Last Updated:
ಆಸ್ಟ್ರೇಲಿಯಾ ಕೇವಲ 212 ರನ್ ಗಳಿಸಿದ್ದರಿಂದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ನಿರೀಕ್ಷೆ ಇಡಲಾಗಿತ್ತು. ಆದ್ರೆ, ಎರಡನೇ ದಿನ ಎಲ್ಲವೂ ಉಲ್ಟಾ ಆಗಿದ್ದು, ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ಗೆ ಹರಿಣಗಳು ತತ್ತರಿಸಿ ಹೋಗಿದ್ದಾರೆ.
ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ (Lords Stadium) 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Final) ಫೈನಲ್ ಪಂದ್ಯ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ (South Africa vs Australia) ತಂಡಗಳು ಮುಖಾಮುಖಿಯಾಗಿವೆ. ಈ ಮಹತ್ವದ ಪಂದ್ಯದಲ್ಲಿ ಮೊದಲ ದಿನ ಹರಿಣಗಳ ಬೌಲರ್ಗಳು ಮೇಲುಗೈ ಸಾಧಿಸಿದರೆ, ಇಂದು ಆಸ್ಟ್ರೇಲಿಯಾ ಬೌಲರ್ಸ್ ಬಿಗು ದಾಳಿ ಮಾಡಿ ಹರಿಣಗಳ ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು.
6 ವಿಕೆಟ್ ಪಡೆದ ದಾಖಲೆ ಬರೆದ ಕಮಿನ್ಸ್
ಹೌದು, ಆಸ್ಟ್ರೇಲಿಯಾ ಕೇವಲ 212 ರನ್ ಗಳಿಸಿದ್ದರಿಂದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ನಿರೀಕ್ಷೆ ಇಡಲಾಗಿತ್ತು. ಆದ್ರೆ, ಎರಡನೇ ದಿನ ಎಲ್ಲವೂ ಉಲ್ಟಾ ಆಗಿದ್ದು, ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ಗೆ ಹರಿಣಗಳು ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲ, ಈ ಇನ್ನಿಂಗ್ಸ್‌ನಲ್ಲಿ ಕಮಿನ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಲಾರ್ಡ್ಸ್‌ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯುತ್ತಮ ಬೌಲರ್ ಎಂಬ 43 ವರ್ಷಗಳ ಹಳೆಯ ದಾಖಲೆಯನ್ನು ಪ್ಯಾಟ್ ಕಮ್ಮಿನ್ಸ್ ಮುರಿದರು.
ಆಸ್ಟ್ರೇಲಿಯಾ ನಾಯಕ ಕಮಿನ್ಸ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ, ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರ್ರೆನ್, ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ ಅವರನ್ನು ಔಟ್ ಮಾಡುವ ಮೂಲಕ 6 ವಿಕೆಟ್ ಪಡೆದ ಸಾಧನೆ ಮಾಡಿದರು. ಗಮನಾರ್ಹವಾಗಿ, ಬಾಬ್ ವಿಲ್ಲೀಸ್ 1982 ರಲ್ಲಿ ಭಾರತ ವಿರುದ್ಧ 5 ವಿಕೆಟ್ ಪಡೆಯುವ ಮೂಲಕ ಲಾರ್ಡ್ಸ್‌ನಲ್ಲಿ ನಾಯಕನೊಬ್ಬ ಇನ್ನಿಂಗ್ಸ್ ಒಂದರಲ್ಲಿ ಪಡೆದ ಅತೀ ಹೆಚ್ಚು ವಿಕೆಟ್ ಎಂಬ ಖ್ಯಾತ ಹೊಂದಿದ್ದರು. ಇದೀಗ ಆ ದಾಖಲೆಯನ್ನು ಕಮ್ಮಿನ್ಸ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕಮ್ಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಸಾಧನೆಯನ್ನೂ ಇದೇ ಸಂದರ್ಭದಲ್ಲಿ ಮಾಡಿದರು. ಈ ಮೈಲಿಗಲ್ಲು ತಲುಪಲು ಅವರಿಗೆ 6 ವಿಕೆಟ್‌ಗಳ ಅಗತ್ಯವಿದ್ದು, ಅವರು ಡಬ್ಲ್ಯೂಟಿಸಿ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿಯೇ ಈ ಸಾಧನೆ ಮಾಡಿದರು. ಊಟದ ವಿರಾಮದ ನಂತರ ಪ್ರಾಬಲ್ಯ ಸಾಧಿಸಿದ ಕಮಿನ್ಸ್ ಹರಿಣಗಳನ್ನು ಕಾಡಿದರು. ಅವರ ಅದ್ಭುತ ಸ್ಪೆಲ್‌ನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್‌ಗಳ ಮುನ್ನಡೆ ಸಾಧಿಸಿತು.
June 12, 2025 7:00 PM IST