Last Updated:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಗಾಯಗೊಂಡ ಪ್ರತಿಕಾ ರಾವಲ್ ಬದಲಿಗೆ ಲೇಡಿ ಸೆಹ್ವಾಗ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಐಸಿಸಿ(ICC) ಮಹಿಳಾ ಏಕದಿನ ವಿಶ್ವಕಪ್(World Cup) 2025 ರ ಟೂರ್ನಿ ಭಾರೀ ಕುತೂಹಲ ಮೂಡಿಸಿದೆ. ಅಕ್ಟೋಬರ್ 30 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ(India vs Australia) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಭಾರತ ತಂಡದ ಪರ ಅದ್ಭುತ ಫಾರ್ಮ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪ್ರತೀಕಾ ರಾವಲ್(Pratika Rawal) ಗಾಯಗೊಂಡು ಟೂರ್ನಿಯಿಂದ ಹೊರಗುಳಿಬೇಕಾಗಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಸ್ಮೃತಿ ಮಂಧಾನ(Smriti Mandhana) ಜೊತೆಗೆ ಇನ್ನಿಂಗ್ಸ್ ಆರಂಭಿಸುವವರು ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ.
ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಓಪನರ್ ಪ್ರತೀಕಾ ರಾವಲ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಪರಿಣಾಮ ಅವರು ಗಂಭೀರ ಗಾಯದಿಂದಾಗಿ ಟೂರ್ನಿಯೊಂದ ಹೊರಗುಳಿಬೇಕಾಯಿತು. ಈಗ ಪ್ರತೀಕಾ ಅವರ ಸ್ಥಾನ ಬದಲಿ ಆಟಗಾರನನ್ನು ಘೋಷಿಸಲಾಗಿದೆ. ಪ್ರತೀಕಾ ಸ್ಥಾನದಲ್ಲಿ ಸ್ಮೃತಿ ಮಂಧಾನ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಲೇಡಿ ಸೆಹ್ವಾಗ್ ರೆಡಿಯಾಗಿದ್ದಾರೆ.
ಪ್ರತಿಕಾ ರಾವಲ್ ಬದಲಿಗೆ ಲೇಡಿ ಸೆಹ್ವಾಗ್ ಖ್ಯಾತಿಯ ಸ್ಟಾರ್ ಓಪನರ್ ಶೆಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರಈವೆಂಟ್ ತಾಂತ್ರಿಕ ಸಮಿತಿಯು ಪ್ರತಿಕಾ ರಾವಲ್ ಬದಲಿಗೆ ಶೆಫಾಲಿ ವರ್ಮಾ ಅವರನ್ನು ಭಾರತ ತಂಡದಲ್ಲಿ ಸೇರಿಸಿಕೊಳ್ಳಲು ಅನುಮೋದನೆ ನೀಡಿದೆ.
ಟೂರ್ನಿಯೊಂದರಲ್ಲಿ ತಂಡದ ಆಟಗಾರ್ತಿಯೊಬ್ಬರು ಗಾಯಗೊಂಡು ಹೊರಗುಳಿದರೆ ಬದಲಿಗೆ ಆಟಗಾರ್ತಿಯನ್ನು ಸೇರಿಸಿಕೊಳ್ಳುವುದು ಸಾಮಾನ್ಯ. ಆದರೆ, ತಂಡದಲ್ಲಿ ಯಾವುದೇ ಆಟಗಾರ್ತಿಯನ್ನು ಸೇರಿಸಿಕೊಳ್ಳಲು ಈವೆಂಟ್ ತಾಂತ್ರಿಕ ಸಮಿತಿಯ ಅನುಮೋದನೆ ಅಗತ್ಯವಾಗಿದೆ. ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಈವೆಂಟ್ ತಾಂತ್ರಿಕ ಸಮಿತಿಯಲ್ಲಿ ವಾಸಿಮ್ ಖಾನ್ (ಅಧ್ಯಕ್ಷರು, ಐಸಿಸಿ ಜನರಲ್ ಮ್ಯಾನೇಜರ್), ಗೌರವ್ ಸಕ್ಸೇನಾ (ಐಸಿಸಿ ಜನರಲ್ ಮ್ಯಾನೇಜರ್ – ಈವೆಂಟ್ಸ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ಸ್), ಅಬ್ಬೆ ಕುರುವಿಲ್ಲಾ (ಬಿಸಿಸಿಐ ಟೂರ್ನಮೆಂಟ್ ಡೈರೆಕ್ಟರ್) ಮತ್ತು ಮೆಲ್ ಜೋನ್ಸ್ (ಸ್ವತಂತ್ರ ನಾಮಿನಿ) ಇದ್ದಾರೆ.
21 ವರ್ಷದ ಶೆಫಾಲಿ ವರ್ಮಾ ಏಕದಿನ ಪಂದ್ಯಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಅವರು ಇಲ್ಲಿಯವರೆಗೆ 29 ಪಂದ್ಯಗಳಲ್ಲಿ 644 ರನ್ ಗಳಿಸಿದ್ದು, ನಾಲ್ಕು ಅರ್ಧಶತಕಗಳನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 71 ರನ್. ಶೆಫಾಲಿ ಕೊನೆಯ ಬಾರಿಗೆ ಒಂದು ವರ್ಷದ ಹಿಂದೆ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ್ದರು. ಅಂದಿನಿಂದ ಅವರು ಭಾರತ ತಂಡದ ಭಾಗವಾಗಿಲ್ಲ. ಈಗ ಅವರು ಮತ್ತೊಮ್ಮೆ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ.
October 28, 2025 4:23 PM IST