74 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಕಸಿದ್ದ ಆಸ್ಟ್ರೇಲಿಯಾದ ಆರಂಭದಿಂದಲೇ ಕುಸಿತ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಉಸ್ಮಾನ್ ಖವಾಜಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಗೆ ಸೀಮಿತವಾದರೆ. ಸ್ಟೀವ್ ಸ್ಮಿತ್ (13), ಮಾರ್ನಸ್ ಲಾಬುಶೇನ್ (22), ಮತ್ತು ಕ್ಯಾಮರೂನ್ ಗ್ರೀನ್ (0) ಕೂಡ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ಆಸ್ಟ್ರೇಲಿಯಾ 48/4 ರನ್‌ಗೆ ಕುಸಿದಿತ್ತು, ಮತ್ತು ನಂತರ 73/7 ರನ್‌ಗೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (43) ಮತ್ತು ಮಿಚೆಲ್ ಸ್ಟಾರ್ಕ್ (16*) ಎಂಟನೇ ವಿಕೆಟ್‌ಗೆ 61 ರನ್‌ಗಳ ಮಹತ್ವದ ಜೊತೆಯಾಟವಾಡಿ ಇನಿಂಗ್ಸ್‌ನ್ನು ಸ್ಥಿರಗೊಳಿಸಿದರು. ಕ್ಯಾರಿಯ ಔಟಾದ ಬಳಿಕ ಸ್ಟಾರ್ಕ್ ಮತ್ತು ಲಿಯಾನ್ (1*) ದಿನದಾಟವನ್ನು ಮುಗಿಸಿದ್ದರು.
ಸ್ಟಾರ್ಕ್-ಹ್ಯಾಜಲ್ವುಡ್ ಭರ್ಜರಿ ಜೊತೆಯಾಟ
2ನೇ ದಿನದಾಟದಂತ್ಯಕ್ಕೆ 144ಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಇಂದು ಆ ಮೊತ್ತಕ್ಕೆ 4 ರನ್ಗಳನ್ನ ಸೇರಿಸಲಷ್ಟೇ ಶಕ್ತವಾಯಿತು. ನಿನ್ನೆ 1 ರನ್ಗಳಿಸಿ ಅಜೇಯರಾಗಿ ಉಳಿದಿದ್ದ ನೇಥನ್ ಲಿಯಾನ್ ಇಂದು ಅದನ್ನೆ 2ಕ್ಕೆ ವಿಸ್ತರಿಸಿ ದಿನದ 3ನೇ ಓವರ್ನಲ್ಲಿ ಕಗಿಸೋ ರಬಾಡ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಆದರೆ 10ನೇ ವಿಕೆಟ್‌ಗೆ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಜಲ್ವುಡ್ 59 ರನ್‌ಗಳ ಜೊತೆಯಾಟ ನಡೆಸಿ 2ನೇ ಇನ್ನಿಂಗ್ಸ್ನಲ್ಲೂ 200ರ ಗಡಿ ದಾಟಿಸಿದರು.
ಒಟ್ಟಾರೆ ಆಸ್ಟ್ರೆಲಿಯಾ ತನ್ನ 2ನೇ ಇನ್ನಿಂಗ್ಸ್ನಲ್ಲಿ 65 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 207 ರನ್‌ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾಗೆ 282 ರನ್‌ಗಳ ಕಠಿಣ ಗುರಿ ನೀಡಿದೆ. ಈ ಮೈದಾನ ಬೌಲರ್ಗಳಿಗೆ ನೆರವು ನೀಡುತ್ತಿರುವುದರಿಂದ ಈ ಮೊತ್ತ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಸವಾಲಾಗಿದೆ. ಒಂದು ವೇಳೆ ಈ ಗುರಿಯನ್ನ ಬೆನ್ನಟ್ಟಿದ್ದರೆ, 1998ರ ನಂತರ ತನ್ನ 2ನೇ ಐಸಿಸಿ ಟ್ರೋಫಿ ಗೆದ್ದಂತಾಗಿದೆ.
2ನೇ ಐಸಿಸಿ ಟ್ರೋಫಿ ಗೆಲ್ಲುತ್ತವ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ ಕ್ರಿಕೆಟ್ ಇತಿಹಾಸದ ಚೋಕರ್ಸ್ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 1998ರ ಚಾಂಪಿಯನ್ಸ್ ಟ್ರೋಫಿ ಬಿಟ್ಟಿರೆ 2024ರಲ್ಲಿ ಮಾತ್ರ ಐಸಿಸಿ ಟ್ರೋಫಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಭಾರತದ ವಿರುದ್ದ ಫೈನಲ್ ಪಂದ್ಯದಲ್ಲಿ ಸೋಲು ಕಂಡಿತ್ತು. ಇದೀಗ 2025ರ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟ್ರೋಫಿ ಗೆಲ್ಲು ಅವಕಾಶವಿದೆ. ಇನ್ನೂ 3 ದಿನಗಳ ಆಟ ಬಾಕಿ ಉಳಿದಿದ್ದು, ಮೊದಲ ಇನ್ನಿಂಗ್ಸ್ನಂತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರದೇ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆ ನಿಂತರೆ ಮಾತ್ರ ಹರಿಣಗಳಿಗೆ 2ನೇ ಐಸಿಸಿ ಟ್ರೋಫಿ ಸಿಗಲಿದೆ.
ದಕ್ಷಿಣ ಆಫ್ರಿಕಾದ ಇನಿಂಗ್ಸ್: 138ಕ್ಕೆ ಆಲೌಟ್
ಮೊದಲ ದಿನದಾಟದ ಅಂತ್ಯಕ್ಕೆ 43/4 ರನ್‌ಗಳಿಗೆ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಂದು ತಮ್ಮ ಇನಿಂಗ್ಸ್‌ನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿತು. ನಾಯಕ ಟೆಂಬಾ ಬವುಮಾ (36 ರನ್, 84 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಡೇವಿಡ್ ಬೆಡಿಂಗ್‌ಹ್ಯಾಮ್ (45 ರನ್, 111 ಎಸೆತ, 6 ಬೌಂಡರಿ) ಐದನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಬೆಂಬಲ ನೀಡಿದರು. ಆದರೆ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 138 ರನ್‌ಗಳಿಗೆ ಆಲೌಟ್ ಆಗಿ 74 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು.
ಕಮಿನ್ಸ್‌ರಿಂದ ದಾಖಲೆಯ ಬೌಲಿಂಗ್
ಪ್ಯಾಟ್ ಕಮಿನ್ಸ್ ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನ್ನು ಧ್ವಂಸಗೊಳಿಸಿ 18.1 ಓವರ್‌ಗಳಲ್ಲಿ 28 ರನ್‌ಗೆ 6 ವಿಕೆಟ್‌ಗಳನ್ನು ಪಡೆದರು. ಈ ಪಂದ್ಯದಲ್ಲಿ ಅವರು ವಿಯಾನ್ ಮುಲ್ಡರ್ (6), ಟೆಂಬಾ ಬವುಮಾ (36), ಡೇವಿಡ್ ಬೆಡಿಂಗ್‌ಹ್ಯಾಮ್ (45), ಕೈಲ್ ವೆರ್ರೆನ್ (13), ಕಗಿಸೊ ರಬಾಡ (1), ಮತ್ತು ಮಾರ್ಕೊ ಜಾನ್ಸೆನ್ (0) ವಿಕೆಟ್‌ಗಳನ್ನು ಪಡೆದರು. ಈ ಸಾಧನೆಯೊಂದಿಗೆ ಕಮಿನ್ಸ್ ಹಲವು ದಾಖಲೆಗಳನ್ನು ಬರೆದರು.
June 13, 2025 5:08 PM IST