Last Updated:
ಕಿವೀಸ್ 601ಕ್ಕೆ ಡಿಕ್ಲೇರ್ ಘೋಷಿಸುತ್ತಿದ್ದಂತೆ ಕಣಕ್ಕಿಳಿದಿದ್ದ ಜಿಂಬಾಬ್ವೆ ತಂಡ ಕೇವಲ 117ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 359 ರನ್‌ಗಳ ಬೃಹತ್ ಅಂತರದಿಂದ ಸೋಲು ಕಂಡಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಿಕ್ ವೆಲ್ ಅಜೇಯ 47 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ನಾಯಕ ಕ್ರೈಗ್ ಇರ್ವಿನ್ 17 ರನ್ಗಳಿಸಿ ಇಡೀ ತಂಡದಲ್ಲಿ ಎರಡಂಕಿ ದಾಟಿ ಮತ್ತೊಬ್ಬ ಬ್ಯಾಟರ್ ಎನಿಸಿಕೊಂಡರು.
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಜಿಂಬಾಬ್ವೆ (New Zealand vs Zimbabwe) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆದಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಗಸ್ಟ್ 7, 2025ರಿಂದ ಆರಂಭವಾದ ಈ ಪಂದ್ಯದ ಎರಡನೇ ದಿನದ ಆಟದ ಅಂತ್ಯಕ್ಕೆ, ನ್ಯೂಜಿಲೆಂಡ್ ತಂಡವು 130 ಓವರ್‌ಗಳಲ್ಲಿ 3 ವಿಕೆಟ್‌ಗೆ 601 ರನ್‌ಗಳ ಭಾರೀ ಮೊತ್ತವನ್ನು ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೇ (153), ರಚಿನ್ ರವೀಂದ್ರ (165*), ಮತ್ತು ಹೆನ್ರಿ ನಿಕೋಲ್ಸ್ (150*) ಎಲ್ಲರೂ 150+ ರನ್ಗಳಿಸಿದರು. ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ವಿದೇಶಿ ನೆಲದಲ್ಲಿ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಮೂರು 150+ ಸ್ಕೋರ್‌ಗಳನ್ನು ಗಳಿಸಿದ ವಿಶ್ವದ ಮೊದಲ ತಂಡ ಎಂಬ ವಿಶ್ವದಾಖಲೆಗೆ ನ್ಯೂಜಿಲ್ಯಾಂಡ್ ಪಾತ್ರವಾಯಿತು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ, ನ್ಯೂಜಿಲೆಂಡ್‌ನ ಬೌಲರ್‌ಗಳು ಆಕ್ರಮಣಕಾರಿ ಬೌಲಿಂಗ್‌ನಿಂದ ಜಿಂಬಾಬ್ವೆಯನ್ನು ಕೇವಲ 125 ರನ್‌ಗಳಿಗೆ ಆಲೌಟ್ ಮಾಡಿದರು. ಜಿಂಬಾಬ್ವೆಯ ಬ್ಯಾಟಿಂಗ್‌ನಲ್ಲಿ ಓಪನರ್ ಬ್ರೆಂಡನ್ ಟೇಲರ್ (44 ರನ್) ಮತ್ತು ವಿಕೆಟ್ ಕೀಪರ್ ತಫಜ್ವಾ ತ್ಸಿಂಗಾ (33* ರನ್) ಮಾತ್ರ ಗಮನಾರ್ಹ ಕೊಡುಗೆ ನೀಡಿದರು. ಇತರ ಬ್ಯಾಟ್ಸ್‌ಮನ್‌ಗಳಾದ ನಿಕ್ ವೆಲ್ಚ್ (11) ಮತ್ತು ಸೀನ್ ವಿಲಿಯಮ್ಸ್ (11) ದ್ವಿಅಂಕದ ಸ್ಕೋರ್ ಗಳಿಸಿದರಾದರೂ, ತಂಡದ ಒಟ್ಟಾರೆ ಪ್ರದರ್ಶನ ತೀರ ನಿರಾಶಾದಾಯಕವಾಗಿತ್ತು.
ನ್ಯೂಜಿಲೆಂಡ್‌ನ ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ ಮತ್ತೊಂದು 5 ವಿಕೆಟ್ ಗೊಂಚಲು (5/24) ಪಡೆದರೆ, ಜಾಕ್ ಫೌಲ್ಕ್ಸ್ 4 ವಿಕೆಟ್‌ಗಳನ್ನು (4/38) ಪಡೆದರು. ಮ್ಯಾಥ್ಯೂ ಫಿಶರ್ ಒಂದು ವಿಕೆಟ್ (1/22) ಪಡೆದು ಜಿಂಬಾಬ್ವೆಯ ಬ್ಯಾಟಿಂಗ್ ಶಕ್ತಿಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದರು.
ನ್ಯೂಜಿಲೆಂಡ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ ಜಿಂಬಾಬ್ವೆಯ ಬೌಲರ್‌ಗಳನ್ನು ತೀವ್ರ ಒತ್ತಡಕ್ಕೆ ಒಡ್ಡಿತು. ಎರಡನೇ ದಿನದ ಆಟದ ಅಂತ್ಯಕ್ಕೆ, 130 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 601 ರನ್‌ಗಳನ್ನು ಗಳಿಸಿತು, ಇದರಿಂದ 476 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಈ ಇನ್ನಿಂಗ್ಸ್‌ನಲ್ಲಿ ಮೂರು ಬ್ಯಾಟ್ಸ್‌ಮನ್‌ಗಳ 150+ ರನ್‌ಗಳ ಸ್ಕೋರ್‌ಗಳು ಈ ಸಾಧನೆಯನ್ನು ಐತಿಹಾಸಿಕವಾಗಿಸಿತು.
ಓಪನರ್ ಆಗಿ ಕಣಕ್ಕಿಳಿದಿದ್ದ ಡಿವೋನ್ ಕಾನ್ವೆ 245 ಎಸೆತಗಳಲ್ಲಿ 153 ರನ್ ಗಳಿಸಿದರು, ಅವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳಿದ್ದವು. ಮತ್ತೊಬ್ಬ ಆರಂಭಿಕ ಬ್ಯಾಟರ್ ವಿಲ್ ಯಂಗ್ 74 ರನ್ (8 ಬೌಂಡರಿಗಳು, 1 ಸಿಕ್ಸ್) ಗಳಿಸಿ ಕಾನ್ವೆಗೆ ಉತ್ತಮ ಸಹಕಾರ ನೀಡಿದರು. ನಂತರ ಬಂದ ರಚಿನ್ ರವೀಂದ್ರ 139 ಎಸೆತಗಳಲ್ಲಿ ಅಜೇಯ 165 ರನ್ ಗಳಿಸಿ ಅಬ್ಬರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿದಿಗಳು ಮತ್ತು 4 ಸಿಕ್ಸರ್‌ಗಳಿದ್ದವು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಹೆನ್ರಿ ನಿಕೋಲ್ಸ್ 245 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 150 ರನ್ ಗಳಿಸಿದರು. ನೈಟ್‌ವಾಚ್‌ಮನ್ ಆಗಿದ್ದ ಜಾಕೋಬ್ ಡಫಿ ಕೂಡ 36 ರನ್ ಗಳಿಸಿ ಸಣ್ಣ ಕೊಡುಗೆ ನೀಡಿದರು.
ನ್ಯೂಜಿಲೆಂಡ್‌ನ ಈ ಸಾಧನೆ ವಿದೇಶಿ ನೆಲದಲ್ಲಿ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಮೂರು ಆಟಗಾರರು 150+ ರನ್‌ಗಳನ್ನು ಗಳಿಸಿದ ಮೊದಲ ಘಟನೆಯಾಗಿದೆ. ಈ ಮೊದಲು, ಇಂಗ್ಲೆಂಡ್ (1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಓವಲ್‌ನಲ್ಲಿ) ಮತ್ತು ಭಾರತ (2009ರಲ್ಲಿ ಶ್ರೀಲಂಕಾ ವಿರುದ್ಧ, ಕಾನ್ಪುರದಲ್ಲಿ) ತಮ್ಮ ತವರಿನಲ್ಲಿ ಈ ಸಾಧನೆ ಮಾಡಿದ್ದವು. ಆದರೆ, ವಿದೇಶಿ ನೆಲದಲ್ಲಿ ಈ ದಾಖಲೆಯನ್ನು ಮಾಡಿದ ಮೊದಲ ತಂಡವಾಗಿ ನ್ಯೂಜಿಲೆಂಡ್ ಇತಿಹಾಸ ಬರೆದಿದೆ.
ಕಿವೀಸ್ 601ಕ್ಕೆ ಡಿಕ್ಲೇರ್ ಘೋಷಿಸುತ್ತಿದ್ದಂತೆ ಕಣಕ್ಕಿಳಿದಿದ್ದ ಜಿಂಬಾಬ್ವೆ ತಂಡ ಕೇವಲ 117ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 359 ರನ್‌ಗಳ ಬೃಹತ್ ಅಂತರದಿಂದ ಸೋಲು ಕಂಡಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಿಕ್ ವೆಲ್ ಅಜೇಯ 47 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ನಾಯಕ ಕ್ರೈಗ್ ಇರ್ವಿನ್ 17 ರನ್ಗಳಿಸಿ ಇಡೀ ತಂಡದಲ್ಲಿ ಎರಡಂಕಿ ದಾಟಿ ಮತ್ತೊಬ್ಬ ಬ್ಯಾಟರ್ ಎನಿಸಿಕೊಂಡರು.
ಕಿವೀಸ್ ಪರ ಜಾಕ್ ಫೌಲ್ಕ್ಸ್ 37ಕ್ಕೆ 5 ವಿಕೆಟ್ ಪಡೆದರೆ, ಜಾಕೋಬ್ ಡಫಿ 28ಕ್ಕೆ2, ಮ್ಯಾಟ್ ಹೆನ್ರಿ 16ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
August 09, 2025 4:29 PM IST
World Record: ಜಿಂಬಾಬ್ವೆ ವಿರುದ್ಧ ಚರಿತ್ರೆ ಸೃಷ್ಟಿಸಿದ ನ್ಯೂಜಿಲೆಂಡ್! 148 ವರ್ಷಗಳ ಟೆಸ್ಟ್ ಚರಿತ್ರೆಯಲ್ಲೇ ಈ ಸಾಧನೆ ಮಾಡಿದ ಮೊದಲ ತಂಡ