳನ್ನು ಸಿಡಿಸಿದ್ದಾರೆ. ಬೆತ್ ಮೂನಿ ಮತ್ತು ಫೀಬೆ ಲಿಚ್‌ಫೀಲ್ಡ್ 2025ರ ವಿಶ್ವಕಪ್‌ನಲ್ಲಿ ತಲಾ ಒಂದು ಶತಕ ಸಿಡಿಸಿದ್ದಾರೆ. ಹೀಗಾಗಿ, ಆಸ್ಟ್ರೇಲಿಯಾ ಈ ವಿಶ್ವಕಪ್‌ನಲ್ಲಿ ಒಟ್ಟು ಆರು ಶತಕಗಳನ್ನು ಸಿಡಿಸಿ, ಒಂದೇ ಮಹಿಳಾ ಕ್ರಿಕೆಟ್ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಶತಕ ಸಿಡಿಸಿದ ತಂಡ ಎನಿಸಿಕೊಂಡಿದೆ.
ಆಶ್ಲೀ ಗಾರ್ಡ್ನರ್- ಅಕ್ಟೋಬರ್ 1 vs ನ್ಯೂಜಿಲ್ಯಾಂಡ್ – 115 ರನ್ಸ್
ಬೆತ್ ಮೂನಿ- ಅಕ್ಟೋಬರ್ 8 vs ಪಾಕಿಸ್ತಾನ – 109ರನ್ಸ್
ಅಲಿಸಾ ಹೀಲಿ-ಅಕ್ಟೋಬರ್ 12 vs ಭಾರತ- 142 ರನ್ಸ್
ಅಲಿಸಾ ಹೀಲಿ- ಅಕ್ಟೋಬರ್ 16 vs ಬಾಂಗ್ಲಾದೇಶ- ಅಜೇಯ 113 ರನ್ಸ್
ಆ್ಯಶ್ ಗಾರ್ಡ್ನರ್ -ಅಕ್ಟೋಬರ್ 22 vs ಇಂಗ್ಲೆಂಡ್ – ಅಜೇಯ 104 ರನ್ಸ್
ಫೀಬೆ ಲಿಚ್‌ಫೀಲ್ಡ್- ಅಕ್ಟೋಬರ್ 30 vs ಭಾರತ- 119 ರನ್ಸ್
6 – 2025 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ
5 – 1993 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ
5 – 2017 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ
ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲದಿರುದುವು ಮತ್ತೊಂದು ವಿಶೇಷ. ಪ್ರತಿಯೊಂದು ಪ್ರಮುಖ ಪಂದ್ಯದಲ್ಲೂ ಒಬ್ಬ ಬ್ಯಾಟ್ಸ್‌ಮನ್ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ ಅದನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ಎಲ್ಲಾ ಪಂದ್ಯಗಳನ್ನು ಸುಲಭವಾಗಿ ಗೆದ್ದಿದೆ. ಆಸ್ಟ್ರೇಲಿಯಾ ಭಾರತದ ವಿರುದ್ಧ ಲೀಗ್ನಲ್ಲೂ ಕೂಡ 300 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತ್ತು. ಇದೀಗ ಸೆಮಿಫೈನಲ್‌ನಲ್ಲಿ ಮತ್ತೆ ಭಾರತದ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.
October 30, 2025 9:08 PM IST