Last Updated:
WTC ಫೈನಲ್ ಪಂದ್ಯದಲ್ಲಿ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 212 ರನ್ಗಳಿಗೆ ಸೀಮಿತವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ಕೂಡ ಆಸೀಸ್ ಬೌಲರ್ಗಳ ದಾಳಿಗೆ ಉತ್ತರಿಸಲಾಗದೇ ಕೇವಲ 138ಕ್ಕೆ ಆಲೌಟ್ ಆಗಿದೆ.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lords Stadium) ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (South Africa vs South Africa) ನಡುವೆ 2025 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ನಡೆಯುತ್ತಿದ್ದು ಬೌಲರ್ಗಳು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದಾರೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕಿ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಲು ಬಂದ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 212 ರನ್ಗಳಿಗೆ ಸೀಮಿತವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ಕೂಡ ಆಸೀಸ್ ಬೌಲರ್ಗಳ ದಾಳಿಗೆ ಉತ್ತರಿಸಲಾಗದೇ ಕೇವಲ 138ಕ್ಕೆ ಆಲೌಟ್ ಆಗಿದೆ.
100ರ ಗಡಿ ದಾಟಿಸಿದ ಬವುಮಾ- ಬ್ಯಾಡಿಂಗ್ಹ್ಯಾಮ್
ಆಸ್ಟ್ರೇಲಿಯಾದ 212 ರನ್ಗಳಿಗೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಹರಿಣಪಡೆ ಮೊದಲ ದಿನದ ಆಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿತ್ತು. ನಾಯಕ ಟೆಂಬಾ ಬವುಮಾ 3 ರನ್ ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ 8 ರನ್ ಗಳಿಸಿದ್ದರು. 2ನೇ ದಿನ ಅವರಿಬ್ಬರು 51 ರನ್ಗಳಿಸಿದರು. ಒಟ್ಟಾರೆ 5ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದರು. ಇದು ಇಡೀ ಇನ್ನಿಂಗ್ಸ್ನಲ್ಲಿ ಏಕೈಕ ಅರ್ಧಶತಕದ ಆಟವಾಯಿತು. ಬವೂಮ 84 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 36 ರನ್ಗಳಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಕಮಿನ್ಸ್ 6 ವಿಕೆಟ್
ನಾಯಕ ವಿಕೆಟ್ ಕಳೆದುಕೊಂಡ ನಂತರ ಹರಿಣ ಪಡೆ ದಿಢೀರ್ ಕುಸಿತ ಕಂಡಿತು. ವಿಕೆಟ್ ಕೀಪರ್ ಕೈಲ್ ವರೇನ್ ಕೇವಲ 13 ರನ್ಗಳಿಸಿ ಕಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಮಾರ್ಕೊ ಜಾನ್ಸನ್(0) ಅದೇ ಓವರ್ನಲ್ಲಿ ಔಟಾಗುವ ಮೂಲಕ ಕಮಿನ್ಸ್ಗೆ 5ನೇ ಬಲಿಯಾದರು. ನಂತರ 111 ಎಸೆತಗಳಲ್ಲಿ 6 ಬೌಂಡರಿ ಸಹಿತ 45 ರನ್ಗಳಿಸಿದ ಡೇವಿಡ್ ಬೆಡಿಂಗ್ಹ್ಯಾಮ್ ಕೂಡ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಔಟ್ ಆದರು. ಕೇಶವ್ ಮಹಾರಾಜ್ 7 ರನ್ಗಳಿಸಿ ರನ್ ಔಟ್ ಆದರೆ, ರಬಾಡ ಕೇವಲ 1 ರನ್ಗಳಿಸಿ ಔಟ್ ಆದರು.
ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 18.1 ಓವರ್ಗಳಲ್ಲಿ 28 ರನ್ ನೀಡಿ 6 ವಿಕೆಟ್ ಉಡಾಯಿಸಿದರೆ, ಮಿಚೆಲ್ ಸ್ಟಾರ್ಕ್ 41ಕ್ಕೆ 2 ವಿಕೆಟ್ ಪಡೆದು ನಾಯಕನಿಗೆ ಸಾಥ್ ನೀಡಿದರು. ಹ್ಯಾಜಲ್ವುಡ್ 27ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಆಸೀಸ್ಗೆ ಸ್ಮಿತ್-ವೆಬ್ಸ್ಟರ್ ಆಸರೆ
ಇದಕ್ಕೂ ಮುನ್ನ ಮೊದಲ ದಿನ ಆಸ್ಟ್ರೇಲಿಯಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 212ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ದಿಗ್ಗಜ ಸ್ಟೀವ್ ಸ್ಮಿತ್ 112 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 66 ರನ್ಗಳಿಸಿದರೆ, ವೆಬ್ಸ್ಟರ್ 92 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 72 ರನ್ಗಳಿಸಿ ತಂಡ 200ರ ಗಡಿ ದಾಟಲು ನೆರವಾಗಿದ್ದರು.
ಇವರಿಬ್ಬರನ್ನ ಹೊರೆತುಪಡಿಸಿ ಬೇರೆ ಯಾವ ಬ್ಯಾಟರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಲೆಕ್ಸ್ ಕ್ಯಾರಿ 31 ಎಸೆತಗಳಲ್ಲಿ 23, ಟ್ರಾವಿಸ್ ಹೆಡ್ 13 ಎಸೆತಗಳಲ್ಲಿ 11, ಮಾರ್ನಸ್ ಲಾಬುಶೇನ್ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಕಮಿನ್ಸ್ (1), ಖವಾಜ(0),ಕ್ಯಾಮರೂನ್ ಗ್ರೀನ್ (4), ಮಿಚೆಲ್ ಸ್ಟಾರ್ಕ್(1), ನೇಥನ್ ಲಿಯಾನ್(0) ಒಂದಕಿಗೆ ವಿಕೆಟ್ ಒಪ್ಪಿಸಿದರು.
June 12, 2025 7:20 PM IST