Last Updated:
ಹಾಸನ ಮೂಲದ ನಾಗರಾಜ ಗೌಡ ಆರು ವರ್ಷಗಳಿಂದ ಹಳೆಯ ಸೈಕಲ್ ನಲ್ಲಿ ಭಾರತ ಯಾತ್ರೆ ನಡೆಸಿ, 20 ರಾಜ್ಯಗಳಲ್ಲಿ ವಿಶ್ವಶಾಂತಿ ಜಾಗೃತಿ ಪಯಣ ಮಾಡಿದ್ದಾರೆ. ಸದ್ಯ ಮಂಗಳೂರು ಮೂಲಕ ಗೋಕರ್ಣ ಕಡೆಗೆ ಸಾಗುತ್ತಿದ್ದಾರೆ.
ಮಂಗಳೂರು: ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಕೆಲವರು ವಿಶಿಷ್ಟ ಹವ್ಯಾಸಗಳನ್ನು ಹೊಂದಿರುತ್ತಾರೆ. ಹಾಸನ (Hassan) ಮೂಲದ ನಾಗರಾಜ ಗೌಡ ಇಂತಹದ್ದೇ ವಿಶಿಷ್ಟ ಹವ್ಯಾಸವುಳ್ಳವರು. ಇವರು ಕಳೆದ ಆರು ವರ್ಷಗಳಲ್ಲಿ ಏಕಾಂಗಿಯಾಗಿ (Alone) ತಮ್ಮ ಹಳೆಯ ಸೈಕಲ್ನಲ್ಲಿ (Cycle) ಭಾರತ ಯಾತ್ರೆ ನಡೆಸುತ್ತಿದ್ದಾರೆ.
ಅವಿವಾಹಿತರಾದ ನಾಗರಾಜ ಗೌಡರು ಆಧ್ಯಾತ್ಮ ಚಿಂತನೆ, ಆರ್ಎಸ್ಎಸ್ ಒಲವು ಉಳ್ಳವರಾಗಿದ್ದಾರೆ. ತಮ್ಮ ಕುಟುಂಬದಿಂದ ದೂರವಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಆತಂಕವಾದ, ಬಡತನ-ಸಿರಿತನ, ಅಶಾಂತಿ ತಾಂಡವವಾಡುತ್ತಿದೆ. ಆದ್ದರಿಂದ ವಿಶ್ವಶಾಂತಿ, ರಾಷ್ಟ್ರೀಯ ಏಕತೆಗಾಗಿ ತಾವು ಭಾರತ ಯಾತ್ರೆ ಮಾಡಲು ಸಂಕಲ್ಪಿಸಿದರು. ಅದಕ್ಕಾಗಿ ಆರು ವರ್ಷಗಳ ಹಿಂದೆ ಮುಂಬೈಯಿಂದ ಯಾತ್ರೆ ಆರಂಭಿಸಿದ್ದರು.
ಸದ್ಯ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಕೇರಳ, ಕರ್ನಾಟಕ ಹೀಗೆ ಹತ್ತಿಪ್ಪತ್ತು ರಾಜ್ಯಗಳನ್ನು ಸೈಕಲ್ನಲ್ಲೇ ಸುತ್ತಿದ್ದಾರೆ. ದಿನವೊಂದಕ್ಕೆ 60-70 ಕಿಮೀ ಸೈಕಲ್ ಸಂಚಾರ ಮಾಡುತ್ತಾರೆ. ಈ ಸುತ್ತಾಟದಲ್ಲಿ ಹಲವಾರು ಮಂದಿಯನ್ನು ಭೇಟಿಯಾಗಿದ್ದಾರೆ. ಆರು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಸೋನುಸೂದ್ರಂತಹ ನಟರನ್ನು ಭೇಟಿಯಾಗಿದ್ದಾರೆ.
ವಿಶ್ವಶಾಂತಿ ಜಾಗೃತಿಗಾಗಿ ಯಾತ್ರೆಯ ಉದ್ದೇಶದ ಬರಹವನ್ನು ತಮ್ಮ ಸೈಕಲ್ನಲ್ಲಿ ಅಳವಡಿಸಿ ಅದನ್ನು ಎಲ್ಲಾ ಕಡೆಗಳಲ್ಲಿ ಪಸರಿಸುತ್ತಿದ್ದಾರೆ. ತಮ್ಮ ಖರ್ಚಿಗಾಗಿ ಯಾರಾದರೂ ಕೊಟ್ಟ ದೇಣಿಗೆಯನ್ನು ಪಡೆದುಕೊಳ್ಳುತ್ತಾರೆ. ಹೋದಕಡೆಗಳಲ್ಲಿ ದೇವಸ್ಥಾನ, ಧರ್ಮಛತ್ರ, ಆರ್ಯಸಮಾಜ, ಗುರುದ್ವಾರಗಳಲ್ಲಿ ಉಳಿದುಕೊಳ್ಳುತ್ತಾರೆ.
ಇಷ್ಟೇ ಆಸ್ತಿ, ಬೆಟ್ಟದಷ್ಟು ನೆನಪು!
Dakshina Kannada,Karnataka
November 30, 2025 11:22 AM IST