Women’s World Cup: ಮಹಿಳಾ ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲು! ಸೆಮಿಫೈನಲ್​​ನಲ್ಲಿ ನಾಚಿಕೆಗೇಡಿನ ದಾಖಲೆ ಬರೆದ ಇಂಗ್ಲೆಂಡ್ ವನಿತೆಯರು | England women lost first 3 wickets for without score first time in women’s cricket | ಕ್ರೀಡೆ

Women’s World Cup: ಮಹಿಳಾ ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲು! ಸೆಮಿಫೈನಲ್​​ನಲ್ಲಿ ನಾಚಿಕೆಗೇಡಿನ ದಾಖಲೆ ಬರೆದ ಇಂಗ್ಲೆಂಡ್ ವನಿತೆಯರು | England women lost first 3 wickets for without score first time in women’s cricket | ಕ್ರೀಡೆ

Last Updated:

320 ರನ್​ಗಳ ಗುರಿ ಬೆನ್ನಟ್ಟದ ಇಂಗ್ಲೆಂಡ್‌ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ಗೆ ಅವಮಾನಕರ ಆರಂಭವನ್ನು ನೀಡಿದ್ದಾರೆ. 20 ವರ್ಷಗಳ ನಂತರ WODI ಕ್ರಿಕೆಟ್‌ನಲ್ಲಿ ತಂಡ ಅಲ್ಪ ಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡಿವೆ.

england vs south africa semifinals
england vs south africa semifinals

2025ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ನ (Women’s World Cup) ಮೊದಲ ಸೆಮಿಫೈನಲ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ (England vs South Africa) ನಡುವೆ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 319 ರನ್​ಗಳಿಸಿದೆ. 320 ರನ್‌ಗಳ ಬೃಹತ್ ಗುರಿಗೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್‌ ಭಾರೀ ಕಳಪೆ ಆರಂಭ ಪಡೆದುಕೊಂಡಿದೆ. ಇಂಗ್ಲೆಂಡ್ ಮಹಿಳಾ ತಂಡವು ODI ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ತಮ್ಮ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಾಚಿಕೆಗೇಡಿನ ದಾಖಲೆಗೆ ಪಾತ್ರವಾಗಿದೆ. ಇದು ಮಾತ್ರವಲ್ಲ, ಇಂಗ್ಲೆಂಡ್ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಇದು ODI ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಇಂತಕ ಕಳಪೆ ದಾಖಲೆ ಬರೆದಿದೆ.

ಖಾತೆ ತೆರೆಯದೆ ಮೂವರು ಔಟ್

ಸೆಮಿಫೈನಲ್ ಪಂದ್ಯದಲ್ಲಿ ಬೃಹತ್ ಸ್ಕೋರ್ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳು ಇಂಗ್ಲೆಂಡ್‌ನ ಅಡಿಪಾಯವನ್ನು ಅಲುಗಾಡಿಸಿದರು. ಇಂಗ್ಲೆಂಡ್ ತನ್ನ ಮೊದಲ ಓವರ್​ನಲ್ಲೇ ಮೊದಲ ಎರಡು ವಿಕೆಟ್‌ಗಳನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಂತರ, ತಂಡದ ಮೊತ್ತ 1 ರನ್​ ಆಗುವಷ್ಟರಲ್ಲಿ ಮೂರನೇ ವಿಕೆಟ್ ಪತನವಾಯಿತು. ಆಶ್ಚರ್ಯಕರವಾಗಿ, ಮೂರನೇ ಬ್ಯಾಟ್ಸ್‌ಮನ್ ಕೂಡ ಖಾತೆ ತೆರೆಯಲು ವಿಫಲರಾದರು. ಆ ಒಂದು ರನ್ ವೈಡ್ ಮೂಲಕ ಬಂದಿತು.

ಮಹಿಳಾ ಏಕದಿನ ಕ್ರಿಕೆಟ್​​ನಲ್ಲಿ ಇದೇ ಮೊದಲು ಈ ಕಳಪೆ ದಾಖಲೆ

20 ವರ್ಷಗಳ ನಂತರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಒಂದು ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು, 2005 ರಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಒಂದು ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದವು

1 ರನ್ – ನ್ಯೂಜಿಲೆಂಡ್ vs ಆಸ್ಟ್ರೇಲಿಯಾ, ಪಶ್ಚಿಮ ಆಸ್ಟ್ರೇಲಿಯಾ, 2005

1 ರನ್ – ಶ್ರೀಲಂಕಾ vs ದಕ್ಷಿಣ ಆಫ್ರಿಕಾ, ಪ್ರಿಟೋರಿಯಾ, 2005 ವಿಶ್ವಕಪ್

1 ರನ್ – ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಗುವಾಹಟಿ, 2025 ವಿಶ್ವಕಪ್

ಮಹಿಳಾ ಕ್ರಿಕೆಟ್​​ನಲ್ಲಿ ಇದೇ ಮೊದಲು

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ನಂಬರ್ 1, ನಂಬರ್ 2 ಮತ್ತು 3ನೇ ಬ್ಯಾಟ್ಸ್‌ಮನ್‌ಗಳು ತಮ್ಮ ಖಾತೆಗಳನ್ನು ತೆರೆಯಲು ವಿಫಲರಾಗಿರುವುದು ಇದೇ ಮೊದಲು. ಆಮಿ ಜೋನ್ಸ್, ಟ್ಯಾಮಿ ಬ್ಯೂಮೌಂಟ್ ಮತ್ತು ಹೀದರ್ ನೈಟ್ ಎಲ್ಲರೂ ತಮ್ಮ ಖಾತೆಗಳನ್ನು ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಇದರಿಂದಾಗಿ ನಾಲ್ಕನೇ ಮತ್ತು ಐದನೇ ಬ್ಯಾಟ್ಸ್‌ಮನ್‌ಗಳು ತಮ್ಮ ವಿಕೆಟ್‌ಗಳನ್ನು ಉಳಿಸಿಕೊಳ್ಳಲು ನಿಧಾನವಾಗಿ ಬ್ಯಾಟಿಂಗ್ ಮಾಡಬೇಕಾಯಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s World Cup: ಮಹಿಳಾ ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲು! ಸೆಮಿಫೈನಲ್​​ನಲ್ಲಿ ನಾಚಿಕೆಗೇಡಿನ ದಾಖಲೆ ಬರೆದ ಇಂಗ್ಲೆಂಡ್ ವನಿತೆಯರು