Last Updated:
ಯಕ್ಷಗಾನದ ಪ್ರದರ್ಶನದಲ್ಲಿ ಸಂದೀಪ್ ಕೊಳ್ಯೂರು ದೇವಿ ಪಾತ್ರಧಾರಿಯ ಶಿರದಲ್ಲಿ ಕಾಡುಹಕ್ಕಿ ಕೂತು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಮಂಗಳೂರು: ಯಕ್ಷಗಾನದ (Yakshagana) ಚೆಂಡಿನ ಸದ್ದು, ಭಾಗವತರ ಪದ್ಯ, ಉಯ್ಯಾಲೆಯಲ್ಲಿ ದೇವಿ ಪಾತ್ರಧಾರಿ ತೂಗುತ್ತಿದ್ದರೂ ಕಾಡುಹಕ್ಕಿ ಮಾತ್ರ ಯಾವುದೇ ಗದ್ದಲಕ್ಕೆ ಕ್ಯಾರೇ ಮಾಡದೇ ದೇವಿ ಪಾತ್ರಧಾರಿಯ ಶಿರದಲ್ಲಿ ಕೂತ ವಿಸ್ಮಯಕಾರಿ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ ನಡೆದಿದೆ. ಹಕ್ಕಿಯ (Bird) ವರ್ತನೆ ಜನರಲ್ಲಿ ಆಶ್ಚರ್ಯ (Surprise) ಮೂಡಿಸಿದೆ.
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಜನ ಭಕ್ತಿಭಾವದಿಂದ ನೋಡುತ್ತಾರೆ. ಅದಕ್ಕೆ ಕಾರಣ ಪ್ರಸಂಗದಲ್ಲಿ ದೇವಿಯ ಮಹಾತ್ಮೆ, ದೇವಿ ಅಸುರರನ್ನು ಸಂಹಾರ ಮಾಡಿ ಲೋಕಕಲ್ಯಾಣಕ್ಕಾಗಿ ಹರಸಿದ ಸನ್ನಿವೇಶಗಳು ಕಂಡುಬರುತ್ತದೆ. ದೇವಿ ಮಹಾತ್ಮೆ ಯಲ್ಲಿ ದೇವಿ ಪಾತ್ರವನ್ನು ಮಾಡುವ ಕಲಾವಿದನಿಗೂ ಬಹಳ ಗೌರವವಿದೆ. ಈ ಕಲಾವಿದ ಶುದ್ಧಾಚಾರದಿಂದ ಇದ್ದರೆ ಪಾತ್ರಕ್ಕೆ ಜೀವಕಳೆ ಬರುತ್ತದೆ ಅನ್ನೋದು ಜನರ ನಂಬಿಕೆ.
ಮೊಡಂಕಾಪುನಲ್ಲಿ ನಡೆದ ಕಟೀಲು ಅರನೇ ಮೇಳದ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಈ ಘಟನೆಯಾಗಿದೆ. ಸಂದೀಪ್ ಕೊಳ್ಯೂರು ದೇವಿ ಪಾತ್ರ ಮಾಡಿದ ಕಲಾವಿದ.
ದೇವಿ ಶುಂಭಾ- ನಿಷುಂಭ , ಚಂಡ- ಮುಂಡ, ರಕ್ತಬೀಜ ಹಾಗೂ ಇನ್ನಿತರ ಅಸುರರನ್ನು ಕೊಲ್ಲಲು ಕದಂಬ ವನದಲ್ಲಿ ಕೌಶಿಕೆ ರೂಪದಲ್ಲಿ ಉಯ್ಯಾಲೆಯಲ್ಲಿ ಇರುವಾಗಿನ ಸನ್ನಿವೇಶದಲ್ಲಿ ಇರುವಾಗ ಎಲ್ಲಿಂದಲೋ ಹಾರಿಬಂದ ಕಾಡು ಹಕ್ಕಿ ದೇವಿ ಪಾತ್ರಧಾರಿ ಯ ಶಿರದಲ್ಲಿ ಕೂತಿದೆ. ಆಶ್ಚರ್ಯ ಏನಂದ್ರೇ ಯಕ್ಷಗಾನದ ಈ ಸನ್ನಿವೇಶದಲ್ಲೂ ದೇವಿ ಚಿನ್ನಯ್ಯ ಉಯ್ಯಾಲೆಯಲ್ಲಿ ತೂಗುತ್ತಿರುವಾಗ ಕಾಡಿನ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವ ಮರೆತು ಜೊತೆಯಲ್ಲಿ ಇರುತ್ತವೆ ಎಂಬ ಉಲ್ಲೇಖವಿದೆ. ಇದೇ ಸಂದರ್ಭದಲ್ಲಿ ಬಂದ ಕಾಡುಹಕ್ಕಿ ಆಶ್ಚರ್ಯ ಮೂಡಿಸಿದೆ.
Dakshina Kannada,Karnataka
November 26, 2025 6:05 PM IST