Last Updated:
ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್ ಸ್ಮಿತ್ 112 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 66 ರನ್ ಗಳಿಸುವ ಮೂಲಕ ಸ್ಮಿತ್ ಹಲವಾರು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಲಾರ್ಡ್ಸ್‌ನಲ್ಲಿ (Lords) ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Final) ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ (Steve Smith) ಅರ್ಧಶತಕದೊಂದಿಗೆ ಮಿಂಚಿದರು. ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್ ತಂಡಕ್ಕೆ ವೆಬ್ ಸ್ಟರ್ ಜೊತೆಗೂಡಿದ ಸ್ಮಿತ್ ಆಘಾತದಿಂದ ಪಾರು ಮಾಡಿದರು.ಇವರಿಬ್ಬರು ಎಚ್ಚರಿಕೆಯಿಂದ ಆಟವಾಡಿ ಸ್ಕೋರ್‌ಬೋರ್ಡ್ ಅನ್ನು ಮುಂದಕ್ಕೆ ಕೊಂಡೊಯ್ದರು. ಅವರು 112 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 66 ರನ್ ಗಳಿಸಿ ಔಟಾದರು. ಈ ಆಟದ ಮೂಲಕ ಸ್ಮಿತ್ ಹಲವಾರು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸ್ಮಿತ್ ಇತಿಹಾಸ ನಿರ್ಮಿಸಿದರು
ಸ್ಮಿತ್ ಇಂಗ್ಲಿಷ್ ನೆಲದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇಲ್ಲಿಯವರೆಗೆ, ಸ್ಮಿತ್ ಇಂಗ್ಲೆಂಡ್‌ನಲ್ಲಿ 18 ಬಾರಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ದಂತಕಥೆ ಅಲನ್ ಬಾರ್ಡರ್ (17 ವರ್ಷ) ಹೆಸರಿನಲ್ಲಿತ್ತು. ಇತ್ತೀಚಿನ ಪಂದ್ಯದೊಂದಿಗೆ ಸ್ಮಿತ್ ಬಾರ್ಡರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದರು.
ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳು
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)-18
ಅಲನ್ ಬಾರ್ಡರ್ (ಆಸ್ಟ್ರೇಲಿಯಾ)- 17
ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)- 17
ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) – 14
ಗ್ಯಾರಿ ಸೋಬರ್ಸ್ (ವೆಸ್ಟ್ ಇಂಡೀಸ್) – 14
ಅದೇ ರೀತಿ, ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾದರು. ಸ್ಮಿತ್ ಇದುವರೆಗೆ ಲಾರ್ಡ್ಸ್‌ನಲ್ಲಿ 591 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ವಾರೆನ್ ಬಿಯರ್ಡ್ಸ್ಲೆ (575 ರನ್) ಹೆಸರಿನಲ್ಲಿತ್ತು. ಬಿಯರ್ಡ್ಸ್ಲೆ 1909-1926ರ ಅವಧಿಯಲ್ಲಿ ಈ ಸಾಧನೆ ಮಾಡಿದ್ದರು. ಸ್ಮಿತ್ ತಮ್ಮ ಇತ್ತೀಚಿನ ಇನ್ನಿಂಗ್ಸ್‌ನೊಂದಿಗೆ ಬಿಯರ್ಡ್ಸ್ಲಿಯವರ 99 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳು
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 591
ವಾರೆನ್ ಬಿಯರ್ಡ್ಸ್ಲೆ (ಆಸ್ಟ್ರೇಲಿಯಾ) – 575
ಗ್ಯಾರಿಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್) – 571
ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) – 551
ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) – 512
ದಿಲೀಪ್ ವೆಂಗ್‌ಸರ್ಕರ್ (ಭಾರತ) – 508
ಅಲನ್ ಬಾರ್ಡರ್ (ಆಸ್ಟ್ರೇಲಿಯಾ) – 503
June 11, 2025 10:15 PM IST
WTC Final: ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅರ್ಧಶತಕ! 99 ವರ್ಷಗಳ ಹಿಂದಿನ ವಿಶ್ವ ದಾಖಲೆ ಬ್ರೇಕ್ ಮಾಡಿದ ಸ್ಟೀವ್ ಸ್ಮಿತ್!