Yakshagana: ಯಕ್ಷಗಾನ ಸುಲಭ ಅನ್ಕೊಂಡ್ರಾ? ಇವೆಲ್ಲಾ ಆಭೂಷಣ ಹೊತ್ತು ಕೈ ಕಾಲು ಆಡಿಸುವುದೇ ಕಷ್ಟ, ಅದರಲ್ಲಿ ಕುಣಿಯೋದು ಸಾಹಸ! | Yakshagana Ornaments showcase the beauty of the art | ದಕ್ಷಿಣ ಕನ್ನಡ

Yakshagana: ಯಕ್ಷಗಾನ ಸುಲಭ ಅನ್ಕೊಂಡ್ರಾ? ಇವೆಲ್ಲಾ ಆಭೂಷಣ ಹೊತ್ತು ಕೈ ಕಾಲು ಆಡಿಸುವುದೇ ಕಷ್ಟ, ಅದರಲ್ಲಿ ಕುಣಿಯೋದು ಸಾಹಸ! | Yakshagana Ornaments showcase the beauty of the art | ದಕ್ಷಿಣ ಕನ್ನಡ

Last Updated:

ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡು ಪ್ರಕಾರಗಳು, ಉಡುಪಿಯ ಬಡಗುತಿಟ್ಟು ಮತ್ತು ದಕ್ಷಿಣಕನ್ನಡದ ತೆಂಕುತಿಟ್ಟು ಫೇಮಸ್. ವೇಷಭೂಷಣ, ಕಿರೀಟ, ಪಗಡೆ, ಕಸೇ ಸೀರೆ, ವಾದ್ಯಗಳು ಪ್ರಮುಖ.

ಯಕ್ಷಗಾನ
ಯಕ್ಷಗಾನ

ಗಂಡುಕಲೆ ಯಕ್ಷಗಾನವನ್ನು ಒಮ್ಮೆ ನೋಡಿದಲ್ಲಿ, ಮತ್ತೊಂದು ಬಾರಿ ನೋಡಬೇಕು ಎನ್ನುವ ಆಸೆ ಮೂಡೋದು ಸಾಮಾನ್ಯ. ಯಕ್ಷಗಾನದಲ್ಲಿ ಹಾಡುಗಾರಿಕೆ, ವೇಷಭೂಷಣಗಳು, ನಾಟ್ಯ, ಸಂಭಾಷಣೆ, ಗಾಂಭೀರ್ಯ ಹೀಗೆ ಎಲ್ಲವೂ ಯಕ್ಷಗಾನದಲ್ಲಿ ಗಣನೆಗೆ ಬರುತ್ತವೆ. ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಎನದನುವ ಎರಡು‌ ಪ್ರಾಕಾರಗಳಿವೆ. ಬಡಗುತಿಟ್ಟು ಯಕ್ಷಗಾನ ಉಡುಪಿ ಜಿಲ್ಲೆ ಮತ್ತು‌ ಉತ್ತರಕನ್ನಡ ಜಿಲ್ಲೆಯ ಕಡೆಗಳಲ್ಲಿ ಫೇಮಸ್ ಆಗಿದ್ದರೆ, ತೆಂಕುತಿಟ್ಟು ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಫೇಮಸ್ ಆಗಿದೆ. ಎರಡೂ ತಿಟ್ಟುಗಳ ವೇಷಭೂಷಣ, ವಾದ್ಯಗಳು, ಭಾಗವತಿಕೆ ಎಲ್ಲದರಲ್ಲೂ ಕೊಂಚ ಭಿನ್ನತೆಯಿದ್ದು ಆಯಾಯ ಭಾಗದ ಜನರು ಎರಡೂ ಪ್ರಾಕಾರಗಳನ್ನು ಮೆಚ್ಚಿಕೊಳ್ಳುತ್ತಾರೆ, ಅರಗಿಸಿಕೊಳ್ಳುತ್ತಾರೆ.

ಒಂದು ಯಕ್ಷಗಾನ ಮೇಳ ಅಂದರೆ ಅದರಲ್ಲಿ ಕೆಲವೊಂದು ಪರಿಕರಗಳು ಇರಲೇ ಬೇಕಾಗುತ್ತದೆ. ಅಂತಹುದರಲ್ಲಿ ವೇಷಭೂಷಣಗಳೂ ಒಂದಾಗಿದೆ. ಈ ವೇಷಭೂಷಣಗಳಲ್ಲಿ ಹೆಚ್ಚು ಆಕರ್ಷಣೆಯ ಕೇಂದ್ರಬಿಂದು ಕಿರೀಟಗಳಾಗಿದ್ದು, ಆಯಾಯ‌ ಪಾತ್ರಕ್ಕೆ ಒಂದೊಂದು ತರಹದ ಕಿರೀಟಗಳಿವೆ. ದೇವತೆಗಳ ಪಾತ್ರಕ್ಕೆ ಒಂದು ರೀತಿಯ ಕಿರೀಟ, ಪುಂಡು ವೇಷಗಳಿಗೆ ಒಂದು ರೀತಿಯ ಕಿರೀಟ, ಸ್ತ್ರೀ‌ ವೇಷಕ್ಕೆ ಒಂದು ರೀತಿಯ ಕಿರೀಟ ಮತ್ತು ರಾಕ್ಷಸ ಪಾತ್ರಧಾರಿಗಳಿಗೆ ಒಂದು ರೀತಿಯ ಕಿರೀಟಗಳಿರುತ್ತವೆ.

ಯಕ್ಷಗಾನದಲ್ಲಿ ಸಂಗೀತ ವಾದ್ಯಗಳು (ಚಂಡೆ, ಮದ್ದಳೆ, ಹಾರ್ಮೋನಿಯಂ, ತಾಳ, ಕೊಳಲು), ವೇಷಭೂಷಣಗಳು (ದೊಡ್ಡ ಕಿರೀಟ, ಬಣ್ಣದ ಮುಖ, ಕವಚ, ಭುಜಕೀರ್ತಿ, ಗೆಜ್ಜೆ), ಮತ್ತು ಆಯುಧಗಳು (ಕತ್ತಿ, ಗದೆ, ಗುರಾಣಿ) ಮುಂತಾದ ಪರಿಕರಗಳನ್ನು ಬಳಸಲಾಗುತ್ತದೆ. ಈ ಪರಿಕರಗಳು ಕಲಾವಿದರ ಪಾತ್ರವನ್ನು ಮತ್ತು ಪ್ರದರ್ಶನದ ಸೊಬಗನ್ನು ಹೆಚ್ಚಿಸುತ್ತವೆ.

ಕಸೇ ಸೀರೆ” (ಸೀರೆ) ಯಕ್ಷಗಾನ ಕಲಾವಿದರು ತಮ್ಮ ಪ್ರದರ್ಶನದ ಸಮಯದಲ್ಲಿ ಧರಿಸುವ ಸಾಂಪ್ರದಾಯಿಕ ಉಡುಗೆಯಾಗಿದೆ. ಸೀರೆಯ ಉದ್ದ 8 ರಿಂದ 9 ಗಜಗಳವರೆಗೆ ಮತ್ತು ಅಗಲ 50 ಇಂಚುಗಳಾಗಿದ್ದು, ಇದನ್ನು ಮಹಿಳಾ ಪಾತ್ರಗಳಿಗಾಗಿ ತಯಾರಿಸಲಾಗುತ್ತದೆ. ಅದೇ ಸೀರೆಯನ್ನು ಪುರುಷ ಪಾತ್ರಗಳಿಗೂ ಅಂದರೆ ರಾಜ, ರಾಕ್ಷಸ ಮತ್ತು ನಾಯಕ ಪಾತ್ರಗಳಿಗೂ ಧೋತಿಯಂತೆ ಧರಿಸಬಹುದು. ಸಾಂಪ್ರದಾಯಿಕವಾಗಿ ಕಿನಾರ ಎಂದು ಕರೆಯಲ್ಪಡುವ ಬಾರ್ಡರ್ ಅನ್ನು 720 ದಾರಗಳ ಎಣಿಕೆಯೊಂದಿಗೆ ನೇಯಲಾಗುತ್ತದೆ.

ದೊಡ್ಡ ಗಾತ್ರದ ಕಿರೀಟಗಳು. ಹಾಗೂ ವಿಶೇಷವಾದ ಪಗಡೆ ಶಿರಸ್ತ್ರಾಣ ಇದು ಕಪ್ಪು ರಂಗಿರುವ ಮಿಂಚುವ ಸಣ್ಣ ರಿಬ್ಬನ್‌ಗಳಿಂದ ಅಲಂಕರಿಸಲ್ಪಟ್ಟ ವಿಶೇಷ ರೀತಿಯ ಶಿರಸ್ತ್ರಾಣವಾಗಿದೆ. ಪುರುಷರು ಪಗಡೆ ಧರಿಸುತ್ತಾರೆ, ಇದರಲ್ಲಿ ಮಹಿಳೆಯರು ಪಗಡೆಯ ಸಣ್ಣ ಆವೃತ್ತಿಯನ್ನು ಧರಿಸುತ್ತಾರೆ. ಮುಖದ ಸುತ್ತಲೂ ಹಲವು ಬಣ್ಣಗಳಿಂದ ಕೂಡಿದ ವೇಷವನ್ನೂ ಹಾಗೆಯೇ ಕವಚ ಮತ್ತು ಎದೆಹಾರವನ್ನು ಎದೆಯ ಮೇಲೆ ಧರಿಸಲಾಗುತ್ತದೆ, ಇದು ಎದೆಯಿಂದ ಹೊಟ್ಟೆವರೆಗೆ ಆವರಿಸುತ್ತದೆ, ಸಾಮಾನ್ಯವಾಗಿ ಕಟ್ಟಿಗೆಯಿಂದ ಇದನ್ನು ತಯಾರಿಸುತ್ತಾರೆ ಮತ್ತು ಚಿನ್ನದ ಹಾಳೆಯಿಂದ ಅಥವಾ ಚಿನ್ನದ ಬಣ್ಣದ ಹಾಳೆಯಿಂದ ಆವೃತ್ತವಾಗಿರುತ್ತದೆ.

ಭುಜಕೀರ್ತಿ ಇದನ್ನು ಭುಜಗಳಿಗೆ ಹೆಚ್ಚು ಆಕರ್ಷಕ ನೋಟ ನೀಡಲು ಧರಿಸಲಾಗುತ್ತದೆ. ಇವುಗಳನ್ನು ಚಿನ್ನದ ಹಾಳೆ ಲೇಪಿತ ಶಂಕುವಿನಾಕಾರದ ಆಕಾರದ ಮಣಿಗಳಿಂದ ಅಲಂಕರಿಸಲಾಗುತ್ತದೆ ಡಾಬನ್ನಿ ಚಿನ್ನದ ಹಾಳೆಯಿಂದ ಅಲಂಕರಿಸಲಾಗುತ್ತದೆ. ಪುರುಷ ಮತ್ತು ಮಹಿಳಾ ಪಾತ್ರಗಳಿಗೆ ವಿನ್ಯಾಸಗಳು ಮತ್ತು ಗಾತ್ರಗಳು ಬದಲಾಗುತ್ತವೆ. ಕಾಲುಗಳಿಗೆ ಗೆಜ್ಜೆ, ಕೈಗಳಿಗೆ ವಿವಿಧ ರೀತಿಯ ಕೈಪಟ್ಟಿಗಳು ಆಯುಧಗಳಾಗಿ ಕತ್ತಿ,ಗದೆ,ಗುರಾಣಿ (ಸರ್ವೇ ಸಾಮಾನ್ಯ) ಇವೆಲ್ಲಾ ಪರಿಕರಗಳು‌ ಇದ್ದಲ್ಲಿ ಮಾತ್ರವೇ ಯಕ್ಷಗಾನ ಮೇಳವೊಂದು‌ ಪರಿಪೂರ್ಣವಾಗಿ‌ ಇರಲು ಸಾಧ್ಯವಾಗುತ್ತದೆ.