Last Updated:
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಪತನಗೊಂಡಿತು, ಕಗಿಸೊ ರಬಾಡ (5/51) ಮತ್ತು ಮಾರ್ಕೊ ಜಾನ್ಸೆನ್ (3/49) ವಿಕೆಟ್ ಪಡೆದರು. ಬ್ಯೂ ವೆಬ್‌ಸ್ಟರ್ (92 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 72) ಮತ್ತು ಸ್ಟೀವ್ ಸ್ಮಿತ್ (112 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 66) ಅರ್ಧಶತಕಗಳೊಂದಿಗೆ ಕುಸಿದ ಆಸೀಸ್‌ಗೆ ಆಸರೆಯಾದರು.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ (South Africa vs Australia) ನಡುವಿನ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಪಂದ್ಯವು ಮೊದಲ ದಿನವೇ ಬಹಳ ರೋಚಕತೆಯನ್ನುಂಟು ಮಾಡಿದೆ. ಬುಧವಾರ ಲಾರ್ಡ್ಸ್‌ನಲ್ಲಿ (Lords) ಪ್ರಾರಂಭವಾದ ಈ ರೋಚಕ ಪಂದ್ಯದಲ್ಲಿ, ಮೊದಲ ದಿನದಾಟದಲ್ಲಿ ವೇಗಿಗಳು ವಿಜೃಂಭಿಸಿದರು. ಎರಡೂ ತಂಡಗಳ ಬೌಲರ್‌ಗಳು ಪಿಚ್‌ನಿಂದ ದೊರೆತ ಬೆಂಬಲದ ಸಂಪೂರ್ಣ ಲಾಭವನ್ನು ಪಡೆದರು. ಅದರೊಂದಿಗೆ ಮೊದಲ ದಿನವೇ 14 ವಿಕೆಟ್‌ಗಳು ಪತನಗೊಂಡವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ಭರ್ಜರಿ ಪ್ರದರ್ಶನ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಪತನಗೊಂಡಿತು, ಕಗಿಸೊ ರಬಾಡ (5/51) ಮತ್ತು ಮಾರ್ಕೊ ಜಾನ್ಸೆನ್ (3/49) ವಿಕೆಟ್ ಪಡೆದರು. ಬ್ಯೂ ವೆಬ್‌ಸ್ಟರ್ (92 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 72) ಮತ್ತು ಸ್ಟೀವ್ ಸ್ಮಿತ್ (112 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 66) ಅರ್ಧಶತಕಗಳೊಂದಿಗೆ ಕುಸಿದ ಆಸೀಸ್‌ಗೆ ಆಸರೆಯಾದರು.
ದಕ್ಷಿಣ ಆಫ್ರಿಕಾಗೆ ಆಘಾತ
ಆಸೀಸ್ ತಂಡವನ್ನು 212ಕ್ಕೆ ಆಲೌಟ್ ಮಾಡಿದ ದಕ್ಷಿಣ ಆಫ್ರಿಕಾ ಕೂಡ ಬ್ಯಾಟಿಂಗ್ ವೇಳೆ ಭಾರತೀ ಆಘಾತ ಎದುರಿಸಿತು. ಮೊದಲ ದಿನದಾಟವನ್ನು 22 ಓವರ್‌ಗಳಲ್ಲಿ 4 ವಿಕೆಟ್‌ಗೆ 43 ರನ್‌ಗಳಿಗೆ ಕೊನೆಗೊಳಿಸಿತು. ಐಡೆನ್ ಮಾರ್ಕ್ರಮ್ (0), ರಯಾನ್ ರಿಕಲ್ಟನ್ (16), ವಿಯಾನ್ ಮುಲ್ಡರ್ (6) ಮತ್ತು ಟ್ರಿಸ್ಟಾನ್ ಸ್ಟಬ್ಸ್ (2) ಅಲ್ಪಮೊತ್ತಕ್ಕೆ ಔಟಾಗುವ ಮೂಲಕ ಭಾರಿ ನಿರಾಶೆ ಮೂಡಿಸಿದರು. ನಾಯಕಿ ಟೆಂಬಾ ಬವುಮಾ (3 ಬ್ಯಾಟಿಂಗ್) ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ (8) ಕ್ರೀಸ್‌ನಲ್ಲಿದ್ದಾರೆ. ಎರಡನೇ ದಿನದಂದು ದಕ್ಷಿಣ ಆಫ್ರಿಕಾ ಎಷ್ಟು ಚೆನ್ನಾಗಿ ಬ್ಯಾಟಿಂಗ್‌ನಲ್ಲಿ ಹೋರಾಡುತ್ತದೆ ಎಂಬುದರ ಮೇಲೆ ಪಂದ್ಯದ ಗತಿ ಅವಲಂಬಿತವಾಗಿರುತ್ತದೆ.
ಯಾಮಾರಿದ ಬವೂಮ
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಾಡಿದ ತಪ್ಪಿನಿಂದ ಆಸ್ಟ್ರೇಲಿಯಾಗೆ 200ರ ಗಡಿದಾಟುವಂತಾಯಿತು. ಇಲ್ಲವಾದರೆ 150ರೊಳಗೆ ಕಟ್ಟಿಹಾಕುವ ಅವಕಾಶ ಸಿಗುತ್ತಿತ್ತು. ಆಸ್ಟ್ರೇಲಿಯಾದ ಅಗ್ರ ಸ್ಕೋರರ್ ಬ್ಯೂ ವೆಬ್‌ಸ್ಟರ್, ಹರಿಣಗಳ ತಪ್ಪಿನಿಂದಾಗಿ ಔಟ್ ಆಗುವ ಅಪಾಯದಿಂದ ಪಾರಾದರು. ರಬಾಡ ಎಸೆದ 29ನೇ ಓವರ್‌ನ ಎರಡನೇ ಎಸೆತದಲ್ಲಿ ವೆಬ್‌ಸ್ಟರ್ ಡಿಫೆಂಡ್ ಮಾಡಿಕೊಂಡರು. ಆದರೆ ಸಫಾರಿ ಆಟಗಾರರು ಎಲ್ಬಿಡಬ್ಲ್ಯೂಗೆ ಮೇಲ್ಮನವಿ ಸಲ್ಲಿಸಿದರು, ಆದರೆ ಅಂಪೈರ್ ಪ್ರತಿಕ್ರಿಯಿಸಲಿಲ್ಲ. ಈಗಾಗಲೇ ಎರಡು ಡಿಆರ್ಎಸ್ ಈಗಾಗಲೇ ವ್ಯರ್ಥವಾಗಿದ್ದರಿಂದ ದಕ್ಷಿಣ ಆಫ್ರಿಕಾ ತೆಗೆದುಕೊಳ್ಳುವ ಧೈರ್ಯ ಮಾಡಲಿಲ್ಲ. ಆದರೆ ರಿಪ್ಲೇಯಲ್ಲಿ ಅದು ಔಟ್ ಎಂದು ತೋರಿಸಿತು.
ದಕ್ಷಿಣ ಆಫ್ರಿಕಾ ಆಟಗಾರರು ರಿವ್ಯೂ ತೆಗೆದುಕೊಂಡಿದ್ದರೆ, ವೆಬ್‌ಸ್ಟರ್ 8 ರನ್‌ಗಳ ವೈಯಕ್ತಿಕ ಸ್ಕೋರ್‌ಗೆ ಔಟಾಗುತ್ತಿದ್ದರು. ಆದರೆ ಆಫ್ರಿಕನ್ ಆಟಗಾರರ ನಿರ್ಲಕ್ಷ್ಯದಿಂದ ಔಟಾದ ಅಪಾಯದಿಂದ ಪಾರಾದ ವೆಬ್‌ಸ್ಟರ್, ಸ್ಮಿತ್ ಜೊತೆ ಏಳನೇ ವಿಕೆಟ್‌ಗೆ 77 ರನ್ ಸೇರಿಸಿದರು. ರಿವ್ಯೂ ತೆಗೆದುಕೊಂಡು ವೆಬ್‌ಸ್ಟರ್ ಔಟಾಗಿದ್ದರೆ, ಆಸೀಸ್ 150 ರನ್‌ಗಳನ್ನು ಗಳಿಸುತ್ತಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ತಂಡವು ಒಂದು ಭೀಕರ ತಪ್ಪಿನಿಂದಾಗಿ ಬೆಲೆ ತೆತ್ತಿತು.
ತಪ್ಪನ್ನ ಒಪ್ಪಿಕೊಂಡ ರಬಾಡ
ಪಂದ್ಯದ ನಂತರ ಮಾತನಾಡಿದ ವೇಗಿ ರಬಾಡ ತಮ್ಮ ತಪ್ಪನ್ನು ಒಪ್ಪಿಕೊಂಡರು. ತನ್ನ ತಂಡದ ಸಹ ಆಟಗಾರ ಕಾರ್ಬಿನ್ ಬಾಷ್ ಅದು ಔಟ್ ಎಂದು ಹೇಳಿದರು, ಆದರೆ ನಾನೂ ಕೂಡ ಅದನ್ನು ಕೇಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಇನ್ನು ಸ್ಮಿತ್ ಅವರು ರಿವ್ಯೂವ್ ಪಡೆಯದಿರುವುದು ಸಂತೋಷವಾಗಿದೆ ಎಂದು ಹೇಳಿದರು. ‘ಅಲ್ಲಿ ನಿಜವಾಗಿಯೂ ಏನಾಯಿತು ಎಂದು ನನಗೆ ತಿಳಿದಿಲ್ಲ.’ ಆದರೆ ಅವರು ರಿವ್ಯೂವ್ ತೆಗೆದುಕೊಳ್ಳದಿರುವುದು ನಮಗೆ ಒಳ್ಳೆಯದಾಯಿತು. ಬ್ಯೂ ವೆಬ್‌ಸ್ಟರ್ ಚೆಂಡು ಬಿದ್ದ ವೇಳೆ ನೋವಿನಿಂದ ಬಳಲುತ್ತಿದ್ದರು. ಚೆಂಡು ಪ್ಯಾಡ್‌ಗೆ ಅಲ್ಲ, ಕಾಲಿಗೆ ತಗುಲಿತ್ತು. ರಿವ್ಯೂವ್ ತೆಗೆದುಕೊಂಡಿದ್ದರೆ ಔಟ್ ಆಗುವ ಅವಕಾಶ ಇರುತ್ತಿತ್ತು ಎಂದು ತಿಳಿಸಿದ್ದಾರೆ.
June 12, 2025 4:12 PM IST