ಮಹತ್ವದ ಪಂದ್ಯದಲ್ಲಿ ಐತಿಹಾಸಿಕ ದಾಖಲೆ
ಈ ಪಂದ್ಯದಲ್ಲಿ ಒಂದು ವಿಶೇಷ ದಾಖಲೆಯೂ ಸೃಷ್ಟಿಯಾಯಿತು. ಎರಡೂ ತಂಡಗಳ ಮೊದಲ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ದಕ್ಷಿಣ ಆಫ್ರಿಕಾದ ಐಡನ್ ಮಾರ್ಕ್ರಮ್ ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಖವಾಜಾ 20 ಎಸೆತಗಳನ್ನು ಎದುರಿಸಿದರೆ, ಮಾರ್ಕ್ರಮ್ 6 ಎಸೆತಗಳನ್ನು ಆಡಿದರು. ಇಂಗ್ಲೆಂಡ್ ನೆಲದಲ್ಲಿ 1880ರಿಂದ ಟೆಸ್ಟ್ ಕ್ರಿಕೆಟ್ ಆಡಲಾಗುತ್ತಿದ್ದರೂ, 561 ಟೆಸ್ಟ್ ಪಂದ್ಯಗಳ ನಂತರ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ.
ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಇದು ಮೊದಲೇನಲ್ಲ. ಒಟ್ಟಾರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಘಟನೆ 10ನೇ ಬಾರಿಗೆ ಸಂಭವಿಸಿದೆ, ಇದರಲ್ಲಿ ಆಸ್ಟ್ರೇಲಿಯಾ ತಂಡವು ಒಟ್ಟು 6 ಬಾರಿ, ಮತ್ತು ಕಳೆದ 4 ಸಂದರ್ಭಗಳಲ್ಲಿ ಈ ದಾಖಲೆಯಲ್ಲಿ ಒಂದು ತಂಡವಾಗಿ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಈ 10 ಸಂದರ್ಭಗಳಲ್ಲಿ 3 ಬಾರಿ ಎದುರಾಳಿಗಳನ್ನ ಡಕ್ ಔಟ್ ಮಾಡಿದ್ದಾರೆ.
ಈ ದಾಖಲೆಯ ಇತಿಹಾಸ
ಈ ರೀತಿಯ ಘಟನೆ ಮೊದಲ ಬಾರಿಗೆ 1977ರಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಮೆಲ್ಬರ್ನ್ ಟೆಸ್ಟ್‌ನಲ್ಲಿ ನಡೆದಿತ್ತು. ಆಗ ಸುನಿಲ್ ಗವಾಸ್ಕರ್ (ಭಾರತ) ಮತ್ತು ಜಾನ್ ಡೈಸನ್ (ಆಸ್ಟ್ರೇಲಿಯಾ) ಶೂನ್ಯಕ್ಕೆ ಔಟಾಗಿದ್ದರು. ಟೆಸ್ಟ್ ಕ್ರಿಕೆಟ್‌ನ ಮೊದಲ 100 ವರ್ಷಗಳಲ್ಲಿ (1877-1977) ಇಂತಹ ಘಟನೆ ಎಂದೂ ನಡೆದಿರಿಲಿಲ್ಲ. 1977ರ ನಂತರ 10 ಬಾರಿ ಈ ಅಪರೂದ ಕ್ಷಣಕ್ಕೆ ಟೆಸ್ಟ್ ಕ್ರಿಕೆಟ್ ಸಾಕ್ಷಿಯಾಗಿದೆ.
ಒಂದೇ ಪಂದ್ಯದಲ್ಲಿ ಡಕ್ ಔಟ್ ಆದ ಎದುರಾಳಿ ತಂಡಗಳ ಆರಂಭಿಕರ ಪಟ್ಟಿ
1977: ಸುನಿಲ್ ಗವಾಸ್ಕರ್ ಮತ್ತು ಜಾನ್ ಡೈಸನ್ (ಭಾರತ vs ಆಸ್ಟ್ರೇಲಿಯಾ, ಮೆಲ್ಬರ್ನ್)
1987: ಕ್ರಿಸ್ ಶ್ರೀಕಾಂತ್ ಮತ್ತು ಗಾರ್ಡನ್ ಗ್ರೀನಿಡ್ಜ್ (ಭಾರತ vs ವೆಸ್ಟ್ ಇಂಡೀಸ್, ದೆಹಲಿ)
1997: ಗ್ಯಾರಿ ಕರ್ಸ್ಟನ್ ಮತ್ತು ಮ್ಯಾಥ್ಯೂ ಹೇಡನ್ (ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ, ಗ್ಕೆರ್ಬೆರ್ಹಾ)
2000: ಆಡ್ರಿಯನ್ ಗ್ರಿಫಿತ್ ಮತ್ತು ನೀಲ್ ಜಾನ್ಸನ್ (ವೆಸ್ಟ್ ಇಂಡೀಸ್ vs ಜಿಂಬಾಬ್ವೆ, ಪೋರ್ಟ್ ಆಫ್ ಸ್ಪೇನ್)
2004: ಹನ್ನಾನ್ ಸರ್ಕಾರ್ ಮತ್ತು ಡ್ವೇನ್ ಸ್ಮಿತ್ (ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ , ಸೇಂಟ್ ಲೂಸಿಯಾ)
2015: ಆಲಾಸ್ಟೇರ್ ಕುಕ್ ಮತ್ತು ಸ್ಟಿಯಾನ್ ವಾನ್ ಜೈಲ್ ( ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಡರ್ಬನ್)
2016: ದಿಮುತ್ ಕರುಣಾರತ್ನೆ ಮತ್ತು ಜೋ ಬರ್ನ್ಸ್ (ಶ್ರೀಲಂಕಾ vs ಆಸ್ಟ್ರೇಲಿಯಾ, ಗಾಲೆ)
2020: ಜೋ ಬರ್ನ್ಸ್ ಮತ್ತು ಮಯಾಂಕ್ ಅಗರ್ವಾಲ್ (ಆಸ್ಟ್ರೇಲಿಯಾ vs ಭಾರತ, ಮೆಲ್ಬರ್ನ್)
2022: ಡೇವಿಡ್ ವಾರ್ನರ್ ಮತ್ತು ರೋರಿ ಬರ್ನ್ಸ್ (ಆಸ್ಟ್ರೇಲಿಯಾ vs ಇಂಗ್ಲೆಂಡ್, ಹೋಬಾರ್ಟ್)
2025: ಉಸ್ಮಾನ್ ಖವಾಜಾ ಮತ್ತು ಐಡನ್ ಮಾರ್ಕ್ರಮ್ (ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಲಾರ್ಡ್ಸ್)
ಪಂದ್ಯದ ವಿವರ
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಸ್ಟೀವ್ ಸ್ಮಿತ್ (66 ರನ್) ಮತ್ತು ಬ್ಯೂ ವೆಬ್‌ಸ್ಟರ್ (72 ರನ್) ಅರ್ಧಶತಕ ಗಳಿಸಿದರು. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ 5 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ಐಡನ್ ಮಾರ್ಕ್ರಮ್ (0) ಮತ್ತು ರಯಾನ್ ರಿಕಲ್ಟನ್ (16) ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಇದಾದ ನಂತರ, ಪ್ಯಾಟ್ ಕಮಿನ್ಸ್ ವಿಯಾನ್ ಮುಲ್ಡರ್‌ರನ್ನು ಮತ್ತು ಜೋಶ್ ಹೇಜಲ್‌ವುಡ್ ಟ್ರಿಸ್ಟನ್ ಸ್ಟಬ್ಸ್‌ರನ್ನು ಔಟ್ ಮಾಡಿದರು. ದಿನದ ಕೊನೆಗೆ ದಕ್ಷಿಣ ಆಫ್ರಿಕಾ 43 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.
June 12, 2025 4:59 PM IST