WTC Final: ಡಬ್ಯ್ಲೂಟಿಸಿ ಫೈನಲ್ ಗೆಲುವಿನ ರನ್ ಬರ್ತಿದ್ದಂತೆ ಸೌತ್ ಆಫ್ರಿಕಾ ನಾಯಕ ಟೆಂಬಾ ಮಾಡಿದ್ದೇನು? ಬವುಮಾ ವಿಡಿಯೋ ವೈರಲ್ | South Africa wins ICC trophy after 27 years celebration and temba bavuma celebration is viral

WTC Final: ಡಬ್ಯ್ಲೂಟಿಸಿ ಫೈನಲ್ ಗೆಲುವಿನ ರನ್ ಬರ್ತಿದ್ದಂತೆ ಸೌತ್ ಆಫ್ರಿಕಾ ನಾಯಕ ಟೆಂಬಾ ಮಾಡಿದ್ದೇನು? ಬವುಮಾ ವಿಡಿಯೋ ವೈರಲ್ | South Africa wins ICC trophy after 27 years celebration and temba bavuma celebration is viral

Last Updated:

ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದಿದೆ. ಕಗಿಸೋ ರಬಾಡ ಬೌಲಿಂಗ್, ಏಡನ್ ಮಾರ್ಕ್ರಂ ಮತ್ತು ಟೆಂಬಾ ಬವುಮಾ ಬ್ಯಾಟಿಂಗ್ ಕಮಾಲ್. ಬವುಮಾ ನಾಯಕತ್ವದಲ್ಲಿ ತಂಡದ ಸಂಭ್ರಮ.

ಟೆಂಬಾ ಬವುಮಾ
ಟೆಂಬಾ ಬವುಮಾ
ಟೆಂಬಾ ಬವುಮಾ

ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಗೆದ್ದಿದ್ದಾರೆ. ಬರೋಬ್ಬರಿ 27 ವರ್ಷಗಳ ಬಳಿಕ ಸೌತ್ ಆಫ್ರಿಕಾ ಐಸಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಈ ಫೈನಲ್‌ನಲ್ಲಿ ಬೌಲಿಂಗ್‌ನಲ್ಲಿ ಕಗಿಸೋ ರಬಾಡ ಕಮಾಲ್ ಮಾಡಿದ್ರೆ, ಏಡನ್ ಮಾರ್ಕ್ರಂ ಹಾಗೂ ಟೆಂಬಾ ಬವುಮಾ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು.

ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹರಿಣ ಪಡೆ, ಮೂರನೇ ದಿನದ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 213 ರನ್ ಗಳಿಸಿತ್ತು. 4ನೇ ದಿನ ಬವುಮಾ ಪಡೆಗೆ ಗೆಲ್ಲಲು ಕೇವಲ 69 ರನ್‌ಗಳ ಅಗತ್ಯವಿತ್ತು. ಆ ಮೊತ್ತವನ್ನು 83. 4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ದಕ್ಷಿಣ ಆಫ್ರಿಕಾ 27 ವರ್ಷಗಳ ನಂತರ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಟೆಂಬಾ ಬವುಮಾ ಭಾವುಕ

ಪಂದ್ಯ ಗೆದ್ದ ಬಳಿಕ ಗ್ಯಾಲರಿಯಲ್ಲಿ ಕುಳಿತಿದ್ದ ಹರಿಣಗಳ ತಂಡದ ನಾಯಕ ಟೆಂಬ ಬವುಮಾ ಅವರ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ಅವರು ಗೆಲುವಿನ ರನ್ ಬರುತ್ತಿದ್ದಂತೆ ಯಾವುದೇ ಸೆಲೆಬ್ರೇಶನ್‌ಗೆ ಮುಂದಾಗದೆ ಸೈಲೆಂಟ್ ಆಗಿ ಕುಳಿತುಕೊಳ್ಳುತ್ತಾರೆ. ಮಾತ್ರವಲ್ಲ ಅವರನ್ನು ಭಾವುಕರಾಗಿರುತ್ತಾರೆ. ಅಂದ್ರೆ, ಈ ಟ್ರೋಫಿಯ ಗೆಲುವು ಅವರಿಗೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಅವರ ಮುಖಭಾವ ಹೇಳುವಂತಿತ್ತು.

ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಬವುಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಯಕನಾಗಿ ಅವರು ಅದ್ಭುತ ದಾಖಲೆಯನ್ನು ಹೊಂದಿದ್ದಾರೆ ಮತ್ತು ಡೀನ್ ಎಲ್ಗರ್ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಇದುವರೆಗೆ ಅವರು ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ದಕ್ಷಿಣ ಆಫ್ರಿಕಾ WTC ಫೈನಲ್ ಅನ್ನು ಗೆದ್ದ ನಂತರ, ಬವುಮಾ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂದರ್ಭವು ಅನೇಕರು ಬವುಮಾ ಕುಣಿದು ಕುಪ್ಪಳಿಸಬಹುದು ಎಂದು ಅನೇಕರು ಭಾವಿಸಿದ್ದರು. ಆದ್ರೆ, ಅವರ ಮೌನ ಮತ್ತು ಸೈಲೆಂಟ್ ಗೆಲುವು ಎಷ್ಟು ಮಹತ್ವ ಎಂಬುದನ್ನು ತೋರಿಸಿದೆ.

ದಕ್ಷಿಣ ಆಫ್ರಿಕಾ ದಶಕಗಳಿಂದ ಚೋಕರ್ಸ್ ಟ್ಯಾಗ್ ಅನ್ನು ಹೊಂದಿತ್ತು. ಆದರೆ WTC ಅಂತಿಮವಾಗಿ ಗೆಲ್ಲುವ ಮೂಲಕ ಈ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿದೆ. ಹರಿಣಗಳ ತಂಡ ಹಲವು ಬಾರಿ ವಿಶ್ವಕಪ್ ಗೆಲ್ಲುವ ಸನಿಹಕ್ಕೆ ಬಂದು ಎಡವಿದೆ. 2024 ರ T20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಇನ್ನೇನು ಗೆದ್ದೇ ಬಿಟ್ಟೆವು ಎನ್ನುವಾಗ ಸೋಲು ಅನುಭವಿಸಿತ್ತು. ಈ ರೀತಿಯ ಹಲವು ಉದಾಹರಣೆಗಳು ಅವರ ಮುಂದಿವೆ.